ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs SA 2nd T20I: ಪಂತ್ ಬಳಗಕ್ಕೆ ಮತ್ತೆ ಮುಖಭಂಗ

Last Updated 12 ಜೂನ್ 2022, 17:31 IST
ಅಕ್ಷರ ಗಾತ್ರ

ಕಟಕ್: ಕಳಪೆ ಬ್ಯಾಟಿಂಗ್‌ನಿಂದಾಗಿ ಭಾರತ ತಂಡವು ದಕ್ಷಿಣ ಆಫ್ರಿಕಾ ಎದುರಿನ ಟಿ20 ಸರಣಿಯ ಎರಡನೇ ಪಂದ್ಯದಲ್ಲಿಯೂಮುಖಭಂಗಅನುಭವಿಸಿತು.

ಬಾರಾಬತಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವು ಗೆದ್ದು, ಐದು ಪಂದ್ಯಗಳ ಸರಣಿಯಲ್ಲಿ 2–0 ಮುನ್ನಡೆ ಸಾಧಿಸಿತು. ಇದೀಗ ರಿಷಭ್ಪಂತ್ನಾಯಕತ್ವದ ಬಳಗವು ಈ ಸರಣಿ ಕಿರೀಟ ಧರಿಸಬೇಕೆಂದರೆ ಉಳಿದ ಮೂರು ಪಂದ್ಯಗಳಲ್ಲಿಯೂ ಜಯಿಸಲೇ ಬೇಕಾದ ಒತ್ತಡವಿದೆ.

ನವದೆಹಲಿಯಲ್ಲಿ ನಡೆದಿದ್ದ ಮೊದಲ ಪಂದ್ಯದಲ್ಲಿ ಬೌಲಿಂಗ್‌ ಮತ್ತು ಫೀಲ್ಡಿಂಗ್ ಲೋಪಗಳಿಂದಾಗಿ ತಂಡವು ಸೋತಿತ್ತು. ಆದರೆ ಈ ಪಂದ್ಯದಲ್ಲಿ ಪ್ರಮುಖ ಬ್ಯಾಟರ್‌ಗಳ ವೈಫಲ್ಯ ಕಾಡಿತು.ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲ ಓವರ್‌ನಲ್ಲಿಯೇ ಋತುರಾಜ್ ಗಾಯಕವಾಡ್ ವಿಕೆಟ್ ಪತನವಾಯಿತು.ಇಶಾನ್ ಕಿಶನ್ (34;21ಎ), ಶ್ರೇಯಸ್ ಅಯ್ಯರ್ (40; 35ಎ) ಮತ್ತು ಕೊನೆಯ ಹಂತದಲ್ಲಿ ದಿನೇಶ್ ಕಾರ್ತಿಕ್ (ಔಟಾಗದೆ 30) ಅವರ ಬ್ಯಾಟಿಂಗ್ ಬಲದಿಂದ ಭಾರತ ತಂಡವು 20 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 148 ರನ್‌ಗಳ ಸಾಧಾರಣ ಮೊತ್ತ ಗಳಿಸಿತು.

ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾ ತಂಡವು 18.2 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 149 ರನ್ ಗಳಿಸಿ ಗೆದ್ದಿತು. ಹೆನ್ರಿಚ್ ಕ್ಲಾಸೆನ್ (81; 46) ಅಬ್ಬರದ ಬ್ಯಾಟಿಂಗ್‌ ನಿಂದಾಗಿ ತಂಡದ ಗೆಲುವು ಸುಲಭವಾಯಿತು. ಮಧ್ಯಮವೇಗಿ ಭುವನೇಶ್ವರ್ ಕುಮಾರ್ (13ಕ್ಕೆ4) ಅವರ ಅಮೋಘ ಬೌಲಿಂಗ್‌ಗೆ ಗೆಲುವಿನ ಗೌರವ ಸಿಗಲಿಲ್ಲ.

ಪ್ರವಾಸಿ ತಂಡ ದಲ್ಲಿ ತೆಂಬಾ ಬವುಮಾ, ಕ್ಲಾಸೆನ್ ಮತ್ತು ಡೇವಿಡ್ ಮಿಲ್ಲರ್ ಬಿಟ್ಟರೆ ಉಳಿದ ಬ್ಯಾಟರ್‌ಗಳು ಎರಡಂಕಿ ತಲುಪಲಿಲ್ಲ. ಆದರೆ ಭುವನೇಶ್ವರ್ ರೀತಿಯಲ್ಲಿ ಉಳಿದ ಬೌಲರ್‌ಗಳಿಂದ ಪರಿಣಾಮಕಾರಿ ದಾಳಿ ಮೂಡಿಬರಲಿಲ್ಲ.

ಇನ್ನೊಂದೆಡೆ ಏಕಾಂಗಿ ಹೋರಾಟ ನಡೆಸಿದ ಮಧ್ಯಮಕ್ರಮಾಂಕದ ಬ್ಯಾಟರ್ ಕ್ಲಾಸೆನ್ ಆಟಕ್ಕೆ ಜಯ
ಒಲಿಯಿತು.

ಭಾರತದ ಬ್ಯಾಟಿಂಗ್‌ನಲ್ಲಿನಾಯಕ ರಿಷಭ್ಪಂತ್ಮತ್ತು ಹಾರ್ದಿಕ್ ಪಾಂಡ್ಯ ಬೇಗನೆ ನಿರ್ಗಮಿಸಿದ್ದು ರನ್‌ ಗಳಿಕೆಯ ವೇಗ ಕುಸಿಯಿತು. ಅಕ್ಷರ್ ಪಟೇಲ್ ಕೂಡ ನಿರೀಕ್ಷೆ ಹುಸಿಗೊಳಿಸಿದರು.7ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ದಿನೇಶ್ ಮಾತ್ರ ವಿಶ್ವಾಸ ಉಳಿಸಿ ಕೊಂಡರು. ಅನುಭವಿ ಬ್ಯಾಟರ್ ಎರಡು ಸಿಕ್ಸರ್ ಮತ್ತು ಎರಡು ಬೌಂಡರಿಗಳನ್ನು ದಾಖಲಿಸಿದರು. ಅವರೊಂದಿಗೆ ಹರ್ಷಲ್ ಪಟೇಲ್ ಉತ್ತಮ ಜೊತೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT