ಶನಿವಾರ, ಡಿಸೆಂಬರ್ 14, 2019
22 °C

ಎಮರ್ಜಿಂಗ್‌ ಟೀಮ್ಸ್ ಕಪ್‌: ಭಾರತ ಸೆಮಿಗೆ

ಪಿಟಿಐ Updated:

ಅಕ್ಷರ ಗಾತ್ರ : | |

ಸವರ್‌ (ಬಾಂಗ್ಲಾದೇಶ): ಚಿನ್ಮಯ್‌ ಸುತಾರ್‌ (ಅಜೇಯ 104) ಮತ್ತು ವಿಕೆಟ್‌ ಕೀಪರ್‌, ಕನ್ನಡಿಗ ಬಿ.ಆರ್.ಶರತ್‌ (93 ಎಸೆತಗಳಲ್ಲಿ 90) ಅವರ ಉತ್ತಮ ಪ್ರದರ್ಶನದ ನೆರವಿನಿಂದ ಭಾರತ 120 ರನ್‌ಗಳಿಂದ ಹಾಂಗ್‌ಕಾಂಗ್‌ ತಂಡವನ್ನು ಸುಲಭವಾಗಿ ಸೋಲಿಸಿ ಎಸಿಸಿ ಎಮರ್ಜಿಂಗ್‌ ಟೀಮ್ಸ್‌ ಕಪ್‌ ಏಕದಿನ ಕ್ರಿಕೆಟ್‌ ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸಿತು.

ಸೋಮವಾರ ನಡೆದ ಈ ಪಂದ್ಯದಲ್ಲಿ ಶುಭಂ ಶರ್ಮಾ (55 ಎಸೆತಗಳಲ್ಲಿ 65 ಮತ್ತು 32ಕ್ಕೆ4) ಆಲ್‌ರೌಂಡ್‌ ಆಟವಾಡಿ ಗೆಲುವಿಗೆ ಉಪಯುಕ್ತ ಕಾಣಿಕೆ ನೀಡಿದರು.

ಭಾರತ 50 ಓವರುಗಳಲ್ಲಿ 5 ವಿಕೆಟ್‌ಗೆ 322 ರನ್‌ ಹೊಡೆಯಿತು. ಹಾಂಗ್‌ಕಾಂಗ್‌ 47.3 ಓವರುಗಳಲ್ಲಿ 202 ರನ್‌ಗಳಿಗೆ ಆಟ ಮುಗಿಸಿತು. ಹಾಂಗ್‌ ಕಾಂಗ್‌ ಪರ ಶಹೀದ್‌ ವಾಸಿಫ್‌ 68 ರನ್‌ (84 ಎಸೆತ) ಗಳಿಸಿದರು.

ಭಾರತ ಡಾಕಾದಲ್ಲಿ ಬುಧವಾರ ನಡೆಯುವ ಸೆಮಿಪೈನಲ್‌ನಲ್ಲಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ. ಆತಿಥೇಯ ಬಾಂಗ್ಲಾದೇಶ ಇನ್ನೊಂದು ಸೆಮಿಫೈನಲ್‌ನಲ್ಲಿ ಅಫ್ಗಾನಿಸ್ತಾನ ತಂಡವನ್ನು ಎದುರಿಸಲಿದೆ. ಫೈನಲ್‌ ಕೂಡ ಢಾಕ್ಕಾದಲ್ಲಿಯೇ ನವೆಂಬರ್‌ 23ರಂದು ನಡೆಯಲಿದೆ.

ಪ್ರತಿಕ್ರಿಯಿಸಿ (+)