19 ವರ್ಷದೊಳಗಿನವರ ಏಕದಿನ ಪಂದ್ಯ: ಭಾರತಕ್ಕೆ ಭರ್ಜರಿ ಜಯ

7

19 ವರ್ಷದೊಳಗಿನವರ ಏಕದಿನ ಪಂದ್ಯ: ಭಾರತಕ್ಕೆ ಭರ್ಜರಿ ಜಯ

Published:
Updated:

ಮೊರಾಟುವಾ, ಶ್ರೀಲಂಕಾ : ಸ್ಪಿನ್ನರ್‌ಗಳಾದ ಆಯುಷ್‌ ಬದೋನಿ ಹಾಗೂ ಹರ್ಷ ತ್ಯಾಗಿ ಅವರ ಚುರುಕಾದ ದಾಳಿಯ ನೆರವಿನಿಂದ 19 ವರ್ಷದೊಳಗಿನವರ ಭಾರತ ತಂಡವು ಶ್ರೀಲಂಕಾ ಎದುರಿನ ಪಂದ್ಯದಲ್ಲಿ ಜಯಿಸಿದೆ.

ಮಂಗಳವಾರ ನಡೆದ ಏಕದಿನ ಸರಣಿಯ ನಾಲ್ಕನೇ ಪಂದ್ಯದಲ್ಲಿ ಭಾರತ ತಂಡವು 135 ರನ್‌ಗಳಿಂದ ಶ್ರೀಲಂಕಾ ತಂಡವನ್ನು ಮಣಿಸಿತು. ಇದರೊಂದಿಗೆ 2–2ರಲ್ಲಿ ಸರಣಿ ಸಮಬಲ ಮಾಡಿಕೊಂಡಿತು. 

ಮೊದಲು ಬ್ಯಾಟ್‌ ಮಾಡಿದ ಭಾರತ ತಂಡವು 50 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 278 ರನ್‌ ಗಳಿಸಿತು. ತಂಡದ ಪರವಾಗಿ ದೇವದತ್ತ ಪಡಿಕ್ಕಲ್‌ (71), ನಾಯಕ ಆರ್ಯನ್‌ ಜೂಯಲ್‌ (60) ಹಾಗೂ ಯಶ್‌ ರಾಥೋಡ್‌ (56) ಅವರು ಅರ್ಧಶತಕ ಗಳಿಸಿದರು. 

ಗುರಿ ಬೆನ್ನತ್ತಿದ ಶ್ರೀಲಂಕಾ ತಂಡವು 37.2 ಓವರ್‌ಗಳಲ್ಲಿ 143 ರನ್‌ಗಳಿಗೆ ಆಲೌಟಾಯಿತು. ಆಯುಷ್‌ ಬದೋನಿ ಅವರು 35 ರನ್‌ಗೆ ಮೂರು ವಿಕೆಟ್‌ ಪಡೆದರು. ಹರ್ಷ ತ್ಯಾಗಿ ಅವರೂ ಮೂರು ವಿಕೆಟ್‌ ಕಬಳಿಸಿದರು. 

ಸರಣಿಯ ಕೊನೆಯ ಪಂದ್ಯವು ಗುರುವಾರ ನಡೆಯಲಿದೆ. 

ಸಂಕ್ಷಿಪ್ತ ಸ್ಕೋರ್‌:
ಭಾರತ: 50 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 278 (ದೇವದತ್ತ ಪಡಿಕ್ಕಲ್‌ 71, ಆರ್ಯನ್‌ ಜೂಯಲ್‌ 60, ಎಸ್‌. ಮೆಂಡಿಸ್‌ 37ಕ್ಕೆ 2, ಎಸ್‌. ಲಕ್ಷ್ಮಣ್‌ 48ಕ್ಕೆ 2). 

ಶ್ರೀಲಂಕಾ: 37.2 ಓವರ್‌ಗಳಲ್ಲಿ 143 (ಎನ್‌. ಪರನವಿತನಾ 45, ಆಯುಷ್‌ ಬದೋನಿ 35ಕ್ಕೆ 3, ಹರ್ಷ ತ್ಯಾಗಿ 37ಕ್ಕೆ 3). ಫಲಿತಾಂಶ: ಭಾರತ ತಂಡಕ್ಕೆ 135 ರನ್‌ಗಳ ಜಯ; 2–2ರಲ್ಲಿ ಸರಣಿ ಸಮಬಲ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !