ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs NZ 2nd Test: ಮಯಂಕ್ ಅರ್ಧಶತಕ; ಪೂಜಾರ-ಕೊಹ್ಲಿ ಶೂನ್ಯಕ್ಕೆ ಔಟ್

Last Updated 3 ಡಿಸೆಂಬರ್ 2021, 11:06 IST
ಅಕ್ಷರ ಗಾತ್ರ

ಮುಂಬೈ: ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ದಿನದಾಟದ ಟೀ ವಿರಾಮದ ವೇಳೆಗೆ ಮಯಂಕ್ ಅಗರವಾಲ್ ಅರ್ಧಶತಕದ (52*) ನೆರವಿನಿಂದ ಭಾರತ ತಂಡವು 37 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 111 ರನ್ ಗಳಿಸಿದೆ.

ರಾತ್ರಿಯಿಡೀ ಮಳೆ ಸುರಿದಿದ್ದರಿಂದ ಪಂದ್ಯ ಆರಂಭಕ್ಕೆ ವಿಳಂಬವಾಯಿತು. ಬಳಿಕ ಟಾಸ್ ಗೆದ್ದ ನಾಯಕ ವಿರಾಟ್ ಕೊಹ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಆರಂಭಿಕರಾದ ಮಯಂಕ್ ಅಗರವಾಲ್ ಹಾಗೂ ಶುಭಮನ್ ಗಿಲ್ ಮೊದಲ ವಿಕೆಟ್‌ಗೆ 80 ರನ್‌ಗಳ ಭದ್ರ ಅಡಿಪಾಯ ಹಾಕಿಕೊಟ್ಟರು. ಶುಭಮನ್ ಗಿಲ್ 44 ರನ್ ಗಳಿಸಿ ಔಟ್ ಆದರು.

ಪೂಜಾರ, ಕೊಹ್ಲಿ ಶೂನ್ಯಕ್ಕೆ ಔಟ್...
ಈ ನಡುವೆ ಎಜಾಜ್ ಪಟೇಲ್ ಸ್ಪಿನ್ ದಾಳಿಗೆ ಸಿಲುಕಿದ ಭಾರತ ದಿಢೀರ್ ಕುಸಿತಕ್ಕೆ ಒಳಗಾಯಿತು. ಪರಿಣಾಮ 80 ರನ್ನಿಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡಿತು.

ಚೇತೇಶ್ವರ ಪೂಜಾರ ಹಾಗೂ ನಾಯಕ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟ್ ಆದರು.

ಮಯಂಕ್ ಅರ್ಧಶತಕ...
ಅತ್ತ ದಿಟ್ಟ ಹೋರಾಟ ಮುಂದುವರಿಸಿರುವ ಮಯಂಕ್ ಅಗರವಾಲ್ ಆಕರ್ಷಕ ಅರ್ಧಶತಕ ಸಾಧನೆ ಮಾಡಿದರು. ಕಿವೀಸ್ ಪರ ಎಜಾಜ್ 30 ರನ್ ನೀಡಿ ಮೂರು ವಿಕೆಟ್ ಕಬಳಿಸಿ ಮಿಂಚಿದರು.

ಇದೀಗ ಕ್ರೀಸಿನಲ್ಲಿರುವ ಮಯಂಕ್ ಹಾಗೂ ಶ್ರೇಯಸ್ ಅಯ್ಯರ್ (7*) ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT