ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ENG vs IND: 345 ರನ್‌ಗಳ ಬೃಹತ್‌ ಮುನ್ನಡೆ ಸಾಧಿಸಿದ ಇಂಗ್ಲೆಂಡ್‌

Last Updated 27 ಆಗಸ್ಟ್ 2021, 3:23 IST
ಅಕ್ಷರ ಗಾತ್ರ

ಲೀಡ್ಸ್‌: ನಾಯಕನ ಆಟ ಮತ್ತು ಉಳಿದ ಮೂವರು ಬ್ಯಾಟ್ಸ್‌ಮನ್‌ಗಳ ಅರ್ಧಶತಕಗಳ ಆಟದ ನೆರವಿನಿಂದ ಇಂಗ್ಲೆಂಡ್‌ ತಂಡ ಬೃಹತ್‌ ಮೊತ್ತದ ಇನ್ನಿಂಗ್ಸ್‌ ಮುನ್ನಡೆ ಸಾಧಿಸಿದೆ. 129 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 423 ರನ್‌ ಗಳಿಸಿರುವ ಇಂಗ್ಲೆಂಡ್ 345 ರನ್‌ಗಳ ಮುನ್ನಡೆ ಸಾಧಿಸಿದ್ದು, ಇನ್ನಿಂಗ್ಸ್‌ ಗೆಲುವನ್ನು ಎದುರು ನೋಡುತ್ತಿದೆ.

ಇಲ್ಲಿನ ಹೆಡಿಂಗ್ಲೇ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐದು ಪಂದ್ಯಗಳ ಟೆಸ್ಟ್‌ ಕ್ರಿಕೆಟ್‌ ಸರಣಿಯ 3ನೇ ಪಂದ್ಯದ ಎರಡನೇ ದಿನದಾಟದಲ್ಲಿ ನಾಯಕ ಜೋ ರೂಟ್ 121 ರನ್‌ಗಳ ಅಮೋಘ ಪ್ರದರ್ಶನದಿಂದ ಇಂಗ್ಲೆಂಡ್‌ ತಂಡ 129 ಓವರ್‌ಗಳಲ್ಲಿ 8 ವಿಕೆಟ್‌ಗೆ 423 ರನ್‌ಗಳನ್ನು ಗಳಿಸಿ ಬೃಹತ್‌ ಮುನ್ನಡೆ ಸಾಧಿಸಿದೆ.

ಇಂಗ್ಲೆಂಡ್‌ ಪರ ಆರಂಭಿಕ ಬ್ಯಾಟ್ಸ್‌ಮನ್‌ಗಳಾದ ರೋರಿ ಬರ್ನ್ಸ್‌ (60 ರನ್‌) ಮತ್ತು ಹಸೀಬ್‌ ಹಮೀದ್‌ (68 ರನ್‌) ಮೊದಲ ವಿಕೆಟ್‌ಗೆ 135 ರನ್‌ಗಳ ಅದ್ಭುತ ಜೊತೆಯಾಟದೊಂದಿಗೆ ಭದ್ರ ಅಡಿಪಾಯ ಹಾಕಿದರು. ನಂತರ ಕ್ರೀಸ್‌ಗೆ ಬಂದ ಡಾವಿಡ್‌ ಮಲಾನ್‌(70 ರನ್‌) ಕೂಡ ಅರ್ಧಶತಕದ ಅಮೋಘ ಪ್ರದರ್ಶನ ನೀಡಿದರು.

ಪಂದ್ಯದ ಮೂರನೇ ದಿನ ಇಂಗ್ಲೆಂಡ್‌ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡುವ ಸಾಧ್ಯತೆ ಇದೆ. ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 78 ರನ್‌ ಗಳಿಗೆ ಸರ್ವ ಪತನ ಕಂಡಿದ್ದ ಭಾರತ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ ದೊಡ್ಡ ಮೊತ್ತ ಕಲೆಹಾಕುವ ಅಗತ್ಯವಿದೆ.

ಪಂದ್ಯದ ಸಂಕ್ಷಿಪ್ತ ಸ್ಕೋರ್‌
ಭಾರತ ಮೊದಲ ಇನ್ನಿಂಗ್ಸ್‌: 78/10 (40.4 ಓವರ್‌)
ಭಾರತದ ಪರ ರೋಹಿತ್‌ ಶರ್ಮಾ 19, ಅಜಿಂಕ್ಯ ರಹಾನೆ 18
ಇಂಗ್ಲೆಂಡ್‌ ಪರ ಜೇಮ್ಸ್‌ ಆಂಡರ್ಸನ್‌ 6ಕ್ಕೆ 3, ಕ್ರೇಗ್‌ ಓವರ್ಟರ್ನ್‌ 14ಕ್ಕೆ 3, ಓಲ್ಲೀ ರಾಬಿನ್ಸನ್‌ 16ಕ್ಕೆ 2, ಟಾಮ್‌ ಕರ್ರನ್‌ 27ಕ್ಕೆ 2

ಇಂಗ್ಲೆಂಡ್‌ ಮೊದಲ ಇನ್ನಿಂಗ್ಸ್‌: 423/8 (129 ಓವರ್‌)
ಇಂಗ್ಲೆಂಡ್‌ ಪರ ರೋರಿ ಬರ್ನ್ಸ್‌ 61, ಹಸೀಬ್‌ ಹಮೀದ್‌ 68, ಜೋ ರೂಟ್‌ 121, ಡಾವಿಡ್‌ ಮಲಾನ್‌ 70
ಭಾರತದ ಪರ ಮೊಹಮ್ಮದ್‌ ಶಮಿ 87ಕ್ಕೆ 3, ಮೊಹಮ್ಮದ್‌ ಸಿರಾಜ್‌ 82ಕ್ಕೆ 2, ರವೀಂದ್ರ ಜಡೇಜಾ 88ಕ್ಕೆ 2
(*ಎರಡನೇ ದಿನದಾಟದ ಅಂತ್ಯಕ್ಕೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT