ಶುಕ್ರವಾರ, ಅಕ್ಟೋಬರ್ 18, 2019
28 °C

ಆಫ್ರಿಕಾ ವಿರುದ್ಧ ಟೆಸ್ಟ್‌: ಕನ್ನಡಿಗ ಮಯಂಕ್ ಅಗರ್‌ವಾಲ್‌ ಭರ್ಜರಿ ದ್ವಿಶತಕ

Published:
Updated:
ಮಯಂಕ್‌ ಅಗರವಾಲ್

ವಿಶಾಖಪಟ್ಟಣ: ದಕ್ಷಿಣ ಆಫ್ರಿಕಾ ಎದುರಿನ ಟೆಸ್ಟ್‌ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಕನ್ನಡಿಗ ಮಯಂಕ್‌ ಅಗರವಾಲ್ ಭರ್ಜರಿ ದ್ವಿಶತಕ ಸಿಡಿಸಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಮೊದಲ ಬಾರಿ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಕ್ರೀಸ್‌ಗೆ ಇಳಿದ ರೋಹಿತ್ ಶರ್ಮಾ ಮನಮೋಹಕ ಬ್ಯಾಟಿಂಗ್ ಮೂಲಕ ಗಮನ ಸೆಳೆದರೆ, ಕನ್ನಡಿಗ ಮಯಂಕ್‌ ಅಗರವಾಲ್ ಚುರುಕಿನ ಆಟದ ಮೂಲಕ ದ್ವಿಶತಕ ಬಾರಿಸಿದರು.

ರೋಹಿತ್‌ ಮತ್ತು ಮಯಂಕ್‌ ಅಬ್ಬರದ ಬ್ಯಾಟಿಂಗ್‌ ನೆರವಿನಿಂದ ಭಾರತ ಮೊದಲ ಇನ್ನಿಂಗ್ಸ್‌ನಲ್ಲಿ 502 ರನ್‌ಗಳಿಗೆ ಡಿಕ್ಲೆರ್‌ ಮಾಡಿಕೊಂಡಿದೆ. ರೋಹಿತ್‌ ಹಾಗೂ ಮಯಂಕ್‌ ನಂತರ ಬಂದ ಬ್ಯಾಟ್ಸ್‌ಮನ್‌ಗಳು ಕ್ರೀಸ್‌ನಲ್ಲಿ ಹೆಚ್ಚು ಹೊತ್ತು ನಿಲ್ಲದೇ ಹರಿಣಗಳಿಗೆ ಬಹು ಬೇಗನೆ ವಿಕೆಟ್‌ ಒಪ್ಪಿಸಿದರು. ಪೂಜಾರ 6, ಕೊಹ್ಲಿ 20, ರಹಾನೆ 15,  ಹನುಮ ವಿಹಾರಿ 10, ವೃದ್ದಿಮಾನ್‌ ಸಹಾ  21 ರನ್‌ ಗಳಿಸಿ ಔಟಾದರು. ರವೀಂದ್ರ ಜಡೆಜಾ ಔಟಾಗದೇ 30 ರನ್‌ ಬಾರಿಸಿದರು. ಭಾರತ 7 ವಿಕೆಟ್‌ ನಷ್ಟಕ್ಕೆ 502 ರನ್‌ ಗಳಿಸಿದ್ದಾಗ ನಾಯಕ ಕೊಹ್ಲಿ ಡಿಕ್ಲೆರ್‌ ಮಾಡಿಕೊಂಡರು.  

ಮೊದಲ ಇನ್ನಿಂಗ್ಸ್‌ ಆರಂಭಿಸಿದ ದಕ್ಷಿಣಾ ಆಫ್ರಿಕಾ ಆರಂಭಿಕ ಅಘಾತ ಅನುಭವಿಸಿದೆ. ಆಫ್ರಿಕಾ 14 ರನ್‌ ಗಳಿಸಿದ್ದಾಗ ಮೊದಲ ವಿಕೆಟ್‌ ಕಳೆದುಕೊಂಡಿತು. 39 ರನ್‌ ಪೇರಿಸುವಷ್ಟರಲ್ಲಿ 3 ವಿಕೆಟ್‌ ಕಳೆದುಕೊಂಡಿತು. ರವಿಚಂದ್ರನ್‌ ಆಶ್ವಿನ್‌ 2 ಹಾಗೂ ರವೀಂದ್ರ ಜಡೆಜಾ 1 ವಿಕೆಟ್‌ ಪಡೆದರು. ದಿನದಾಟದ ಅಂತ್ಯಕ್ಕೆ ಆಫ್ರಿಕಾ 3 ವಿಕೆಟ್‌ ಕಳೆದುಕೊಂಡು 39 ರನ್‌ ಗಳಿಸಿತ್ತು. 

ರೋಹಿತ್ ಶರ್ಮಾ 244 ಬಾಲ್‌ಗಳನ್ನು ಎದುರಿಸಿ 176 ರನ್‌ ಸಿಡಿಸಿದರು. ದ್ವಿಶತಕಕ್ಕೆ 24 ರನ್‌ ಬಾಕಿ ಇರುವಾಗ ಎಡವಿದ ರೋಹಿತ್‌, ಕೇಶವ್‌ ಮಹಾರಾಜ್‌ ಅವರಿಗೆ ವಿಕೆಟ್‌ ಒಪ್ಪಿಸಿದರು. ಇತ್ತ ಲೀಲಾಜಾಲವಾಗಿ ಬ್ಯಾಟ್‌ ಬೀಸುತ್ತಿದ್ದ ಮಯಂಕ್‌ ಅಂಗರ್‌ವಾಲ್‌ ದ್ವಿಶತಕ ಪೂರೈಸಿದರು. ಮಯಂಕ್‌ 371 ಬಾಲ್‌ಗಳನ್ನು ಎದುರಿಸಿ 215 ರನ್ ಸಿಡಿಸಿದರು. 

ಸಂಕ್ಷಿಪ್ತ ಸ್ಕೋರ್‌

ಭಾರತ ಮೊದಲ ಇನ್ನಿಂಗ್ಸ್‌: 502/7

ದಕ್ಷಿಣ ಆಫ್ರಿಕಾ ಮೊದಲ ಇನ್ನಿಂಗ್ಸ್‌: 39/3

 

Post Comments (+)