ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂಗ್ಲೆಂಡ್ ವಿರುದ್ಧದ ಸರಣಿ: ಶೆಫಾಲಿ ಆಯ್ಕೆಯಿಂದ ತಂಡಕ್ಕೆ ಅನುಕೂಲ -ಮಿಥಾಲಿ‌ ರಾಜ್

Last Updated 31 ಮೇ 2021, 14:37 IST
ಅಕ್ಷರ ಗಾತ್ರ

ನವದೆಹಲಿ: ಇಂಗ್ಲೆಂಡ್‌ ವಿರುದ್ಧದ ಮೂರೂ ಮಾದರಿಯ ಪಂದ್ಯಗಳ ಸರಣಿಗಳಿಗೆ ಶೆಫಾಲಿ ವರ್ಮಾ ಅವರ ಆಯ್ಕೆಯನ್ನು ಭಾರತ ಮಹಿಳಾ ಕ್ರಿಕೆಟ್‌ ತಂಡದ ನಾಯಕಿ ಮಿಥಾಲಿ ರಾಜ್‌ ಸ್ವಾಗತಿಸಿದ್ದಾರೆ. ತವರಿನಲ್ಲಿ ದಕ್ಷಿಣ ಆಫ್ರಿಕಾ ತಂಡದ ಎದುರು ನಿರಾಸೆ ಅನುಭವಿಸಿದ್ದ ತಂಡಕ್ಕೆ ಇಂಗ್ಲೆಂಡ್ ಪ್ರವಾಸದಲ್ಲಿ ಗೆಲುವಿನ ಹಳಿಗೆ ಮರಳಲು ಇದು ಅನುಕೂಲವಾಗಲಿದೆ ಎಂದು ಅವರು ಹೇಳಿದ್ದಾರೆ.

ಭಾರತ ಮಹಿಳಾ ತಂಡವು ಇಂಗ್ಲೆಂಡ್ ಪ್ರವಾಸದಲ್ಲಿ ಒಂದು ಟೆಸ್ಟ್, ತಲಾ ಮೂರು ಏಕದಿನ ಮತ್ತು ಟ್ವೆಂಟಿ–20 ಪಂದ್ಯಗಳನ್ನು ಆಡಲಿದೆ.

ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಶೆಫಾಲಿ ವರ್ಮಾ ಅವರನ್ನು ಕೈಬಿಟ್ಟಿದ್ದು ಚರ್ಚೆಗೆ ಕಾರಣವಾಗಿತ್ತು. 17 ವರ್ಷದ ಶೆಫಾಲಿ ಕಳೆದ 18 ತಿಂಗಳುಗಳಿಂದ ಸೀಮಿತ ಓವರ್‌ಗಳ ಪಂದ್ಯಗಳ ಪ್ರಮುಖ ಆಟಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ.

‘ಸ್ಫೋಟಕ ಬ್ಯಾಟರ್‌ ಶೆಫಾಲಿ ಅವರು ಮೂರು ಮಾದರಿಗೆ ಆಯ್ಕೆ ಮಾಡಿರುವುದು ಸಕಾರಾತ್ಮಕ ಸಂಗತಿ. ಇದರಿಂದ ಖಂಡಿತವಾಗಿತಂಡಕ್ಕೆ ಹೆಚ್ಚು ಅನುಕೂಲವಾಗಲಿದೆ. ಟೆಸ್ಟ್ ಹಾಗೂ ಏಕದಿನ ಪಂದ್ಯಗಳಲ್ಲಿ ಅವರ ಆಟವನ್ನು ನೋಡಲು ಕಾತರರಾಗಿದ್ದೇವೆ‘ ಎಂದು ಮಿಥಾಲಿ ನುಡಿದರು. 50 ಓವರ್‌ಗಳ ಮಾದರಿಯಲ್ಲಿ ಸ್ಮೃತಿ ಮಂದಾನ ಅವರೊಂದಿಗೆ ಶೆಫಾಲಿ ಇನಿಂಗ್ಸ್ ಆರಂಭಿಸುವ ಸುಳಿವನ್ನು ಇದೇ ವೇಳೆ ಅವರು ನೀಡಿದರು.

‘ನಮ್ಮ ಅನುಭವಗಳನ್ನು ಹಂಚಿಕೊಳ್ಳುವುದು ಮತ್ತು ಆಟಗಾರ್ತಿಯರು ಉತ್ತಮ ಸಾಮರ್ಥ್ಯ ತೋರಲು ವೇದಿಕೆ ಕಲ್ಪಿಸುವುದು ಮಹತ್ವದ ಸಂಗತಿಗಳು‘ ಎಂದು ಅವರು ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT