ಗುರುವಾರ , ಮೇ 13, 2021
22 °C

IND vs ENG: ಅಂತಿಮ ಏಕದಿನ; ನಟರಾಜನ್ ಇನ್; ಟಾಸ್ ಗೆದ್ದ ಇಂಗ್ಲೆಂಡ್ ಫೀಲ್ಡಿಂಗ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪುಣೆ: ಆತಿಥೇಯ ಭಾರತ ವಿರುದ್ಧ ನಡೆಯುತ್ತಿರುವ ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲೂ ಟಾಸ್ ಗೆದ್ದಿರುವ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್, ಮೊದಲು ಫೀಲ್ಡಿಂಗ್ ಆಯ್ದುಕೊಂಡಿದ್ದಾರೆ. 

ಇದರೊಂದಿಗೆ ಸತತ ಮೂರನೇ ಪಂದ್ಯದಲ್ಲೂ ವಿರಾಟ್ ಕೊಹ್ಲಿಗೆ ಟಾಸ್ ನಷ್ಟವಾಗಿದೆ.  1–1ರಿಂದ ಸಮಬಲವಾಗಿರುವ ಈ ಸರಣಿಯನ್ನು ಗೆಲ್ಲಲು ಕೊನೆಯ ಪಂದ್ಯವನ್ನು ಜಯಿಸುವ ಛಲದಲ್ಲಿ ಉಭಯ ತಂಡಗಳೂ ಇವೆ.

ಇದನ್ನೂ ಓದಿ: 

ನಟರಾಜನ್ ಇನ್...
ಭಾರತ ತಂಡದಲ್ಲಿ ಒಂದು ಮಹತ್ವದ ಬದಲಾವಣೆ ತರಲಾಗಿದ್ದು, ಕಳಪೆ ಫಾರ್ಮ್‌ನಲ್ಲಿರುವ ಕುಲ್‌ದೀಪ್ ಯಾದವ್ ಸ್ಥಾನಕ್ಕೆ ತಂಗರಸು ನಟರಾಜನ್ ಅವರಿಗೆ ಅವಕಾಶ ಕಲ್ಪಿಸಲಾಗಿದೆ. ಅತ್ತ ಇಂಗ್ಲೆಂಡ್ ತಂಡದಲ್ಲೂ ಒಂದು ಬದಲಾವಣೆ ತರಲಾಗಿದ್ದು, ಟಾಮ್ ಕರನ್ ಸ್ಥಾನಕ್ಕೆ ಮಾರ್ಕ್ ವುಡ್ ಆಯ್ಕೆಯಾಗಿದ್ದಾರೆ. 
 

ಪ್ಲೇಯಿಂಗ್ ಇಲೆವೆನ್ ಇಂತಿದೆ:

 

ಭಾರತ: ರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಕೆ.ಎಲ್. ರಾಹುಲ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ, ಕೃಣಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಪ್ರಸಿದ್ಧಕೃಷ್ಣ, ಶಾರ್ದೂಲ್ ಠಾಕೂರ್,  ಮತ್ತು ಟಿ. ನಟರಾಜನ್

ಇಂಗ್ಲೆಂಡ್: ಜೋಸ್ ಬಟ್ಲರ್ (ನಾಯಕ/ವಿಕೆಟ್‌ಕೀಪರ್), ಜೇಸನ್ ರಾಯ್, ಜಾನಿ ಬೆಸ್ಟೊ, ಬೆನ್ ಸ್ಟೋಕ್ಸ್‌, ಡೇವಿಡ್ ಮಲಾನ್,  ಲಿಯಾಮ್ ಲಿವಿಂಗ್‌ಸ್ಟೋನ್, ಮೊಯಿನ್ ಅಲಿ, ಆದಿಲ್ ರಶೀದ್, ರೀಸ್ ಟಾಪ್ಲೆ ಮತ್ತು ಮಾರ್ಕ್ ವುಡ್. 

ಹೈ ಸ್ಕೋರಿಂಗ್ ಕದನ...
ಮೊದಲೆರಡು ಪಂದ್ಯಗಳಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ್ದ ಭಾರತ ತಂಡವು 300ಕ್ಕೂ ಹೆಚ್ಚು ಮೊತ್ತದ ಗುರಿಯನ್ನು ಇಂಗ್ಲೆಂಡ್‌ಗೆ ನೀಡಿತ್ತು. ಆದರೆ, ಮೊದಲ ಪಂದ್ಯದಲ್ಲಿ ಬೌಲರ್‌ಗಳು ಆರಂಭದಲ್ಲಿ ಪೆಟ್ಟು ತಿಂದರೂ ನಂತರ ಚೇತರಿಸಿಕೊಂಡಿದ್ದರು. ಪದಾರ್ಪಣೆ ಮಾಡಿದ್ದ ಪ್ರಸಿದ್ಧ ಕೃಷ್ಣ ನಾಲ್ಕು ವಿಕೆಟ್ ಗಳಿಸಿದ್ದರು. ಶಾರ್ದೂಲ್ ಠಾಕೂರ್, ಭುವನೇಶ್ವರ್ ಕುಮಾರ್ ಮಿಂಚಿದ್ದರು. 

ಇದನ್ನೂ ಓದಿ: 

ಎರಡನೇ ಪಂದ್ಯದಲ್ಲಿ ಕೆ.ಎಲ್. ರಾಹುಲ್ ಶತಕ ಬಾರಿಸಿದ್ದರು. ವಿರಾಟ್ ಕೊಹ್ಲಿ ಮತ್ತು ರಿಷಭ್ ಪಂತ್ ಅರ್ಧಶತಕಗಳೂ ಗಮನ ಸೆಳೆದಿದ್ದವು. ರೋಹಿತ್ ಶರ್ಮಾ ಎರಡೂ ಪಂದ್ಯಗಳಲ್ಲಿ ಲಯ ಕಂಡುಕೊಳ್ಳುವಲ್ಲಿ ಸಫಲರಾಗಿಲ್ಲ.

ಇನ್ನೊಂದೆಡೆ ಇಂಗ್ಲೆಂಡ್‌ನ ಆರಂಭಿಕ ಜೋಡಿ ಜೇಸನ್ ರಾಯ್ ಮತ್ತು ಜಾನಿ ಬೆಸ್ಟೊ ಅವರ ಜೊತೆಯಾಟಕ್ಕೆ ತಡೆಯೊಡ್ಡಲು ಬೌಲರ್‌ಗಳು ವಿಫಲರಾಗಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು