ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs AUS Highlights: ಸ್ಪಿನ್‌ ಕಣದಲ್ಲಿ ಭಾರತ ಜಯಭೇರಿ

ಬಾರ್ಡರ್‌–ಗಾವಸ್ಕರ್ ಟ್ರೋಫಿ: ‘ಸೆವೆನ್ ಸ್ಟಾರ್’ ಜಡೇಜ; ‘ತ್ರೀ ಸ್ಟಾರ್’ ಅಶ್ವಿನ್; ಮಣಿದ ಆಸ್ಟ್ರೇಲಿಯಾ
Last Updated 19 ಫೆಬ್ರುವರಿ 2023, 22:30 IST
ಅಕ್ಷರ ಗಾತ್ರ

ನವದೆಹಲಿ: ಸೌರಾಷ್ಟ್ರದ ರವೀಂದ್ರ ಜಡೇಜ ಆಸ್ಟ್ರೇಲಿಯಾ ಕ್ರಿಕೆಟ್ ತಂಡಕ್ಕೆ ಮತ್ತೆ ಸಿಂಹಸ್ವಪ್ನರಾದರು. ಅವರ ಎಡಗೈ ಸ್ಪಿನ್ ಮೋಡಿಗೆ ಪ್ಯಾಟ್ ಕಮಿನ್ಸ್ ಬಳಗ ಶರಣಾಯಿತು.

ಇದರಿಂದಾಗಿ ಭಾರತ ತಂಡವು ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಬಾರ್ಡರ್–ಗಾವಸ್ಕರ್ ಟ್ರೋಫಿ ಟೂರ್ನಿಯ 2ನೇ ಟೆಸ್ಟ್ ಪಂದ್ಯದ ಮೂರನೇ ದಿನವೇ ಜಯಭೇರಿ ಬಾರಿ ಸಿತು. ರೋಹಿತ್ ಬಳಗವು ಭಾನುವಾರ ಚಹಾವಿರಾಮಕ್ಕೂ ಮುನ್ನ 6 ವಿಕೆಟ್‌ ಗಳಿಂದ ಗೆದ್ದು ನಾಲ್ಕು ಪಂದ್ಯಗಳ ಸರಣಿಯಲ್ಲಿ 2–0 ಮುನ್ನಡೆ ಸಾಧಿಸಿತು. ಇದರೊಂದಿಗೆ ಆಸ್ಟ್ರೇಲಿಯಾಕ್ಕೆ ಸರಣಿ ಜಯದ ಅವಕಾಶ ತಪ್ಪಿತು.ಇನ್ನೇನಿ ದ್ದರೂ ಉಳಿದೆರಡು ಪಂದ್ಯ ಗೆದ್ದು ಸಮ ಮಾಡಿಕೊಳ್ಳಲು ಪ್ರಯತ್ನಿಸಬೇಕು.

ಮೊದಲ ಇನಿಂಗ್ಸ್‌ನಲ್ಲಿ ಕೇವಲ 1 ರನ್ ಮುನ್ನಡೆ ಸಾಧಿಸಿದ್ದ ಪ್ರವಾಸಿ ಬಳಗವು ಆತಿಥೇಯರಿಗೆ ಬೃಹತ್ ಗುರಿಯೊಡ್ಡುವ ಯೋಚನೆಯಲ್ಲಿತ್ತು. ಆದರೆ, ಜಡೇಜ (12.1–1–42–7) ಕೈಯಿಂದ ಬಿಡುಗಡೆಯಾಗುತ್ತಿದ್ದ ಎಸೆತಗಳ ವೇಗ, ತಿರುವು ಮತ್ತು ಪುಟಿತ ವನ್ನು ಅಂದಾಜಿಸುವಲ್ಲಿ ಎಡವಿದ ಬ್ಯಾಟರ್‌ಗಳು ಕೈಕೈ ಹಿಸುಕಿಕೊಂಡರು. ಶನಿವಾರ ದಿನದಾಟದ ಮುಕ್ತಾಯಕ್ಕೆ ಆಸ್ಟ್ರೇಲಿಯಾ 1 ವಿಕೆಟ್‌ಗೆ 61 ರನ್ ಗಳಿಸಿತ್ತು. ಆದರೆ ಭಾನುವಾರ ಬೆಳಿಗ್ಗೆ ಈ ಮೊತ್ತಕ್ಕೆ 52 ರನ್‌ಗಳನ್ನು ಸೇರಿಸುವಷ್ಟರಲ್ಲಿ 9 ವಿಕೆಟ್‌ ಪತನ ವಾದವು. ಪ್ರವಾಸಿ ಬಳಗವು 113 ರನ್ ಗಳಿಸಿ ಆಲೌಟ್ ಆಯಿತು. ಮಾರ್ನಸ್‌ ಲಾಬುಷೇನ್ ಅವರು ಶ್ರೇಯಸ್ ಅಯ್ಯರ್ ಬಿಟ್ಟ ಕ್ಯಾಚ್‌ನಿಂದ ಸಿಕ್ಕ ಜೀವದಾನವನ್ನು ಬಳಸಿಕೊಳ್ಳುವಲ್ಲಿ ಎಡವಿದರು. ಆಫ್‌ಸ್ಪಿನ್ನರ್ ಅಶ್ವಿನ್ 3 ವಿಕೆಟ್‌ ತಮ್ಮದಾಗಿಸಿಕೊಂಡರು. 115 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ ಆಸ್ಟ್ರೇಲಿಯಾದ ಸ್ಪಿನ್ನರ್ ನೇಥನ್ ಲಯನ್ ಮತ್ತು ಟಾಡ್ ಮರ್ಫಿ ತಡೆಯೊಡ್ಡುವ ಪ್ರಯತ್ನ ಮಾಡಿದರು.

ಲಯನ್ ಎಸೆತಕ್ಕೆ ಮೊದಲ ಬಲಿಯಾದವರು ಕೆ.ಎಲ್. ರಾಹುಲ್. 3 ಎಸೆತಗಳನ್ನು ಆಡಿದ ಅವರು 1 ರನ್ ಗಳಿಸಿ ಅಲೆಕ್ಸ್‌ಗೆ ಕ್ಯಾಚಿತ್ತರು. ರೋಹಿತ್ ಮತ್ತು ಪೂಜಾರ 2ನೇ ವಿಕೆಟ್ ಜೊತೆ ಯಾಟದಲ್ಲಿ 33 ರನ್ ಸೇರಿಸಿದರು. ಅದ ರಲ್ಲಿ ರೋಹಿತ್ 155ರ ಸ್ಟ್ರೈಕ್‌ ರೇಟ್‌ನಲ್ಲಿ ರನ್ ಗಳಿಸಿದರು. 7ನೇ ಓವರ್‌
ನಲ್ಲಿ ರೋಹಿತ್ ರನ್ ಔಟ್ ಆದರು.

ನಂತರ ಇನಿಂಗ್ಸ್‌ನಲ್ಲಿ ಪೂಜಾರ ತಮ್ಮ ರಕ್ಷಣಾ ಆಟವನ್ನು ಬಿಟ್ಟು ಕ್ರೀಸ್‌ನಿಂದ ಮುನ್ನುಗ್ಗಿ ಹೊಡೆತಗಳನ್ನು ಪ್ರಯೋಗಿಸಿದರು. ಚೆಂಡು ಅನಿರೀಕ್ಷಿತ ಬೌನ್ಸ್ ಮತ್ತು ತಿರುವು ಪಡೆಯುತ್ತಿದ್ದ ಪಿಚ್‌ನಲ್ಲಿ ಇಂತಹ ಆಟ ಅಗತ್ಯ ವಿತ್ತು. ಇನ್ನೊಂದೆಡೆ ವಿರಾಟ್ ಕೊಹ್ಲಿ (20), ಶ್ರೇಯಸ್ ಅಯ್ಯರ್ (12) ಕಾಣಿಕೆ ನೀಡಿ ನಿರ್ಗ ಮಿಸಿದರು. ವಿಕೆಟ್‌ಕೀಪರ್ ಶ್ರೀಕರ್ ಭರತ್ (ಅಜೇಯ 23) ವಿಕೆಟ್‌ ಪತನಕ್ಕೆ ಅವಕಾಶ ನೀಡಲಿಲ್ಲ. 3 ಬೌಂಡರಿ ಹಾಗೂ 1ಸಿಕ್ಸರ್ ಸಿಡಿಸಿದರು.

ವಿಜಯಕ್ಕಾಗಿ ಒಂದು ರನ್‌ ಬೇಕಾ ಗಿದ್ದ ಸಂದರ್ಭದಲ್ಲಿ ಮರ್ಫಿ ಎಸೆತವನ್ನು ಬೌಂಡರಿಗೆರೆ ದಾಟಿಸಿದ ಪೂಜಾರ ತಮ್ಮ ನೂರನೇ ಟೆಸ್ಟ್ ಪಂದ್ಯದಲ್ಲಿ ವಿಜಯದ ಹೊಡೆತ ಬಾರಿಸಿದ ವಿಶ್ವದ ಎರಡನೇ ಆಟಗಾರನಾದರು. 17 ವರ್ಷಗಳ ಹಿಂದೆ ಸಿಡ್ನಿಯಲ್ಲಿ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್, ದಕ್ಷಿಣ ಆಫ್ರಿಕಾದ ಎದುರು ಈ ಸಾಧನೆ ಮಾಡಿದ್ದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: ಆಸ್ಟ್ರೇಲಿಯಾ: 78.4 ಓವರ್‌ಗಳಲ್ಲಿ 263. ಭಾರತ: 83.3 ಓವರ್‌ಗಳಲ್ಲಿ 262. ಎರಡನೇ ಇನಿಂಗ್ಸ್: ಆಸ್ಟ್ರೇ ಲಿಯಾ: 31.1 ಓವರ್‌ಗಳಲ್ಲಿ 113 (ಟ್ರಾವಿಸ್ ಹೆಡ್ 43, ಮಾರ್ನಸ್ ಲಾಬುಷೇನ್ 35, ಆರ್. ಅಶ್ವಿನ್ 59ಕ್ಕೆ3, ರವೀಂದ್ರ ಜಡೇಜ 42ಕ್ಕೆ7) ಭಾರತ: 26.4 ಓವರ್‌ಗಳಲ್ಲಿ 4 ವಿಕೆಟ್‌ಗೆ 118 (ರೋಹಿತ್ ಶರ್ಮಾ 31, ಚೇತೇಶ್ವರ್ ಪೂಜಾರ ಅಜೇಯ 31, ವಿರಾಟ್ ಕೊಹ್ಲಿ 20, ಶ್ರೀಕರ್ ಭರತ್ ಅಜೇಯ 23, ನೇಥನ್ ಲಯನ್ 49ಕ್ಕೆ2, ಟಾಡ್ ಮರ್ಫಿ 22ಕ್ಕೆ1) ಫಲಿತಾಂಶ: ಭಾರತಕ್ಕೆ 6 ವಿಕೆಟ್‌ ಜಯ. ಸರಣಿಯಲ್ಲಿ 2–0 ಮುನ್ನಡೆ. ಪಂದ್ಯಶ್ರೇಷ್ಠ: ರವೀಂದ್ರ ಜಡೇಜ. ಮುಂದಿನ ಪಂದ್ಯ: ಇಂದೋರ್‌ನಲ್ಲಿ ಮಾರ್ಚ್‌ 1ರಿಂದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT