ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs NZ ಟಿ20 ಕ್ರಿಕೆಟ್ | ದಾಖಲೆಗಳ ಸನಿಹ ಕಿವೀಸ್ ನಾಯಕ ಕೇನ್ ವಿಲಿಯಮ್ಸನ್

Last Updated 30 ಜನವರಿ 2020, 14:52 IST
ಅಕ್ಷರ ಗಾತ್ರ

ವೆಲ್ಲಿಂಗ್ಟನ್‌:ಭಾರತ ವಿರುದ್ಧದ ಚುಟುಕು ಕ್ರಿಕೆಟ್‌ ಸರಣಿಯನ್ನು ಸೋತರೂ, ಸರಣಿಯಲ್ಲಿ ಉತ್ತಮ ಆಟವಾಡಿರುವ ನ್ಯೂಜಿಲೆಂಡ್‌ ತಂಡದ ನಾಯಕ ಕೇನ್‌ ವಿಲಿಯಮ್ಸನ್‌ ಎರಡು ದಾಖಲೆಗಳನ್ನು ತಮ್ಮ ಹೆಸರಿಗೆ ಬರೆದುಕೊಳ್ಳಲುಸಜ್ಜಾಗಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ ಇದುವರೆಗೆ 42 ಪಂದ್ಯಗಳಿಗೆ ಕಿವೀಸ್‌ ಪಡೆಯನ್ನು ಮುನ್ನಡೆಸಿರುವ ಕೇನ್‌ ನಾಯಕರಾಗಿ ಒಟ್ಟು 1243 ರನ್‌ ಗಳಿಸಿದ್ದಾರೆ. ಇನ್ನು 31 ರನ್ ಗಳಿಸಿದರೆ ಈ ಮಾದರಿಯಲ್ಲಿ ಅತಿಹೆಚ್ಚು ರನ್‌ ಗಳಿಸಿದ ನಾಯಕನಾಗುವ ಅವಕಾಶವಿದೆ.

ಈ ಪಟ್ಟಿಯಲ್ಲಿ ದಕ್ಷಿಣ ಆಫ್ರಿಕಾದ ಫಾಫ್‌ ಡು ಪ್ಲೆಸಿ ಅಗ್ರ ಸ್ಥಾನದಲ್ಲಿದ್ದಾರೆ. 40 ಪಂದ್ಯಗಳ 40 ಇನಿಂಗ್ಸ್‌ಗಳಿಂದ ಅವರು 1273 ರನ್ ಕಲೆಹಾಕಿದ್ದಾರೆ. ಮೂರು ಮತ್ತು ನಾಲ್ಕನೇ ಸ್ಥಾನಗಳಲ್ಲಿ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ (1,126‬) ಹಾಗೂ ಮಾಜಿ ನಾಯಕ ಎಂ.ಎಸ್‌. ಧೋನಿ (1112) ಇದ್ದಾರೆ.

ಸದ್ಯ ಸರಣಿಯಲ್ಲಿ ಎರಡು ಅರ್ಧಶತಕ ಸಹಿತ160 ರನ್ ಹೆಚ್ಚು ರನ್ ಗಳಿಸಿದ ಆಟಗಾರ ಎನಿಸಿರುವ ವಿಲಿಯಮ್ಸನ್‌,ಉಳಿದೆರಡು ಪಂದ್ಯಗಳಿಂದಇನ್ನೊಂದುಅರ್ಧಶತಕ ಸಿಡಿಸಿದರೆ,ನಾಯಕನಾಗಿ 10 ಅರ್ಧಶತಕ ಗಳಿಸಿದ ಸಾಧನೆಯನ್ನೂ ಮಾಡಲಿದ್ದಾರೆ.

ಸರಣಿಯ ನಾಲ್ಕು, ಐದನೇ ಪಂದ್ಯಗಳು ಕ್ರಮವಾಗಿವೆಲ್ಲಿಂಗ್ಟನ್‌ (ಜ.31) ಹಾಗು ಮೌಂಟ್‌ ಮೌಂಗನುಯಿಯಲ್ಲಿ (ಫೆ.2)ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT