ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಲ್ಡರ್‌ ದಾಳಿಗೆ ದಂಗಾದ ಹನುಮ ಪಡೆ

‘ಎ’ ತಂಡಗಳ ನಡುವಣ ಎರಡನೇ ‘ಟೆಸ್ಟ್‌’: ಪಾಂಚಾಲ್‌–ದುಬೆ ಅರ್ಧಶತಕ
Last Updated 2 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ಪೋರ್ಟ್‌ ಆಫ್‌ ಸ್ಪೇನ್‌, ಟ್ರಿನಿಡಾಡ್‌: ಚೆಮರ್‌ ಹೋಲ್ಡರ್‌ (54ಕ್ಕೆ5) ಮತ್ತು ರೊಮೇರಿಯೊ ಶೆಫರ್ಡ್‌ (29ಕ್ಕೆ3) ಅವರ ದಾಳಿಗೆ ಗುರುವಾರ ರಾತ್ರಿ ಭಾರತ ‘ಎ’ ತಂಡದ ಬ್ಯಾಟ್ಸ್‌ಮನ್‌ಗಳು ಬೆದರಿದರು.

ಇದರಿಂದಾಗಿ ವೆಸ್ಟ್‌ ಇಂಡೀಸ್‌ ‘ಎ’ ಎದುರಿನ ಎರಡನೇ ‘ಟೆಸ್ಟ್‌’ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಹನುಮ ವಿಹಾರಿ ಬಳಗ 47 ಓವರ್‌ಗಳಲ್ಲಿ 190ರನ್‌ಗಳಿಗೆ ಆಲೌಟ್‌ ಆಯಿತು.

5 ವಿಕೆಟ್‌ಗೆ 243ರನ್‌ಗಳಿಂದ ಗುರುವಾರ ಮೊದಲ ಇನಿಂಗ್ಸ್‌ನ ಆಟ ಮುಂದುವರಿಸಿದ ಆತಿಥೇಯರು 113 ಓವರ್‌ಗಳಲ್ಲಿ 318ರನ್‌ ಪೇರಿಸಿದರು. ಎರಡನೇ ಇನಿಂಗ್ಸ್‌ ಶುರುಮಾಡಿರುವ ಈ ತಂಡ ಎರಡನೇ ದಿನದಾಟದ ಅಂತ್ಯಕ್ಕೆ 7 ಓವರ್‌ಗಳಲ್ಲಿ 4 ವಿಕೆಟ್‌ಗೆ 12ರನ್‌ ಗಳಿಸಿದೆ. ಇದರೊಂದಿಗೆ ಒಟ್ಟು 140ರನ್‌ಗಳ ಮುನ್ನಡೆ ಪಡೆದಿದೆ.

ಪ್ರಥಮ ಇನಿಂಗ್ಸ್‌ ಶುರುಮಾಡಿದ ಭಾರತ ‘ಎ’ ಮೊದಲ ಓವರ್‌ನಲ್ಲೇ ಆಘಾತ ಕಂಡಿತು. ಚೆಮರ್ ಹೋಲ್ಡರ್‌ ಹಾಕಿದ ಆರನೇ ಎಸೆತದಲ್ಲಿ ಆರಂಭಿಕ ಬ್ಯಾಟ್ಸ್‌ಮನ್‌ ಮಯಂಕ್‌ ಅಗರವಾಲ್‌ (4) ಔಟಾದರು.

ಅಭಿಮನ್ಯು ಈಶ್ವರನ್‌ (0), ನಾಯಕ ವಿಹಾರಿ (0) ಮತ್ತು ಅನಮೋಲ್‌ಪ್ರೀತ್‌ ಸಿಂಗ್‌ (0) ಅವರನ್ನೂ ಪೆವಿಲಿಯನ್‌ಗೆ ಕಳುಹಿಸಿದ ಹೋಲ್ಡರ್‌, ಭಾರತ ‘ಎ’ ತಂಡದ ಬ್ಯಾಟಿಂಗ್‌ ಶಕ್ತಿಗೆ ಪೆಟ್ಟು ನೀಡಿದರು. ಶ್ರೀಕರ್‌ ಭರತ್‌ (7) ಕೂಡ ವಿಕೆಟ್‌ ನೀಡಲು ಅವಸರಿಸಿದರು.

20ರನ್‌ಗಳಿಗೆ 5 ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಪ್ರವಾಸಿ ಪಡೆಗೆ ಪ್ರಿಯಾಂಕ್‌ ಪಾಂಚಾಲ್‌ (58; 125ಎ, 8ಬೌಂ) ಮತ್ತು ಶಿವಂ ದುಬೆ (79; 85ಎ, 11ಬೌಂ, 2ಸಿ) ಆಸರೆಯಾದರು.

ಇವರು ಆರನೇ ವಿಕೆಟ್‌ಗೆ 124ರನ್‌ ಕಲೆಹಾಕಿ ಹನುಮ ಬಳಗದ ಇನಿಂಗ್ಸ್‌ಗೆ ಜೀವ ತುಂಬಿದರು. 39ನೇ ಓವರ್‌ನಲ್ಲಿ ಪಾಂಚಾಲ್‌ ಔಟಾದರು. ನಂತರ ತಂಡ ಮತ್ತೆ ಕುಸಿತದ ಹಾದಿ ಹಿಡಿಯಿತು. ಆದರೆ ದುಬೆ ವಿಂಡೀಸ್‌ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. 46ನೇ ಓವರ್‌ವರೆಗೆ ಕ್ರೀಸ್‌ನಲ್ಲಿದ್ದ ಅವರು ತಂಡ 185ರ ಗಡಿ ಮುಟ್ಟುವಂತೆ ನೋಡಿಕೊಂಡರು.

ಸಂಕ್ಷಿಪ್ತ ಸ್ಕೋರ್‌: ವೆಸ್ಟ್‌ ಇಂಡೀಸ್‌ ‘ಎ’: ಪ್ರಥಮ ಇನಿಂಗ್ಸ್‌: 113 ಓವರ್‌ಗಳಲ್ಲಿ 318 (ರೇಮನ್‌ ರೀಫರ್‌ 27, ರಹಕೀಮ್‌ ಕಾರ್ನ್‌ವಾಲ್‌ ಔಟಾಗದೆ 56; ಮೊಹಮ್ಮದ್‌ ಸಿರಾಜ್‌ 63ಕ್ಕೆ3, ಸಂದೀಪ್‌ ವಾರಿಯರ್‌ 77ಕ್ಕೆ2, ಶಿವಂ ದುಬೆ 40ಕ್ಕೆ1, ಕೃಷ್ಣಪ್ಪ ಗೌತಮ್‌ 49ಕ್ಕೆ1, ಮಯಂಕ್‌ ಮಾರ್ಕಂಡೆ 79ಕ್ಕೆ3). ಮತ್ತು 7 ಓವರ್‌ಗಳಲ್ಲಿ 4 ವಿಕೆಟ್‌ಗೆ 12 (ಕ್ರೆಗ್‌ ಬ್ರಾಥ್‌ವೇಟ್‌ 10; ಮೊಹಮ್ಮದ್‌ ಸಿರಾಜ್‌ 8ಕ್ಕೆ1, ಸಂದೀಪ್‌ ವಾರಿಯರ್‌ 3ಕ್ಕೆ3).

ಭಾರತ ‘ಎ’: ಪ್ರಥಮ ಇನಿಂಗ್ಸ್‌; 47 ಓವರ್‌ಗಳಲ್ಲಿ 190 (ಪ್ರಿಯಾಂಕ್‌ ಪಾಂಚಾಲ್‌ 58, ಮಯಂಕ್‌ ಅಗರವಾಲ್‌ 4, ಶ್ರೀಕರ್‌ ಭರತ್‌ 7, ಶಿವಂ ದುಬೆ 79, ಕೃಷ್ಣಪ್ಪ ಗೌತಮ್‌ 18, ಮಯಂಕ್‌ ಮಾರ್ಕಂಡೆ 7, ಮೊಹಮ್ಮದ್‌ ಸಿರಾಜ್‌ 9; ಚೆಮರ್‌ ಹೋಲ್ಡರ್‌ 54ಕ್ಕೆ5, ರೊಮೇರಿಯೊ ಶೆಫರ್ಡ್‌ 29ಕ್ಕೆ3, ರೇಮನ್‌ ರೀಫರ್‌ 42ಕ್ಕೆ2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT