ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs ENG 4th Test: ಭಾರತಕ್ಕೆ ಬೌಲರ್‌ಗಳ ಗೆಲುವಿನ ಕಾಣಿಕೆ

ಮಿಂಚಿದ ಬೂಮ್ರಾ, ಉಮೇಶ್‌, ಶಾರ್ದೂಲ್‌: ಭಾರತಕ್ಕೆ ಭರ್ಜರಿ ಜಯ
Last Updated 6 ಸೆಪ್ಟೆಂಬರ್ 2021, 21:12 IST
ಅಕ್ಷರ ಗಾತ್ರ

ಲಂಡನ್‌ : ಆರಂಭಿಕ ಜೋಡಿ ಶತಕದ ಜೊತೆಯಾಟವಾಡಿ ಆತಂಕ ಮೂಡಿಸಿದರೂ ವಿರಾಟ್ ಕೊಹ್ಲಿ ಬಳಗ ವಿಚಲಿತಗೊಳ್ಳಲಿಲ್ಲ. ವೇಗ ಮತ್ತು ಸ್ಪಿನ್ ದಾಳಿಯ ಮೂಲಕ ಎದುರಾಳಿಗಳನ್ನು ಕಂಗೆಡಿಸಿದ ಭಾರತ ತಂಡ ಇಂಗ್ಲೆಂಡ್ ಎದುರಿನ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ 157 ರನ್‌ಗಳ ಗೆಲುವು ಸಾಧಿಸಿತು.

ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಬಿಟ್ಟುಕೊಟ್ಟರೂ ಎರಡನೇ ಇನಿಂಗ್ಸ್‌ನಲ್ಲಿ ಅಮೋಘ ಬ್ಯಾಟಿಂಗ್ ಮಾಡಿದ ಭಾರತ ಮುಂದಿಟ್ಟ 368 ರನ್‌ಗಳ ಗೆಲುವಿನ ಗುರಿ ಬೆನ್ನತ್ತಿದ ಆತಿಥೇಯ ತಂಡ 92.2 ಓವರ್‌ಗಳಲ್ಲಿ 210 ರನ್‌ಗಳಿಗೆ ಪತನಗೊಂಡಿತು. ಐದು ಪಂದ್ಯಗಳ ಸರಣಿಯಲ್ಲಿ ಭಾರತ 2–1 ಮುನ್ನಡೆ ಸಾಧಿಸಿತು.

4ನೇ ದಿನವಾದ ಭಾನುವಾರ 77 ರನ್ ಸೇರಿಸಿದ್ದ ಆರಂಭಿಕ ಜೋಡಿ ರೋರಿ ಬರ್ನ್ಸ್‌ ಮತ್ತು ಹಸೀಬ್ ಹಮೀದ್ ಸೋಮವಾರ ತಂಡದ ಮೊತ್ತವನ್ನು ಮೂರಂಕಿ ದಾಟಿಸಿದರು. ಅರ್ಧಶತಕ ಗಳಿಸಿದ ರೋರಿ ಬರ್ನ್ಸ್‌ ವಿಕೆಟ್ ಉರುಳಿಸಿ ಶಾರ್ದೂಲ್ ಠಾಕೂರ್ ಮಹತ್ವದ ತಿರುವು ನೀಡಿದರು. ನಂತರ ಎಡಗೈ ಸ್ಪಿನ್ನರ್‌ ಜಡೇಜ ಮತ್ತು ವೇಗಿ ಜಸ್‌ಪ್ರೀತ್ ಬೂಮ್ರಾ ಕರಾಮತ್ತು ತೋರಿದರು. ಡೇವಿಡ್ ಮಲಾನ್ ರನ್ ಔಟ್ ಆದದ್ದು ಇಂಗ್ಲೆಂಡ್‌ ಪಾಲಿಗೆ ದುಬಾರಿಯಾಯಿತು.

147 ರನ್‌ಗಳಿಗೆ ಆರು ವಿಕೆಟ್ ಕಳೆದುಕೊಂಡು ಭೋಜನಕ್ಕೆ ತೆರಳಿದ ಇಂಗ್ಲೆಂಡ್‌ಗೆ ವಿರಾಮದ ನಂತರ ಶಾರ್ದೂಲ್ ಮತ್ತೊಮ್ಮೆ ಪೆಟ್ಟು ನೀಡಿದರು. ನಾಯಕ ಜೋ ರೂಟ್ ವಿಕೆಟ್ ಉರುಳಿಸಿ ಸಂಭ್ರಮಿಸಿದರು.

ಮೂರಂಕಿ ದಾಟಿದ ಬೂಮ್ರಾ: ಭಾನುವಾರ 43 ರನ್‌ ಗಳಿಸಿದ್ದ ಹಸೀಬ್ ಅವರ ಆಫ್‌ಸ್ಟಂಪ್ ಉರುಳಿಸುವ ಮೂಲಕ ಜಡೇಜ ವಾಪಸ್ ಕಳುಹಿ ಸಿದರು. ಒಲಿ ಪೋಪ್ ಅವರು ಜಸ್‌ಪ್ರೀತ್ ಬೂಮ್ರಾ ಹಾಕಿದ ರಿವರ್ಸ್‌ ಸ್ವಿಂಗ್‌ಗೆ ಬಲಿಯಾದರು. ಈ ಮೂಲಕ ಬೂಮ್ರಾ ವಿಕೆಟ್ ಗಳಿಕೆಯಲ್ಲಿ ಮೂರಂಕಿ ಮೊತ್ತ ದಾಟಿದರು. ತಮ್ಮ ಮುಂದಿನ ಓವರ್‌ನಲ್ಲಿ ಜಾನಿ ಬೆಸ್ಟೊ ಅವರನ್ನು ವಾಪಸ್ ಕಳುಹಿಸಿದರು. ಕೊನೆಯ ಮೂರು ವಿಕೆಟ್‌ಗಳು ಉಮೇಶ್ ಯಾದವ್ ಪಾಲಾದವು.

ಸ್ಕೋರ್‌ ಕಾರ್ಡ್‌

ಭಾರತ (ಮೊದಲ ಇನಿಂಗ್ಸ್) 191(61.3ಓವರ್‌)

ಇಂಗ್ಲೆಂಡ್ (ಮೊದಲ ಇನಿಂಗ್ಸ್) 290 (84 ಓವರ್)

ಭಾರತ (ಎರಡನೇ ಇನಿಂಗ್ಸ್) 466 (148.2 ಓವರ್‌)

ಇಂಗ್ಲೆಂಡ್ (ಎರಡನೇ ಇನಿಂಗ್ಸ್) 210 (92.2 ಓವರ್) (ಭಾನುವಾರ 32 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 77)

ಬರ್ನ್ಸ್‌ ಸಿ ಪಂತ್ ಬಿ ಶಾರ್ದೂಲ್‌ 50 (125 ಎ, 4x5), ಹಮೀದ್ ಬಿ ಜಡೇಜ 63 (193 ಎ, 4x6), ಮಲಾನ್‌ ರನ್ ಔಟ್‌ (ಮಯಂಕ್‌ (ಬದಲಿ)/ಪಂತ್‌) 5 (33 ಎ), ರೂಟ್‌ ಬಿ ಠಾಕೂರ್ 36 (78 ಎ, 4x3), ಪೋಪ್ ಬಿ ಬೂಮ್ರಾ 2 (11 ಎ), ಬೆಸ್ಟೊ ಬಿ ಬೂಮ್ರಾ 0 (4 ಎ), ಮೋಯಿನ್ ಸಿ ಸೂರ್ಯಕುಮಾರ್ (ಬದಲಿ) ಬಿ ಜಡೇಜ 0 (4 ಎ), ವೋಕ್ಸ್ ಸಿ ರಾಹುಲ್ ಬಿ ಯಾದವ್ 18 (47 ಎ, 4x1), ಕ್ರೇಗ್‌ ಬಿ ಯಾದವ್ 10 (29 ಎ, 4x1), ರಾಬಿನ್ಸನ್ ಔಟಾಗದೆ 10 (32 ಎ, 4x2), ಆ್ಯಂಡರ್ಸನ್ ಸಿ ಪಂತ್ ಬಿ ಯಾದವ್ 2 (5 ಎ)

ಇತರೆ (ಬೈ 2, ಲೆಗ್‌ಬೈ 5, ನೋಬಾಲ್‌ 7) 14

ವಿಕೆಟ್‌ ಪತನ:1-100 (ರೋರಿ ಬರ್ನ್ಸ್‌, 40.4), 2-120 (ಡೇವಿಡ್ ಮಲಾನ್, 53.1), 3-141 (ಹಸೀಬ್ ಹಮೀದ್‌ 61.3), 4-146 (ಒಲಿ ಪೋಪ್, 64.5), 5-146 (ಜಾನಿ ಬೆಸ್ಟೊ, 66.3), 6-147 (ಮೋಯಿನ್ ಅಲಿ, 67.2), 7-182 (ಜೋ ರೂಟ್‌, 80.1), 8-193 (ಕ್ರಿಸ್ ವೋಕ್ಸ್‌, 84.1), 9-202 (ಕ್ರೇಗ್ ಓವರ್ಟನ್‌, 88.5), , 10-210 (ಜೇಮ್ಸ್ ಅ್ಯಂಡರ್ಸನ್‌, 92.2)

ಬೌಲಿಂಗ್‌: ಉಮೇಶ್ ಯಾದವ್ 18.2–2–60–3, ಜಸ್‌ಪ್ರೀತ್‌ ಬೂಮ್ರಾ 22–9–27–2, ರವೀಂದ್ರ ಜಡೇಜ 30–11–50–2, ಮೊಹಮ್ಮದ್ ಸಿರಾಜ್ 14–0–44–0, ಶಾರ್ದೂಲ್ ಠಾಕೂರ್ 8–1–22–2

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT