ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs NZ 1st T20| ಡೆವೊನ್, ಡೆರಿಲ್ ಅಬ್ಬರ: ಭಾರತಕ್ಕೆ ಸೋಲು

Last Updated 27 ಜನವರಿ 2023, 20:52 IST
ಅಕ್ಷರ ಗಾತ್ರ

ರಾಂಚಿ: ಡೆವೊನ್ ಕಾನ್ವೆ ಮತ್ತು ಡೆರಿಲ್ ಮಿಚೆಲ್ ಅವರ ಅಬ್ಬರದ ಅರ್ಧಶತಕಗಳ ಬಲದಿಂದ ನ್ಯೂಜಿಲೆಂಡ್ ತಂಡವು ಶುಕ್ರವಾರ ಇಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತದ ವಿರುದ್ಧ 21 ರನ್‌ಗಳಿಂದ ಗೆದ್ದಿತು.

ಜೆಕೆಸಿಎ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಕಿವೀಸ್ ಬಳಗವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 176 ರನ್ ಗಳಿಸಿತು. ಭಾರತ ತಂಡ ನಿಗದಿತ ಓವರ್‌ಗಳಲ್ಲಿ 9 ವಿಕೆಟ್‌ಗಳಿಗೆ 155 ರನ್‌ ಮಾತ್ರ ಪೇರಿಸಿತು.

ಸೂರ್ಯಕುಮಾರ್‌ ಯಾದವ್‌ (47 ರನ್, 34 ಎ.) ಮತ್ತು ವಾಷಿಂಗ್ಟನ್‌ ಸುಂದರ್‌ (50 ರನ್‌, 28 ಎ., 4X5, 6X3) ಅವರ ಹೋರಾಟ ಆತಿಥೇಯ ತಂಡವನ್ನು ಗೆಲುವಿನ ದಡ ತಲುಪಿಸಲು ಸಾಕಾಗಲಿಲ್ಲ. ಕಿವೀಸ್‌ ತಂಡದ ಎಲ್ಲ ಬೌಲರ್‌ಗಳು ಶಿಸ್ತಿನ ದಾಳಿ ನಡೆಸಿದರು.

ಇದಕ್ಕೂ ಮುನ್ನ ಟಾಸ್ ಗೆದ್ದ ಹಾರ್ದಿಕ್‌ ಪಾಂಡ್ಯ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಕಿವೀಸ್ ಆರಂಭಿಕ ಜೋಡಿ ಫಿನ್ ಅಲೆನ್ (35; 23ಎ) ಮತ್ತು ಕಾನ್ವೆ (52; 35ಎ) ಬಿರುಸಿನ ಆರಂಭ ನೀಡಿತು.

ಐದನೇ ಓವರ್‌ನಲ್ಲಿ ವಾಷಿಂಗ್ಟನ್ ಸುಂದರ್ ಸ್ಪಿನ್‌ ಎಸೆತದಲ್ಲಿ ಫಿನ್ ಅಲೆನ್ ಔಟಾದರು. ಅದೇ ಓವರ್‌ನಲ್ಲಿ ಮಾರ್ಕ್ ಚಾಪ್ಮನ್ ಖಾತೆ ತೆರೆಯದೇ ಔಟಾದರು. ಈ ಹಂತದಲ್ಲಿ ಕಾನ್ವೆ ಜೊತೆಗೂಡಿದ ಗ್ಲೆನ್ ಫಿಲಿಪ್ಸ್ ಆಟಕ್ಕೆ ವೇಗ ನೀಡಿದರು. ಮೂರನೇ ವಿಕೆಟ್ ಜೊತೆಯಾಟದಲ್ಲಿ ಇಬ್ಬರೂ ಸೇರಿ 60 ರನ್‌ ಸೂರೆ ಮಾಡಿದರು. ಇದರಿಂದಾಗಿ ತಂಡದ ಮೊತ್ತವು ನೂರರ ಗಡಿ ದಾಟಿತು.

ಕಾನ್ವೆ ಏಳು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿದರು. ಆದರೆ ಗ್ಲೆನ್ ತಮ್ಮ ನೈಜ ಆಟದ ಬದಲು ರಕ್ಷಣಾತ್ಮಕವಾಗಿ ಆಡಿದರು. 22 ಎಸೆತಗಳಲ್ಲಿ 17 ರನ್‌ ಗಳಿಸಿದರು.

18ನೇ ಓವರ್‌ನಲ್ಲಿ ಕಾನ್ವೆ ವಿಕೆಟ್ ಗಳಿಸುವಲ್ಲಿ ವೇಗಿ ಅರ್ಷದೀಪ್ ಸಿಂಗ್ ಯಶಸ್ವಿಯಾದರು. ಆದರೆ, ರನ್‌ ಗಳಿಕೆಗೆ ಕಡಿವಾಣ ಹಾಕುವ ಭಾರತದ ಬೌಲರ್‌ಗಳ ಯೋಜನೆಗೆ ಡೆರಿಲ್ ಮಿಚೆಲ್ ಅಡ್ಡಿಯಾದರು.

5 ಸಿಕ್ಸರ್, ಮೂರು ಬೌಂಡರಿಸಹಿತ 59 ರನ್‌ಗಳನ್ನು ಗಳಿಸಿದರು. ಅದಕ್ಕಾಗಿ 30 ಎಸೆತಗಳನ್ನು ಎದುರಿಸಿದ ಅವರು ಅಜೇಯರಾಗುಳಿದರು.

ಸ್ಕೋರ್‌ ಕಾರ್ಡ್‌

ನ್ಯೂಜಿಲೆಂಡ್‌ 6ಕ್ಕೆ 176 (20 ಓವರ್)

ಫಿನ್‌ ಸಿ ಸೂರ್ಯಕುಮಾರ್ ಬಿ ಸುಂದರ್ 35 (23ಎ, 4X4, 6X2), ಕಾನ್ವೆ ಸಿ ಹೂಡಾ ಬಿ ಆರ್ಷದೀಪ್ 52 (35ಎ, 4X7, 6X1), ಚಾಪ್‌ಮನ್‌ ಸಿ ಮತ್ತು ಬಿ ಸುಂದರ್ 0 (4ಎ), ಫಿಲಿಪ್ಸ್ ಸಿ ಸೂರ್ಯಕುಮಾರ್ ಬಿ ಕುಲದೀಪ್‌ 17 (22ಎ, 4X1), ಡೆರಿಲ್‌ ಔಟಾಗದೆ 59 (30ಎ, 4X3, 6X5), ಬ್ರೇಸ್‌ವೆಲ್‌ ರನೌಟ್‌ (ಇಶಾನ್‌) 1 (2ಎ), ಸ್ಯಾಂಟ್ನರ್ ಸಿ ತ್ರಿಪಾಠಿ ಬಿ ಶಿವಂ 7 (5ಎ, 4X1), ಸೋಧಿ 0 (0ಎ) ಇತರೆ: 5 (ಲೆಗ್‌ಬೈ 1, ನೋಬಾಲ್ 1, ವೈಡ್‌ 3)

ವಿಕೆಟ್ ಪತನ: 1-43 (ಫಿನ್ ಅಲೆನ್‌, 4.2), 2-43 (ಮಾರ್ಕ್‌ ಚಾಪ್‌ಮನ್‌, 4.6), 3-103 (ಗ್ಲೆನ್ ಫಿಲಿಪ್ಸ್, 12.5), 4-139 (ಡೆವೊನ್ ಕಾನ್ವೆ, 17.2), 5-140 (ಮೈಕಲ್ ಬ್ರೇಸ್‌ವೆಲ್‌, 17.5), 6-149 (ಮಿಚೆಲ್ ಸ್ಯಾಂಟ್ನರ್, 18.6)

ಬೌಲಿಂಗ್‌: ಹಾರ್ದಿಕ್‌ ಪಾಂಡ್ಯ 3–0–33–0, ಆರ್ಷದೀಪ್ ಸಿಂಗ್‌ 4–0–51–1, ವಾಷಿಂಗ್ಟನ್ ಸುಂದರ್ 4–0–22–2, ದೀಪಕ್ ಹೂಡಾ 2–0–14–0, ಉಮ್ರಾನ್ ಮಲಿಕ್‌ 1–0–16–0, ಕುಲದೀಪ್ ಯಾದವ್‌ 4–0–20–1, ಶಿವಂ ಮಾವಿ 2–0–19–1

ಭಾರತ 9ಕ್ಕೆ 155 (20 ಓವರ್)

ಶುಭಮನ್‌ ಸಿ ಅಲೆನ್‌ ಬಿ ಸ್ಯಾಂಟನರ್‌ 7 (6ಎ, 4X1), ಇಶಾನ್ ಬಿ ಬ್ರೇಸ್‌ವೆಲ್‌ 4 (5ಎ, 4X1), ತ್ರಿಪಾಠಿ ಸಿ ಕಾನ್ವೆ ಬಿ ಡಫ್ಫಿ 0 (6ಎ), ಸೂರ್ಯಕುಮಾರ್ ಸಿ ಅಲೆನ್ ಬಿ ಸೋಧಿ 47 (34ಎ, 4X6, 6X2), ಹಾರ್ದಿಕ್‌ ಸಿ ಮತ್ತು ಬಿ ಬ್ರೇಸ್‌ವೆಲ್‌ 21 (20ಎ, 4X1, 6X1), ಸುಂದರ್ ಸಿ ಡಫ್ಫಿ ಬಿ ಫರ್ಗ್ಯುಸನ್‌ 50 (28ಎ, 4X5, 6X3), ಹೂಡಾ ಸ್ಟಂಪ್ಡ್‌ ಕಾನ್ವೆ ಬಿ ಸ್ಯಾಂಟನರ್ 10 (10ಎ, 6X1), ಶಿವಂ ರನೌಟ್‌ (ಸ್ಯಾಂಟನರ್) 2 (3ಎ), ಕುಲದೀಪ್‌ ಸಿ ಕಾನ್ವೆ ಬಿ ಫರ್ಗ್ಯುಸನ್‌ 0 (1ಎ), ಆರ್ಷದೀಪ್‌ ಔಟಾಗದೆ 0 (6ಎ), ಉಮ್ರಾನ್‌ ಔಟಾಗದೆ 4 (1ಎ, 4X1) ಇತರೆ: 10 (ವೈಡ್‌ 10)

ವಿಕೆಟ್ ಪತನ: 1-10 (ಇಶಾನ್ ಕಿಶನ್‌, 1.3), 2-11 (ರಾಹುಲ್ ತ್ರಿಪಾಠಿ, 2.4), 3-15 (ಶುಭಮನ್ ಗಿಲ್‌, 3.1), 4-83 (ಸೂರ್ಯಕುಮಾರ್ ಯಾದವ್‌, 11.4), 5-89 (ಹಾರ್ದಿಕ್ ಪಾಂಡ್ಯ, 12.2), 6-111 (ದೀಪಕ್ ಹೂಡಾ, 15.4), 7-115 (ಶಿವಂ ಮಾವಿ, 16.1), 8-127 (ಕುಲದೀಪ್ ಯಾದವ್‌, 17.1), 9-151 (ವಾಷಿಂಗ್ಟನ್ ಸುಂದರ್, 19.5)

ಬೌಲಿಂಗ್‌: ಜೇಕಬ್ ಡಫ್ಫಿ 3–0–27–1, ಮೈಕಲ್ ಬ್ರೇಸ್‌ವೆಲ್‌ 4–0–31–2, ಮಿಚೆಲ್ ಸ್ಯಾಂಟನರ್ 4–1–11–2, ಲಾಕಿ ಫರ್ಗ್ಯುಸನ್‌ 4–1–33–2, ಇಶ್ ಸೋಧಿ 3–0–30–1, ಬ್ಲೇರ್ ಟಿಕ್ನರ್ 2–0–23–0

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT