ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಕ್ರಿಕೆಟ್‌: ಶುಭಾರಂಭದ ನಿರೀಕ್ಷೆಯಲ್ಲಿ ಭಾರತ

15ಕ್ಕೆ ಆಸ್ಟ್ರೇಲಿಯಾ ‘ಎ’ ವಿರುದ್ಧ ಮೊದಲ ಏಕದಿನ ಪಂದ್ಯ
Last Updated 14 ಅಕ್ಟೋಬರ್ 2018, 14:34 IST
ಅಕ್ಷರ ಗಾತ್ರ

ಮುಂಬೈ: ಭಾರತ ಮಹಿಳಾ ‘ಎ’ ಕ್ರಿಕೆಟ್‌ ತಂಡ ಆಸ್ಟ್ರೇಲಿಯಾ ‘ಎ’ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಶುಭಾರಂಭ ಮಾಡುವ ಹುಮ್ಮಸ್ಸಿನಲ್ಲಿದೆ.

ಉಭಯ ತಂಡಗಳ ನಡುವಣ ಮೊದಲ ಪಂದ್ಯ ಬಾಂದ್ರಾ ಕುರ್ಲಾ ಕ್ರೀಡಾ ಸಂಕೀರ್ಣದ ಮೈದಾನದಲ್ಲಿ ಸೋಮವಾರ ನಡೆಯಲಿದೆ. ಎರಡು ಮತ್ತು ಮೂರನೇ ಪಂದ್ಯಗಳು ಇದೇ ಮೈದಾನದಲ್ಲಿ ಕ್ರಮವಾಗಿ ಅಕ್ಟೋಬರ್‌ 17 ಮತ್ತು 19ರಂದು ಜರುಗಲಿವೆ.

ಭಾರತದ ಯುವ ಆಟಗಾರ್ತಿಯರಿಗೆ ಸಾಮರ್ಥ್ಯ ಸಾಬೀತುಪಡಿಸಲು ಈ ಸರಣಿ ವೇದಿಕೆಯಾಗಿದೆ. ನಾಯಕಿ ಪೂನಮ್‌ ರಾವತ್‌, ಎಲ್ಲರ ಆಕರ್ಷಣೆಯಾಗಿದ್ದಾರೆ. ಹೋದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್‌ನಲ್ಲಿ ಭಾರತ ತಂಡ ಫೈನಲ್‌ ಪ್ರವೇಶಿಸುವಲ್ಲಿ ಪೂನಮ್‌ ನಿರ್ಣಾಯಕ ಪಾತ್ರ ವಹಿಸಿದ್ದರು.

ಕರ್ನಾಟಕದ ರಾಜೇಶ್ವರಿ ಗಾಯಕವಾಡ, ಅನುಭವಿಗಳಾದ ಮೋನಾ ಮೆಷ್ರಮ್‌ ಮತ್ತು ಶಿಖಾ ಪಾಂಡೆ ಅವರು ತಂಡದ ಶಕ್ತಿಯಾಗಿದ್ದಾರೆ.

ವಿಕೆಟ್‌ ಕೀಪರ್‌ ಸುಷ್ಮಾ ವರ್ಮಾ, ದೇವಿಕಾ ವೈದ್ಯ ಅವರೂ ಮಿಂಚುವ ಹುಮ್ಮಸ್ಸಿನಲ್ಲಿದ್ದಾರೆ.

ಆಸ್ಟ್ರೇಲಿಯಾ ‘ಎ’ ತಂಡ ಕೂಡಾ ಬಲಿಷ್ಠವಾಗಿದೆ. ಸಮಂತಾ ಬೇಟ್ಸ್‌ ಲಾರೆನ್‌ ಚೀಟಲ್‌, ತಹಲಿಯಾ ಮೆಕ್‌ಗ್ರಾಥ್‌ ಅವರಂತಹ ಪ್ರತಿಭಾನ್ವಿತರು ಈ ತಂಡದಲ್ಲಿದ್ದಾರೆ.

ತಂಡಗಳು ಇಂತಿವೆ

ಭಾರತ ‘ಎ’: ಪೂನಮ್‌ ರಾವತ್‌ (ನಾಯಕಿ), ಪ್ರಿಯಾ ಪೂನಿಯಾ, ದೇವಿಕಾ ವೈದ್ಯ, ಮೋನಾ ಮೆಷ್ರಮ್‌, ತನುಶ್ರೀ ಸರ್ಕಾರ್‌, ಸುಷ್ಮಾ ವರ್ಮಾ (ವಿಕೆಟ್‌ ಕೀಪರ್‌), ರಾಜೇಶ್ವರಿ ಗಾಯಕವಾಡ, ಸುಶ್ರೀ ದಿವ್ಯದರ್ಶಿನಿ, ಸಿ.ಪ್ರತ್ಯೂಷಾ, ರೀಮಾಲಕ್ಷ್ಮಿ ಎಕ್ಕಾ, ಶಿಖಾ ಪಾಂಡೆ, ಎಲ್‌.ನೇತ್ರಾ, ಹೇಮಾಲಿ ಬೊರ್ವಾಂಕರ್‌, ಕವಿತಾ ಪಾಟೀಲ ಮತ್ತು ಪ್ರೀತಿ ಬೋಸ್‌.

ಆಸ್ಟ್ರೇಲಿಯಾ ‘ಎ’: ಸಮಂತ ಬೇಟ್ಸ್‌, ಮೈತ್ಲಾನ್‌ ಬ್ರೌನ್‌, ಲಾರೆನ್‌ ಚೀಟಲ್‌, ಪಿಯೆಪಾ ಕ್ಲೇರಿ, ಜೋಸೆಫಿನ್‌ ಡೂಲೆ, ಹೀಥರ್‌ ಗ್ರಹಾಂ, ಸ್ಯಾಮಿ ಜೊ ಜಾನ್ಸನ್‌, ತಹಲಿಯಾ ಮೆಕ್‌ಗ್ರಾಥ್‌, ಕ್ಲೋಯೆ ಪಿಪಾರೊ, ಜಾರ್ಜಿಯಾ ರೆಡ್‌ಮೇನ್‌, ನವೊಮಿ ಸ್ಟಾಲೆನ್‌ಬರ್ಗ್‌, ಮಾಲಿ ಸ್ಟ್ರಾನೊ, ಬೆಲಿಂದಾ ವಕರೆವಾ ಮತ್ತು ಅಮಂಡಾ ಜೇಡ್‌ ವೆಲ್ಲಿಂಗ್ಟನ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT