ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs WI T20I: ಭಾರತಕ್ಕೆ ಮಣಿದ ವೆಸ್ಟ್ ಇಂಡೀಸ್‌; ರೋಹಿತ್ ಬಳಗಕ್ಕೆ ಸರಣಿ ಜಯ

Last Updated 6 ಆಗಸ್ಟ್ 2022, 21:08 IST
ಅಕ್ಷರ ಗಾತ್ರ

ಫ್ಲಾರಿಡಾ: ರಿಷಭ್‌ ಪಂತ್‌ ಅವರ ಉತ್ತಮ ಆಟ ಮತ್ತು ಎಲ್ಲ ಬೌಲರ್‌ಗಳ ಚುರುಕಿನ ದಾಳಿಯ ನೆರವಿನಿಂದ ಭಾರತ ತಂಡ, ವೆಸ್ಟ್ ಇಂಡೀಸ್ ಎದುರಿನ ನಾಲ್ಕನೇ ಟಿ20 ಕ್ರಿಕೆಟ್ ಪಂದ್ಯದಲ್ಲಿ 59 ರನ್‌ಗಳ ಜಯ ಸಾಧಿಸಿತು.

ಶನಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ರೋಹಿತ್‌ ಬಳಗ 20 ಓವರ್‌ಗಳಲ್ಲಿ 5 ವಿಕೆಟ್‌ಗೆ 191 ರನ್‌ ಪೇರಿಸಿದರೆ, ವಿಂಡೀಸ್‌ 19.1 ಓವರ್‌ಗಳಲ್ಲಿ 132 ರನ್‌ಗಳಿಗೆ ಆಲೌಟಾಯಿತು.

ಅರ್ಶದೀಪ್‌ ಸಿಂಗ್ (12ಕ್ಕೆ 3) ಮೂರು ವಿಕೆಟ್‌ ಪಡೆದರೆ ಆವೇಶ್‌ ಖಾನ್‌, ಅಕ್ಷರ್‌ ಪಟೇಲ್‌, ರವಿ ಬಿಷ್ಣೋಯ್‌ ಮತ್ತು ತಲಾ ಎರಡು ವಿಕೆಟ್‌ ಗಳಿಸಿದರು. ಈ ಜಯದೊಂದಿಗೆ ಐದು ಪಂದ್ಯಗಳ ಸರಣಿಯನ್ನು ಭಾರತ 3–1 ರಲ್ಲಿ ಗೆದ್ದುಕೊಂಡಿತು. ಕೊನೆಯ ಪಂದ್ಯ ಭಾನುವಾರ ನಡೆಯಲಿದೆ.

ರೋಹಿತ್‌, ರಿಷಭ್‌ ಆಸರೆ: ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ರೋಹಿತ್ (33; 16ಎಸೆತ, 4X2, 6X3) ಮತ್ತು ಸೂರ್ಯಕುಮಾರ್ (24; 14ಎ, 4X1, 6X2) ಮೊದಲ ವಿಕೆಟ್‌ಗೆ 53 ರನ್‌ ಸೇರಿಸಿದರು.

ಮಧ್ಯಮ ಕ್ರಮಾಂಕದಲ್ಲಿ ದೀಪಕ್ ಹೂಡಾ (21) ಮತ್ತು ರಿಷಭ್ ಪಂತ್ (44; 31ಎ) ಮಹತ್ವದ ಕಾಣಿಕೆ ನೀಡಿದರು. ರಿಷಭ್ 6 ಬೌಂಡರಿ ಹೊಡೆದರು. ಕೊನೆಯ ಓವರ್‌ಗಳಲ್ಲಿ ಸಂಜು ಸ್ಯಾಮ್ಸನ್‌ (ಔಟಾಗದೆ 30, 23 ಎ.) ಹಾಗೂ ಅಕ್ಷರ್‌ ಪಟೇಲ್‌ (ಔಟಾಗದೆ 20, 8 ಎ.) ಅವರ ಬೀಸಾಟದಿಂದ ತಂಡದ ಮೊತ್ತ 190ರ ಗಡಿ ದಾಟಿತು.

ಸಂಕ್ಷಿಪ್ತ ಸ್ಕೋರು: ಭಾರತ: 20 ಓವರ್‌ಗಳಲ್ಲಿ 5ಕ್ಕೆ 191 (ರೋಹಿತ್ ಶರ್ಮಾ 33, ಸೂರ್ಯಕುಮಾರ್ ಯಾದವ್ 24, ದೀಪಕ್ ಹೂಡಾ 21, ರಿಷಭ್ ಪಂತ್ 44, ಸಂಜು ಸ್ಯಾಮ್ಸನ್ ಔಟಾಗದೆ 30, ಅಲ್ಜರಿ ಜೋಸೆಫ್ 29ಕ್ಕೆ2, ಒಬೆದ್‌ ಮೆಕಾಯ್‌ 66ಕ್ಕೆ 2)

ವೆಸ್ಟ್‌ ಇಂಡೀಸ್: 19.1 ಓವರ್‌ಗಳಲ್ಲಿ 132 (ನಿಕೊಲಸ್ ಪೂರನ್ 24, ರೊವ್ಮನ್‌ ಪೊವೆಲ್‌ 24, ಶಿಮ್ರೊನ್‌ ಹೆಟ್ಮಯೆರ್‌ 19, ಆವೇಶ್‌ ಖಾನ್‌ 17ಕ್ಕೆ 2, ಅಕ್ಷರ್‌ ಪಟೇಲ್‌ 48ಕ್ಕೆ 2, ರವಿ ಬಿಷ್ಣೋಯ್‌ 27ಕ್ಕೆ 2, ಅರ್ಶದೀಪ್‌ ಸಿಂಗ್ 12ಕ್ಕೆ 3) ಫಲಿತಾಂಶ: ಭಾರತಕ್ಕೆ 59 ರನ್‌ ಗೆಲುವು, ಸರಣಿಯಲ್ಲಿ 3–1 ಮುನ್ನಡೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT