ಶುಕ್ರವಾರ, ಜುಲೈ 30, 2021
28 °C

Ind vs SL: ಶ್ರೀಲಂಕಾ ತಂಡದ ಸಿಬ್ಬಂದಿಗೆ ಕೋವಿಡ್;‌ ಸರಣಿ ದಿನಾಂಕ ಬದಲು

ಪಿಟಿಐ Updated:

ಅಕ್ಷರ ಗಾತ್ರ : | |

ಕೊಲೊಂಬೊ: ಆತಿಥೇಯ ಶ್ರೀಲಂಕಾ ತಂಡದ ಡೇಟಾ ಅನಾಲಿಸ್ಟ್‌ ಜಿ.ಟಿ. ನಿರೋಶನ್‌ ಹಾಗೂ ಬ್ಯಾಟಿಂಗ್‌ ಕೋಚ್ ಗ್ರ್ಯಾಂಟ್‌ ಫ್ಲವರ್ ಅವರಿಗೆ ಕೋವಿಡ್ ದೃಢಪಟ್ಟಿದೆ. ಈ ಹಿನ್ನಲೆಯಲ್ಲಿ ಭಾರತ ವಿರುದ್ಧದ ನಿಗದಿತ ಓವರ್‌ಗಳ ಸರಣಿಯ ದಿನಾಂಕವನ್ನು ಮರುನಿಗದಿಪಡಿಸಲಾಗಿದೆ.

ಶಿಖರ್‌ ಧವನ್‌ ನೇತೃತ್ವದ ಭಾರತ ಹಾಗೂ ಆತಿಥೇಯರ ನಡುವಣ ಏಕದಿನ ಸರಣಿಯು ಮಂಗಳವಾರದಿಂದ (ಜುಲೈ 13) ಆರಂಭವಾಗಬೇಕಿತ್ತು. ಆದರೆ, ಲಂಕಾ ಪಾಳಯದಲ್ಲಿ ಕೋವಿಡ್‌ ಪ್ರಕರಣಗಳು ಪತ್ತೆಯಾದ ಹಿನ್ನಲೆಯಲ್ಲಿ ಜುಲೈ 17 ರಿಂದ ಆರಂಭವಾಗಲಿದೆ.

ಇದನ್ನೂ ಓದಿ: 

ʼಹೌದು, ಸರಣಿಯು ಜುಲೈ 13ರ ಬದಲು ಜುಲೈ 17 ರಿಂದ ಆರಂಭವಾಗಲಿದೆ. ಆಟಗಾರರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಶ್ರೀಲಂಕಾ ಕ್ರಿಕೆಟ್‌ (ಎಸ್‌ಎಲ್‌ಸಿ) ಜೊತೆ ಸಮಾಲೋಚಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆʼ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಿಗದಿಯಂತೆ ಏಕದಿನ ಸರಣಿಯು ಜುಲೈ 13ರಿಂದ ಆರಂಭವಾಗಬೇಕಿತ್ತು. ಎರಡು ಮತ್ತು ಮೂರನೇ ಪಂದ್ಯಗಳು ಕ್ರಮವಾಗಿ ಜುಲೈ 16, ಜುಲೈ 18ರಂದು ನಡೆಯಬೇಕಿತ್ತು. ಟಿ20 ಸರಣಿಯ ಮೂರು ಪಂದ್ಯಗಳು ಜುಲೈ 21, ಜುಲೈ 23 ಹಾಗೂ ಜುಲೈ 25 ರಂದು ನಿಗದಿಯಾಗಿದ್ದವು.

ಇಎಸ್‌ಪಿಎನ್‌ ಕ್ರಿಕ್‌ಇನ್ಫೋ ವರದಿ ಪ್ರಕಾರ ನಿರೋಶನ್‌ ಹಾಗೂ ಫ್ಲವರ್ ಅವರಿಗೆ ಕೊರೊನಾವೈರಸ್‌ನ ರೂಪಾಂತರ ತಳಿಯಾಗಿರುವ ʼಡೆಲ್ಟಾʼ ಸೋಂಕು ತಗುಲಿದೆ ಎನ್ನಲಾಗಿದೆ.

ಇದನ್ನೂ ಓದಿ: 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು