ಮಂಗಳವಾರ, ಮಾರ್ಚ್ 28, 2023
33 °C

IND vs ENG: ಇಂಗ್ಲೆಂಡ್ ಪರದಾಟ; ಭಾರತದ ಗೆಲುವಿಗೆ ಬೇಕು 4 ವಿಕೆಟ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಂಡನ್: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ನಾಲ್ಕನೇ ಟೆಸ್ಟ್ ಪಂದ್ಯದ ಐದನೇ ದಿನದಾಟದಲ್ಲಿ ಭಾರತೀಯ ಬೌಲರ್‌ಗಳು ಮಿಂಚಿನ ದಾಳಿ ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ. 

ಇದರೊಂದಿಗೆ ಇಂಗ್ಲೆಂಡ್ ಸೋಲು ತಪ್ಪಿಸಿಕೊಳ್ಳಲು ಪರದಾಡುತ್ತಿದೆ. ಅತ್ತ ಭಾರತದ ಗೆಲುವಿಗೆ ಇನ್ನು ನಾಲ್ಕು ವಿಕೆಟ್‌ಗಳ ಅಗತ್ಯವಿದೆ. 

ತಾಜಾ ವರದಿಗಳ ವೇಳೆಗೆ ಆಂಗ್ಲರ ಪಡೆ 73 ಓವರ್‌ಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 150 ರನ್ ಗಳಿಸಿದೆ. ದಿನದಾಟ ಕೊನೆಗೊಳ್ಳಲು ಇನ್ನು 48 ಓವರ್‌ಗಳು ಬಾಕಿ ಉಳಿದಿದ್ದು, ಗೆಲುವಿಗೆ ಇನ್ನೂ 218 ರನ್ ಗಳಿಸಬೇಕಿದೆ.  

368 ರನ್‌ಗಳ ಸವಾಲಿನ ಗುರಿ ಬೆನ್ನಟ್ಟಿದ್ದ ಇಂಗ್ಲೆಂಡ್, ನಾಲ್ಕನೇ ದಿನದಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 77 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು. 

ಅಂತಿಮ ದಿನದ ಮೊದಲ ಅವಧಿಯಲ್ಲೂ ಉತ್ತಮ ಆಟವನ್ನು ಪ್ರದರ್ಶಿಸಿತ್ತು. ಆದರೆ ಭೋಜನ ವಿರಾಮದ ಬಳಿಕ ಭಾರತೀಯ ಬೌಲರ್‌ಗಳ ನಿಖರ ದಾಳಿಗೆ ತಬ್ಬಿಬ್ಬಾದರು. ಪರಿಣಾಮ 147 ರನ್ ಗಳಿಸುವಷ್ಟರಲ್ಲಿ ಆರು ವಿಕೆಟ್‌ಗಳನ್ನು ಕಳೆದುಕೊಂಡಿದೆ. 

ಆರಂಭಿಕರಾದ ರೋರಿ ಬರ್ನ್ಸ್ (50) ಹಾಗೂ ಹಸೀಬ್ ಹಮೀದ್ (63) ಅರ್ಧಶತಕಗಳ ಸಾಧನೆ ಮಾಡಿದರು. ಡೇವೀಡ್ ಮಲನ್ (5), ಒಲಿ ಪಾಪ್ (2), ಜಾನಿ ಬೆಸ್ಟೊ (0) ಹಾಗೂ ಮೊಯಿನ್ ಅಲಿ (0) ನಿರಾಸೆ ಮೂಡಿಸಿದರು. 

ಈಗ ಕ್ರೀಸಿನಲ್ಲಿರುವ ನಾಯಕ ಜೋ ರೂಟ್ (19*) ಹಾಗೂ ಕ್ರಿಸ್ ವೋಕ್ಸ್ (2*) ಹೋರಾಟ ಮುಂದುವರಿಸಿದ್ದಾರೆ. ಭಾರತದ ಪರ ಜಸ್‌ಪ್ರೀತ್ ಬೂಮ್ರಾ ಹಾಗೂ ರವೀಂದ್ರ ಜಡೇಜ ತಲಾ ಎರಡು ಮತ್ತು ಶಾರ್ದೂಲ್ ಠಾಕೂರ್ ಒಂದು ವಿಕೆಟ್ ಗಳಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು