ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೌರಭ್, ರಾಹುಲ್ ಮೋಡಿ: ಭಾರತಕ್ಕೆ ಇನಿಂಗ್ಸ್ ಮುನ್ನಡೆ

ಭಾರತ ಎ–ನ್ಯೂಜಿಲೆಂಡ್ ಎ ಟೆಸ್ಟ್: ಮಾರ್ಕ್ ಚಾಪಮನ್–ಸೀನ್ ಸೊಲಿಯಾ ಶತಕದ ಜೊತೆಯಾಟ
Last Updated 16 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಸ್ಪಿನ್ ಜೋಡಿ’ ಸೌರಭ್ ಕುಮಾರ್ ಹಾಗೂ ರಾಹುಲ್ ಚಾಹರ್ ಮಾಡಿದ ಮೋಡಿಯಿಂದಾಗಿ ಭಾರತ ಎ ತಂಡವು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ನ್ಯೂಜಿಲೆಂಡ್ ಎ ವಿರುದ್ಧದ ‘ಟೆಸ್ಟ್‌’ನಲ್ಲಿ ಮೊದಲ ಇನಿಂಗ್ಸ್ ಮನ್ನಡೆ ಗಳಿಸಿತು.

ಒಟ್ಟು 11 ವಿಕೆಟ್‌ಗಳು ಪತನವಾದ ಎರಡನೇ ದಿನದಾಟದಲ್ಲಿ ನ್ಯೂಜಿಲೆಂಡ್ ಎ ತಂಡವು 71.2 ಓವರ್‌ಗಳಲ್ಲಿ 237 ರನ್‌ ಗಳಿಸಿತು. ಪ್ರಥಮ ಇನಿಂಗ್ಸ್‌ನಲ್ಲಿ 56 ರನ್‌ಗಳ ಹಿನ್ನಡೆ ಅನುಭವಿಸಿತು. ಎಡಗೈ ಸ್ಪಿನ್ನರ್ ಸೌರಭ್ ಕುಮಾರ್ (48ಕ್ಕೆ4) ಹಾಗೂ ರಾಹುಲ್ (53ಕ್ಕ3) ಎದುರಾಳಿ ತಂಡದ ಪತನಕ್ಕೆ ಕಾರಣರಾದರು. ಪ್ರವಾಸಿ ಬಳಗವು 99 ರನ್‌ಗಳಿಗೆ ಐದು ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿಮಾರ್ಕ್ ಚಾಪಮನ್ (92; 115ಎ, 4X8, 6X2) ಮತ್ತು ಸೀನ್ ಸೊಲಿಯಾ (54; 111ಎ, 4X7) ಐದನೇ ವಿಕೆಟ್ ಜೊತೆಯಾಟದಲ್ಲಿ 114 ರನ್‌ ಸೇರಿಸಿದರು. ಇದರಿಂದಾಗಿ ತಂಡವು ಅಲ್ಪಮೊತ್ತಕ್ಕೆ ಕುಸಿಯುವುದು ತಪ್ಪಿತು.

ಎರಡನೇ ಇನಿಂಗ್ಸ್‌ ಆರಂಭಿಸಿದ ಭಾರತವು ಶುಕ್ರವಾರ ದಿನದಾಟದ ಕೊನೆಗೆ 11 ಓವರ್‌ಗಳಲ್ಲಿ 1 ವಿಕೆಟ್‌ಗೆ 40 ರನ್‌ ಗಳಿಸಿದೆ. ಆರಂಭಿಕ ಪ್ರಿಯಾಂಕ್ ಪಾಂಚಾಲ್ (ಬ್ಯಾಟಿಂಗ್ 17) ಹಾಗೂ ಋತುರಾಜ್ ಗಾಯಕವಾಡ (ಬ್ಯಾಟಿಂಗ್ 18) ಕ್ರೀಸ್‌ನಲ್ಲಿದ್ದಾರೆ.ಪಂದ್ಯದ ಮೊದಲ ದಿನವಾದ ಗುರುವಾರ ಆತಿಥೇಯ ತಂಡವು ಋತುರಾಜ್ ಗಳಿಸಿದ ಶತಕದ ಬಲದಿಂದ ಭಾರತ ಎ ತಂಡವು 293 ರನ್‌ ಗಳಿಸಿತ್ತು.

ಪಂದ್ಯದಲ್ಲಿ ಇನ್ನೂ ಎರಡು ದಿನಗಳು ಬಾಕಿಯಿವೆ. ಸರಣಿಯ ಮೊದಲ ಎರಡೂ ಪಂದ್ಯಗಳು ಡ್ರಾ ಆಗಿವೆ. ಈ ಪಂದ್ಯದಲ್ಲಿ ಜಯಿಸಿದವರಿಗೆ ಸರಣಿ ಒಲಿಯಲಿದೆ. ಪ್ರಿಯಾಂಕ್ ಪಾಂಚಾಲ್ ಬಳಗಕ್ಕೆ ಜಯದ ಅವಕಾಶ ಹೆಚ್ಚಿದೆ. 96 ರನ್‌ಗಳ ಮುನ್ನಡೆಯಲಿದೆ. 300 ರಿಂದ 325 ರನ್‌ಗಳ ಗುರಿಯನ್ನು ಎದುರಾಳಿ ತಂಡಕ್ಕೆ ನೀಡುವ ನಿರೀಕ್ಷೆ ಇದೆ.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಭಾರತ ಎ: 86.4 293. ನ್ಯೂಜಿಲೆಂಡ್ ಎ: 71.2 ಓವರ್‌ಗಳಲ್ಲಿ 237 (ಡೇನ್ ಕ್ಲೀವರ್ 34, ಮಾರ್ಕ್ ಚಾಪಮನ್ 92, ಸೀನ್ ಸೊಲಿಯಾ 54, ಮುಕೇಶ್ ಕುಮಾರ್ 48ಕ್ಕೆ2, ಸೌರಭ್ ಕುಮಾರ್ 48ಕ್ಕೆ4, ರಾಹುಲ್ ಚಾಹರ್ 53ಕ್ಕೆ3).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT