ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೃಥ್ವಿ ಶಾ, ಸಂಜು ಸ್ಯಾಮ್ಸನ್ ಆಟದ ರಂಗು: ಭಾರತ 'ಎ' ತಂಡಕ್ಕೆ ಭರ್ಜರಿ ಗೆಲುವು

Last Updated 22 ಜನವರಿ 2020, 19:45 IST
ಅಕ್ಷರ ಗಾತ್ರ

ಲಿಂಕನ್, ನ್ಯೂಜಿಲೆಂಡ್: ಭಾರತ ತಂಡದಲ್ಲಿ ಮತ್ತೆ ಆಡುವ ಅವಕಾಶ ಸಿಕ್ಕ ಖುಷಿಯಲ್ಲಿರುವ ಪೃಥ್ವಿ ಶಾ ಮತ್ತು ಸಂಜು ಸ್ಯಾಮ್ಸನ್ ನ್ಯೂಜಿಲೆಂಡ್ ಎ ತಂಡದ ವಿರುದ್ಧದ ಏಕದಿನ ಪಂದ್ಯದಲ್ಲಿ ಭಾರತ ‘ಎ’ ಬಳಗದ ಗೆಲುವಿಗೆ ಕಾರಣರಾದರು.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಭಾರತ ಎ ತಂಡವು, ಆತಿಥೇಯರನ್ನು ಸಾಧಾರಣ ಮೊತ್ತಕ್ಕೆ ಕಟ್ಟಿಹಾಕಿತು. ಮೊಹಮ್ಮದ್ ಸಿರಾಜ್ (33ಕ್ಕೆ3) ಮತ್ತು ಅಕ್ಷರ್ ಪಟೇಲ್ (31ಕ್ಕೆ2) ಅವರ ಬೌಲಿಂಗ್ ಎದುರು ಕುಸಿದ ನ್ಯೂಜಿಲೆಂಡ್ ಎ ತಂಡವು 48.3 ಓವರ್‌ಗಳಲ್ಲಿ 230 ರನ್ ಗಳಿಸಿತು.

ಗುರಿ ಬೆನ್ನಟ್ಟಿದ ಭಾರತ ಎ ತಂಡಕ್ಕೆ ಪ್ರಥ್ವಿ ಶಾ (48; 35ಎಸೆತ, 5ಬೌಂಡರಿ, 3ಸಿಕ್ಸರ್) ಮತ್ತು ಸಂಜು ಸ್ಯಾಮ್ಸನ್ (39; 21ಎ, 3ಬೌಂ 2ಸಿ) ಗೆಲುವಿನ ದಾರಿ ತೋರಿಸಿದರು. ತಂಡವು 123 ಎಸೆತಗಳು ಬಾಕಿಯಿರುವಾಗಲೇ 5 ವಿಕೆಟ್‌ಗಳಿಂದ ಜಯಿಸಿತು. ಅರ್ಧಶತಕಕ್ಕೆ ಎರಡು ರನ್‌ಗಳ ಅವಶ್ಯಕತೆ ಇದ್ದ ಸಂದರ್ಭದಲ್ಲಿಯೇ ಪೃಥ್ವಿ ಅವರನ್ನು ನಿಶಾಮ್ ಔಟ್ ಮಾಡಿದರು. ಕನ್ನಡಿಗ ಮಯಂಕ್ ಅಗರವಾಲ್ (29; 29 ಎ, 2ಬೌಂ) ಮತ್ತು ನಾಯಕ ಶುಭಮನ್ ಗಿಲ್ (30; 35ಎ, 3ಬೌಂ) ತಮ್ಮ ಅಲ್ಪಕಾಣಿಕೆ ನೀಡಿದರು.

ಸೂರ್ಯಕುಮಾರ್ ಯಾದವ್ (35; 19ಎ, 6ಬೌಂ, 1ಸಿ) ಗಮನ ಸೆಳೆಯುವಂತಹ ಆಟವಾಡಿದರು.

ಸಂಕ್ಷಿಪ್ತ ಸ್ಕೋರು: ನ್ಯೂಜಿಲೆಂಡ್ ‘ಎ’: 48.3 ಓವರ್‌ಗಳಲ್ಲಿ 230 (ರವೀಂದ್ರ 49, ಗ್ಲೆನ್ ಫಿಲಿಪ್ಸ್ 24, ಟಾಮ್ ಬ್ರೂಸ್ 47,ಮೆಕಾಂಚಿ 34, ಖಲೀಲ್ ಅಹಮದ್ 46ಕ್ಕೆ2, ಮೊಹಮ್ಮದ್ ಸಿರಾಜ್ 33ಕ್ಕೆ3, ಅಕ್ಷರ್ ಪಟೇಲ್ 31ಕ್ಕೆ2)

ಭಾರತ ‘ಎ’: 29.3 ಓವರ್‌ಗಳಲ್ಲಿ 5ಕ್ಕೆ231 (ಪೃಥ್ವಿ ಶಾ 48, ಮಯಂಕ್ ಅಗರವಾಲ್ 29, ಶುಭಮನ್ ಗಿಲ್ 30, ಸಂಜು ಸ್ಯಾಮ್ಸನ್ 39, ಸೂರ್ಯಕುಮಾರ್ ಯಾದವ್ 35, ವಿಜಯಶಂಕರ್ 20, ಜೇಮ್ಸ್ ನಿಶಾಮ್ 25ಕ್ಕೆ2)

ಫಲಿತಾಂಶ: ಭಾರತ ‘ಎ’ ತಂಡಕ್ಕೆ 5 ವಿಕೆಟ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT