ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಆಫ್ರಿಕಾ ಎದುರು 2ನೇ ಎಕದಿನ ಕ್ರಿಕೆಟ್ ಪಂದ್ಯ: ಜಯಿಸುವ ಒತ್ತಡದಲ್ಲಿ ಭಾರತ

ರಾಂಚಿಯಲ್ಲಿ ಎರಡನೇ ಏಕದಿನ ಪಂದ್ಯ ಇಂದು
Last Updated 9 ಅಕ್ಟೋಬರ್ 2022, 6:20 IST
ಅಕ್ಷರ ಗಾತ್ರ

ರಾಂಚಿ: ಶಿಖರ್ ಧವನ್ ನಾಯಕತ್ವದ ಭಾರತ ತಂಡವು ಎಲ್ಲ ವಿಭಾಗಗಳಲ್ಲಿಯೂ ಲಯಕ್ಕೆ ಮರಳುವ ಸವಾಲಿನೊಂದಿಗೆ ಭಾನುವಾರ ದಕ್ಷಿಣ ಆಫ್ರಿಕಾ ಎದುರಿನ ಎರಡನೇ ಎಕದಿನ ಪಂದ್ಯದಲ್ಲಿ ಕಣಕ್ಕಿಳಿಯಬೇಕಿದೆ.

ಮೂರು ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಜಯಿಸಿರುವ ಪ್ರವಾಸಿ ಬಳಗವು ಜಾರ್ಖಂಡ್ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಮತ್ತೊಂದು ಗೆಲುವು ಸಾಧಿಸಿ ಸರಣಿ ಕೈವಶ ಮಾಡಿಕೊಳ್ಳುವ ಉತ್ಸಾಹದಲ್ಲಿದೆ. ಲಖನೌನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಆತಿಥೇಯ ಬಳಗವು ಡೆತ್‌ ಓವರ್‌ ಬೌಲಿಂಗ್‌ನಲ್ಲಿ ಎಡವಿತ್ತು. ಬ್ಯಾಟಿಂಗ್‌ನಲ್ಲಿ ಶ್ರೇಯಸ್ ಅಯ್ಯರ್ ಹಾಗೂ ಸಂಜು ಸ್ಯಾಮ್ಸನ್ ಅವರ ವಿರೋಚಿತ ಅರ್ಧಶತಕಗಳು ತಂಡದ ಸೋಲಿನ ಅಂತರ ಕಡಿಮೆ ಮಾಡಿದ್ದವು. ಆದರೆ ಅಗ್ರಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯ ತಂಡವನ್ನು ಕಾಡಿತ್ತು.

ಇದೀಗ ಮಧ್ಯಮವೇಗಿ ದೀಪಕ್ ಚಾಹರ್ ಗಾಯಗೊಂಡು ಹೊರನಡೆದಿರುವುದರಿಂದ ಶಾರ್ದೂಲ್ ಠಾಕೂರ್ ಮೇಲೆ ಹೆಚ್ಚು ಒತ್ತಡ ಬೀಳುವುದು ಖಚಿತ. ಮುಕೇಶ್ ಕುಮಾರ್‌ಗೆ ಪದಾರ್ಪಣೆಯ ಅವಕಾಶ ಸಿಗಬಹುದು. ಸ್ಫೋಟಕ ಶೈಲಿಯ ಬ್ಯಾಟರ್‌ಗಳಾದ ಡೇವಿಡ್ ಮಿಲ್ಲರ್ ಹಾಗೂ ಹೆನ್ರಿಚ್ ಕ್ಲಾಸನ್ ಅವರನ್ನು ಕಟ್ಟಿಹಾಕುವ ಸವಾಲು ಬೌಲರ್‌ಗಳಿಗೆ ಇದೆ.

ಆದರೆ ಬೌಲಿಂಗ್ ವಿಷಯದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಅನುಭವಿಗಳ ಬಲವಿದೆ. ಕಗಿಸೊ ರಬಾಡ, ಲುಂಗಿ ಗಿಡಿ, ಸ್ಪಿನ್ನರ್ ತಬ್ರೇಜ್ ಹಾಗೂ ಕೇಶವ್ ಮಹಾರಾಜ ಉತ್ತಮ ಲಯದಲ್ಲಿದ್ದಾರೆ. ಅವರನ್ನು ಎದುರಿಸಲು ಭಾರತದ ಬ್ಯಾಟಿಂಗ್ ಪಡೆ ಸಜ್ಜಾಗಬೇಕಿದೆ.

ಪಿಚ್ ರಿಪೋರ್ಟ್
2019ರಲ್ಲಿ ಇಲ್ಲಿ ಏಕದಿನ ಪಂದ್ಯ ನಡೆದಿತ್ತು. ಆಸ್ಟ್ರೇಲಿಯಾ ಎದುರಿನ ಆ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಬಾರಿಸಿದ್ದರು. ಆದರೂ 313 ರನ್‌ಗಳ ಗುರಿ ಬೆನ್ನಟ್ಟಿದ್ದ ಭಾರತವು ಸೋಲನುಭವಿಸಿತ್ತು.

ಇದುವರೆಗೂ ಇಲ್ಲಿ ನಡೆದಿರುವ ಐದು ಏಕದಿನ ಪಂದ್ಯಗಳಲ್ಲಿ ಭಾರತವು ಎರಡರಲ್ಲಿ ಗೆದ್ದು, ಇನ್ನೆರಡರಲ್ಲಿ ಸೋತಿದೆ. ಒಂದು ಪಂದ್ಯ ರದ್ದಾಗಿತ್ತು. ಇಲ್ಲಿಯ ಪಿಚ್ ಬ್ಯಾಟರ್‌ಸ್ನೇಹಿಯಾಗಿದೆ. ಹೆಚ್ಚು ರನ್‌ಗಳನ್ನು ಗಳಿಸುವ ಅವಕಾಶ ಇರುವ ಇಲ್ಲಿ ಬೌಲರ್‌ಗಳ ಚಾಣಾಕ್ಷತೆಗೆ ಸವಾಲು ಎದುರಾಗುವುದು ಖಚಿತ.

ತಂಡಗಳು
ಭಾರತ:
ಶಿಖರ್ ಧವನ್ (ನಾಯಕ), ಶುಭಮನ್ ಗಿಲ್, ಋತುರಾಜ್ ಗಾಯಕವಾಡ, ಇಶಾನ್ ಕಿಶನ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಆವೇಶ್ ಖಾನ್, ರವಿ ಬಿಷ್ಣೋಯಿ, ಮೊಹಮ್ಮದ್ ಸಿರಾಜ್, ಮುಕೇಶ್ ಕುಮಾರ್, ರಜತ್ ಪಾಟೀದಾರ್, ಶಹಬಾಜ್ ಅಹಮದ್, ರಾಹುಲ್ ತ್ರಿಪಾಠಿ

ದಕ್ಷಿಣ ಆಫ್ರಿಕಾ: ತೆಂಬಾ ಬವುಮಾ (ನಾಯಕ), ಜೆನ್ಮನ್ ಮಲಾನ್, ಕ್ವಿಂಟನ್ ಡಿಕಾಕ್, ಏಡನ್ ಮರ್ಕರಂ, ಹೆನ್ರಿಚ್ ಕ್ಲಾಸನ್, ಡೇವಿಡ್ ಮಿಲ್ಲರ್, ವೇನ್ ಪಾರ್ನೆಲ್, ಕೇಶವ್ ಮಹಾರಾಜ, ಕಗಿಸೊ ರಬಾಡ, ಲುಂಗಿ ಗಿಡಿ, ತಬ್ರೇಜ್ ಶಮ್ಸಿ, ರೀಜಾ ಹೆನ್ರಿಕ್ಸ್, ಮಾರ್ಕೊ ಜೆನ್ಸೆನ್, ಹೆನ್ರಿಚ್ ನಾಕಿಯಾ, ಆ್ಯಂಡಿಲೆ ಪಿಶುವಾಯೊ

ಪಂದ್ಯ ಆರಂಭ: ಮಧ್ಯಾಹ್ನ 1.30
ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್

ಪಿಚ್ ರಿಪೋರ್ಟ್
2019ರಲ್ಲಿ ಇಲ್ಲಿ ಏಕದಿನ ಪಂದ್ಯ ನಡೆದಿತ್ತು. ಆಸ್ಟ್ರೇಲಿಯಾ ಎದುರಿನ ಆ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಬಾರಿಸಿದ್ದರು. ಆದರೂ 313 ರನ್‌ಗಳ ಗುರಿ ಬೆನ್ನಟ್ಟಿದ್ದ ಭಾರತವು ಸೋಲನುಭವಿಸಿತ್ತು.

ಇದುವರೆಗೂ ಇಲ್ಲಿ ನಡೆದಿರುವ ಐದು ಏಕದಿನ ಪಂದ್ಯಗಳಲ್ಲಿ ಭಾರತವು ಎರಡರಲ್ಲಿ ಗೆದ್ದು, ಇನ್ನೆರಡರಲ್ಲಿ ಸೋತಿದೆ. ಒಂದು ಪಂದ್ಯ ರದ್ದಾಗಿತ್ತು. ಇಲ್ಲಿಯ ಪಿಚ್ ಬ್ಯಾಟರ್‌ಸ್ನೇಹಿಯಾಗಿದೆ. ಹೆಚ್ಚು ರನ್‌ಗಳನ್ನು ಗಳಿಸುವ ಅವಕಾಶ ಇರುವ ಇಲ್ಲಿ ಬೌಲರ್‌ಗಳ ಚಾಣಾಕ್ಷತೆಗೆ ಸವಾಲು ಎದುರಾಗುವುದು ಖಚಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT