ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಋತುರಾಜ್, ಗಿಲ್ ಅಮೋಘ ಆಟ: ಭಾರತ ‘ಎ’ ತಂಡಕ್ಕೆ ಜಯಭೇರಿ

Last Updated 18 ಜನವರಿ 2020, 10:48 IST
ಅಕ್ಷರ ಗಾತ್ರ

ಲಿಂಕನ್, ನ್ಯೂಜಿಲೆಂಡ್ : ಋತುರಾಜ್ ಗಾಯಕವಾಡ್ ಮತ್ತು ನಾಯಕ ಶುಭಮನ್ ಗಿಲ್ ಅವರ ಬ್ಯಾಟಿಂಗ್ ಬಲದಿಂದ ಭಾರತ ‘ಎ’ ತಂಡವು ಶುಕ್ರವಾರ ಇಲ್ಲಿ ನಡೆದ ಅಭ್ಯಾಸ ಪಂದ್ಯದಲ್ಲಿ ನ್ಯೂಜಿಲೆಂಡ್ ಇಲೆವನ್ ವಿರುದ್ಧ 92 ರನ್‌ಗಳಿಂದ ಜಯಿಸಿತು.

ಮೊದಲು ಬ್ಯಾಟಿಂಗ್ ಮಾಡಿದ ಭಾರತ ಎ ತಂಡವು 50 ಓವರ್‌ಗಳಲ್ಲಿ 8ಕ್ಕೆ279 ರನ್ ಗಳಿಸಿತು. ಗುರಿ ಬೆನ್ನತ್ತಿದ ಆತಿಥೇಯ ತಂಡವು 41.1 ಓವರ್‌ಗಳಲ್ಲಿ 187 ರನ್‌ಗಳಿಗೆ ಕುಸಿಯಿತು. ಎಡಗೈ ಮಧ್ಯಮವೇಗಿ ಖಲೀಲ್ ಅಹಮದ್ ನಾಲ್ಕು ವಿಕೆಟ್ ಗಳಿಸಿ ಭಾರತ ಎ ಗೆಲುವಿಗೆ ತಮ್ಮ ಕಾಣಿಕೆ ನೀಡಿದರು.

ಆರಂಭಿಕ ಬ್ಯಾಟ್ಸ್‌ಮನ್ ಋತುರಾಜ್ (93; 103ಎಸೆತ) ನಾಯಕ ಗಿಲ್ (50; 66ಎಸೆತ) ಎರಡನೇ ವಿಕೆಟ್ ಜೊತೆಯಾಟದಲ್ಲಿ 89 ರನ್‌ ಸೇರಿಸಿದರು. ಕನ್ನಡಿಗ ಮಯಂಕ್ ಅಗರವಾಲ್ (8 ರನ್) ಹೆಚ್ಚು ರನ್ ಗಳಿಸುವಲ್ಲಿ ವಿಫಲರಾದರು.

ಆದರೆ ಗಿಲ್ ಮತ್ತು ಋತುರಾಜ್ ಅವರ ಅಬ್ಬರದ ಆಟಕ್ಕೆ ಬೌಲರ್‌ಗಳು ಬಸವಳಿದರು. ಗಿಲ್ ಹೊಡೆತಕ್ಕೆ ಚೆಂಡು ಏಳು ಬಾರಿ ಬೌಂಡರಿಗೆರೆಯನ್ನು ಮುತ್ತಿಕ್ಕಿ ಹೋಯಿತು. ಅವರು ಔಟಾದ ನಂತರ ಗಾಯಕವಾಡ್ ಅವರೊಂದಿಗೆ ಸೇರಿದ ಸೂರ್ಯಕುಮಾರ್ ಯಾದವ್ (50; 48ಎ) ಅಬ್ಬರಿಸಿದರು. ಬ್ಯಾಟಿಂಗ್ ಅವಕಾಶ ಪಡೆದ ಕೃಣಾಲ್ ಪಾಂಡ್ಯ (31ಎಸೆತಗಳಲ್ಲಿ 41) ಕೂಡ ಮಿಂಚಿದರು. ಆದರೆ, ಸಂಜು ಸ್ಯಾಮ್ಸನ್ (4) ಮತ್ತು ವಿಜಯಶಂಕರ್ (13) ಸಿಕ್ಕ ಅವಕಾಶ ಬಳಸಿಕೊಳ್ಳಲಿಲ್ಲ.

ನ್ಯೂಜಿಲೆಂಡ್ ತಂಡದ ಜೇಕಬ್ ಭೂಲಾ (50) ಮತ್ತು ಜ್ಯಾಕ್ ಬಾಯ್ಲ್ (42) ಮೊದಲ ವಿಕೆಟ್ ಜೊತೆಯಾಟದಲ್ಲಿ 82 ರನ್ ಗಳಿಸಿ ಉತ್ತಮ ಆರಂಭ ನೀಡಿದರು. ಆದರೆ ಖಲೀಲ್ ಮತ್ತು ಮೊಹಮ್ಮದ್ ಸಿರಾಜ್ (33ಕ್ಕೆ2) ಉತ್ತಮ ದಾಳಿಯಿಂದಾಗಿ ತಂಡವು ಗೆದ್ದಿತು.

ಸಂಕ್ಷಿಪ್ತ ಸ್ಕೋರು: ಭಾರತ ‘ಎ’ : 50 ಓವರ್‌ಗಳಲ್ಲಿ 8ಕ್ಕೆ279 (ಋತುರಾಜ್ ಗಾಯಕವಾಡ್ 93, ಸೂರ್ಯಕುಮಾರ್ ಯಾದವ್ 50, ಶುಭಮನ್ ಗಿಲ್ 50), ನ್ಯೂಜಿಲೆಂಡ್: 41.1 ಓವರ್‌ಗಳಲ್ಲಿ 187 (ಜೇಕಬ್ ಭೂಲಾ 50, ಖಲೀಲ್ ಅಹಮದ್ 4ಕ್ಕೆ43) ಫಲಿತಾಂಶ: ಭಾರತ ‘ಎ’ ತಂಡಕ್ಕೆ 92 ರನ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT