ಗುರುವಾರ , ಸೆಪ್ಟೆಂಬರ್ 23, 2021
25 °C

IND vs ENG: ಭಾರತೀಯ ವೇಗಿಗಳ ಮಿಂಚಿನ ದಾಳಿ, ಗೆಲುವಿನ ಆಸೆ ಜೀವಂತ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಲಂಡನ್: ಲಾರ್ಡ್ಸ್‌ ಅಂಗಳದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್‌ ಕ್ರಿಕೆಟ್‌ನ ಅಂತಿಮ ದಿನ ಇಂಗ್ಲೆಂಡ್ ವಿರುದ್ಧ ಭಾರತದ ಗೆಲುವಿನ ಆಸೆ ಮತ್ತೆ ಚಿಗುರಿದೆ.

ನಾಲ್ಕನೇ ದಿನದಾಟದಲ್ಲಿ ಆತಂಕದ ಸುಳಿಯಲ್ಲಿದ್ದ ಭಾರತ ತಂಡವು ಐದನೇ ದಿನ ಮೊಹಮ್ಮದ್ ಶಮಿ ಮತ್ತು ಜಸ್‌ಪ್ರೀತ್ ಬೂಮ್ರಾ ಚುರುಕಿನ ಆಟದಿಂದ ಪುಟಿದೆದ್ದು ಭೋಜನ ವಿರಾಮದ ವೇಳೆಗೆ ಇಂಗ್ಲೆಂಡ್‌ಗೆ 272 ರನ್ ಗೆಲುವಿನ ಗುರಿ ನೀಡಿತ್ತು.

ಗುರಿ ಬೆನ್ನ‌ತ್ತಿರುವ ಇಂಗ್ಲೆಂಡ್ ತಂಡವು ಆರಂಭಿಕ ಆಘಾತಕ್ಕೆ ಒಳಗಾಗಿದ್ದು, ಚಹಾ ವಿರಾಮದ ಬಳಿಕ ಆಟ ಆರಂಭಿಸಿ ಕೆಲವೇ ನಿಮಿಷಗಳಲ್ಲಿ 7 ವಿಕೆಟ್ ಕಳೆದುಕೊಂಡು 90 ರನ್‌ ಗಳಿಸಿದೆ.

ಓದಿ: 

ಭಾರತದ ಪರ ಮಿಂಚಿನ ಬೌಲಿಂಗ್ ದಾಳಿ ಸಂಘಟಿಸಿದ ಬೂಮ್ರಾ, ಇಶಾಂತ್ ಶರ್ಮಾ ಹಾಗೂ ಮೊಹಮ್ಮದ್ ಸಿರಾಜ್ ತಲಾ 2 ವಿಕೆಟ್ ಕಬಳಿಸಿದ್ದಾರೆ. ಮೊಹಮ್ಮದ್ ಶಮಿ 1 ವಿಕೆಟ್ ಪಡೆದಿದ್ದಾರೆ. ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ದಾಖಲಿಸಿ ಇಂಗ್ಲೆಂಡ್ ಹೆಚ್ಚು ಮೊತ್ತ ಪೇರಿಸುವಲ್ಲಿ ಕಾರಣರಾಗಿದ್ದ ಜೋ ರೂಟ್ ಎರಡನೇ ಇನ್ನಿಂಗ್ಸ್‌ನಲ್ಲಿಯೂ ದೊಡ್ಡ ಮೊತ್ತ ದಾಖಲಿಸು ಸುಳಿವು ನೀಡಿದ್ದರು. ಆದರೆ ಅವರನ್ನು ಪೆವಿಲಿಯನ್‌ಗೆ ಕಳುಹಿಸಿರುವ ಬೂಮ್ರಾ ಭಾರತದ ಗೆಲುವಿನ ಆಸೆ ಮತ್ತೆ ಚಿಗುರುವಂತೆ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು