ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ ‘ಎ’–ಆಸ್ಟ್ರೇಲಿಯಾ ‘ಎ’ ಹಣಾಹಣಿ: ಮುಂಬೈನಲ್ಲಿ ಪಂದ್ಯ ಇಂದು

ಟ್ವೆಂಟಿ–20 ಕ್ರಿಕೆಟ್
Last Updated 21 ಅಕ್ಟೋಬರ್ 2018, 20:00 IST
ಅಕ್ಷರ ಗಾತ್ರ

ಮುಂಬೈ: ಭಾರತ ‘ಎ’ ಮತ್ತು ಆಸ್ಟ್ರೇಲಿಯಾ ‘ಎ’ ತಂಡಗಳು ಸೋಮವಾರ ನಡೆಯಲಿರುವ ಟ್ವೆಂಟಿ–20 ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.

ಮುಂದಿನ ತಿಂಗಳು ನಡೆಯಲಿರುವ ಟ್ವೆಂಟಿ–20 ಮಹಿಳಾ ವಿಶ್ವಕಪ್ ಟೂರ್ನಿಯ ಆರಂಭಕ್ಕೂ ಮುನ್ನ ಈ ಸರಣಿಯು ಉಭಯ ತಂಡಗಳ ಅಭ್ಯಾಸಕ್ಕೆ ಪೂರಕವಾಗಿದೆ.

ಬಾಂದ್ರಾ–ಕುರ್ಲಾ ಕಾಂಪ್ಲೆಕ್ಸ್‌ (ಬಿಕೆಸಿ) ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಈಚೆಗೆ ಮುಕ್ತಾಯವಾದ ಏಕದಿನ ಸರಣಿಯಲ್ಲಿ ಭಾರತ ಎ ತಂಡವು ಸೋತಿತ್ತು.

ತಂಡದ ನಾಯಕತ್ವವವನ್ನು ಹರ್ಮನ್‌ಪ್ರೀತ್‌ ಕೌರ್ ವಹಿಸಲಿದ್ದಾರೆ. ಅನುಭವಿ ಆಟಗಾರ್ತಿಯರಾದ ಮಿಥಾಲಿ ರಾಜ್, ಸ್ಮೃತಿ ಮಂದಾನ , ಯುವ ಆಲ್‌ರೌಂಡರ್ ಜೆಮಿಮಾ ರಾಡ್ರಿಗಸ್ ಅವರು ತಂಡಕ್ಕೆ ಆಸರೆಯಾಗುವ ಸಾಮರ್ಥ್ಯ ಹೊಂದಿದ್ದಾರೆ. ಕನ್ನಡತಿ ವೇದಾ ಕೃಷ್ಣಮೂರ್ತಿ ಕೂಡ ಚುಟುಕು ಕ್ರಿಕೆಟ್‌ ಆಡಿರುವ ಅನುಭವಿಯಾಗಿದ್ದಾರೆ.

ತಂಡಗಳು ಇಂತಿವೆ: ಭಾರತ ‘ಎ’: ಹರ್ಮನ್‌ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂದಾನಾ (ಉಪನಾಯಕಿ), ಮಿಥಾಲಿ ರಾಜ್, ಜಿಮಿಮಾ ರಾಡ್ರಿಗಸ್, ವೇದಾ ಕೃಷ್ಣಮೂರ್ತಿ, ದೀಪ್ತಿ ಶರ್ಮಾ, ತಾನ್ಯಾ ಭಾಟಿಯಾ (ವಿಕೆಟ್‌ಕೀಪರ್), ಪೂನಮ್ ಯಾದವ್, ರಾಧಾ ಯಾದವ್, ಅನುಜಾ ಪಾಟೀಲ, ಏಕ್ತಾ ಬಿಷ್ಠ್ ಡಿ. ಹೇಮಲತಾ, ಮಾನಸಿ ಜೋಶಿ, ಪೂಜಾ ವಸ್ತ್ರಕರ್, ಅರುಂಧತಿ ರೆಡ್ಡಿ.

ಆಸ್ಟ್ರೇಲಿಯಾ ‘ಎ’: ಸಮಂತಾ ಬೇಟ್ಸ್‌, ಮೈಥಲನ್ ಬ್ರೌನ್, ಲಾರೆನ್ ಚೀಟ್ಲೆ, ಪೀಪಾ ಕ್ಲೇರಿ, ಜೋಸೆಫೈನ್ ದೂಲೆ, ಹೀಟರ್ ಗ್ರಹಾಂ, ಸ್ಯಾಮಿ ಜೊ ಜಾನ್ಸನ್, ತಾಹಿಲಾ ಮೆಕ್‌ಗ್ರಾ, ಚೊಲೆ ಪಿಪಾರೊ, ಜಾರ್ಜಿಯಾ ರೆಡ್‌ಮೈನ್, ನವೊಮೆ ಸ್ಟಾಲೆನ್‌ಬರ್ಗ್, ಮಾಲಿ ಸ್ಟಾರ್ನೊ, ಬೆಲಿಂದಾ ವಾಕ್ರೇವ್, ಅಮೇಂಡಾ ಜೇಡ್ ವೆಲ್ಲಿಂಗ್ಟನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT