ಆಕ್ಲೆಂಡ್ (ಪಿಟಿಐ): ಭಾರತ ಮತ್ತು ನ್ಯೂಜಿಲೆಂಡ್ ದೇಶಗಳ ಕ್ರೀಡಾ ಬಾಂಧವ್ಯಕ್ಕೆ 100 ವರ್ಷಗಳು ತುಂಬಲಿವೆ. ಈ ಸಂದರ್ಭದಲ್ಲಿ ಉಭಯ ತಂಡಗಳ ನಡುವಣ ದೀರ್ಘ ಅವಧಿಯ ಕ್ರಿಕೆಟ್ ಸರಣಿಯು ನಡೆಯಲಿದೆ.

ಉಭಯ ತಂಡಗಳ ಸರಣಿಯು ಅಕ್ಟೋಬರ್ 22 ರಿಂದ ಡಿಸೆಂಬರ್ 1ರವರೆಗೆ ನಡೆಯಲಿದೆ. ಒಟ್ಟು 12 ಪಂದ್ಯಗಳು ಇರಲಿವೆ. ಅದರಲ್ಲಿ ಎರಡು ಟೆಸ್ಟ್ ಹಾಗೂ ಸೀಮಿತ ಓವರ್ಗಳ (ವೈಟ್ಬಾಲ್) ಹತ್ತು ಪಂದ್ಯಗಳು ನಡೆಯಲಿವೆ. ಒಟ್ಟು 40 ದಿನಗಳ ಪ್ರವಾಸ ಇದಾಗಿದೆ.

ಟಿ20 ಪಂದ್ಯದೊಂದಿಗೆ ಕ್ರೈಸ್ಟ್ಚರ್ಚ್ನಲ್ಲಿ ಸರಣಿ ಆರಂಭವಾಗುವುದು. ಚುಟುಕು ಮಾದರಿಯ ಸರಣಿಯ ನಂತರ ಏಕದಿನ ಕ್ರಿಕೆಟ್ ಸರಣಿಯು ನವೆಂಬರ್ 4ರಿಂದ ಆಕ್ಲೆಂಡ್ನಲ್ಲಿ ಶುರುವಾಗಲಿದೆ.

ವೆಲ್ಲಿಂಗ್ಟನ್ನಲ್ಲಿ ನವೆಂಬರ್ 19 ರಿಂದ 23ರವರೆಗೆ ಮೊದಲ ಟೆಸ್ಟ್ ಮತ್ತು ಕ್ರೈಸ್ಟ್ಚರ್ಚ್ನ ಹೆಗ್ಲೆ ಓವಲ್ನಲ್ಲಿ ನವೆಂಬರ್ 27 ರಿಂದ ಡಿಸೆಂಬರ್ 1ರವರೆಗೆ ಎರಡನೇ ಟೆಸ್ಟ್ ನಡೆಯಲಿವೆ.

‘ಇದು ಕ್ರಿಕೆಟ್ ಸರಣಿಯಷ್ಟೇ ಅಲ್ಲ. ನ್ಯೂಜಿಲೆಂಡ್ ಮತ್ತು ಭಾರತದ ಕ್ರೀಡಾಸಂಬಂಧವನ್ನು ಸಂಭ್ರಮಿಸುವ ಸಂದರ್ಭವಾಗಿದೆ. ಇದೊಂದು ಸಾಂಸ್ಕೃತಿಕ ಮಹತ್ವ ಇರುವ ಸರಣಿಯಾಗಿದೆ’ ಎಂದು ನ್ಯೂಜಿಲೆಂಡ್ ಕ್ರಿಕೆಟ್ ಮಾರುಕಟ್ಟೆ ಮತ್ತು ವಾಣಿಜ್ಯ ವಿಭಾಗದ ಮುಖ್ಯ ಅಧಿಕಾರಿ ಗ್ಲೆನ್ ಕ್ರಿಚ್ಲೆ ಹೇಳಿದ್ದಾರೆ.

2019–20ರಲ್ಲಿ ಭಾರತವು ಕೊನೆಯ ಬಾರಿಗೆ ಕಿವೀಸ್ ನೆಲದಲ್ಲಿ ಟೆಸ್ಟ್ ಸರಣಿಯನ್ನು ಆಡಿತ್ತು. ಅದರ ನಂತರ ನ್ಯೂಜಿಲೆಂಡ್ ತಂಡವು ಎರಡು ಬಾರಿ ಭಾರತದಲ್ಲಿ ಸರಣಿ ಆಡಿತ್ತು.

‘ಭಾರತದ ಎದುರು ಆಡುವುದು ವಿಶೇಷವಾದ ಸಂದರ್ಭವಾಗಿದೆ. ಪ್ರತಿಭಾವಂತ ಮತ್ತು ಖ್ಯಾತನಾಮ ಆಟಗಾರರು ಇರುವ ತಂಡ ಭಾರತದ್ದು. ಪ್ರತಿ ಬಾರಿ ಅವರನ್ನು ಎದುರಿಸುವಾಗಲೂ ಸವಾಲು ಕಠಿಣವಾಗಿಯೇ ಇರುತ್ತದೆ. ಕಳೆದ ಕೆಲವು ವರ್ಷಗಳಿಂದ ಉಭಯ ತಂಡಗಳ ನಡುವೆ ಬೆಳೆದಿರುವ ಪೈಪೋಟಿಯು ರೋಚಕವಾಗಿದೆ. ಮುಂಬರುವ ಸರಣಿಯಲ್ಲಿಯೂ ಇಂತಹ ರೋಚಕತೆಗಳು ಇರುವ ನಿರೀಕ್ಷೆ ಇದೆ’ ಎಂದು ಕಿವೀಸ್ ತಂಡದ ಸ್ಪಿನ್ನರ್ ಈಶ್ ಸೋಧಿ ಹೇಳಿದ್ದಾರೆ.

ಟಿ20 ಪಂದ್ಯಗಳು: ಕ್ರೈಸ್ಟ್ಚರ್ಚ್ (ಅ.22), ಕ್ರೈಸ್ಟ್ಚರ್ಚ್ (ಅ.24), ವೆಲ್ಲಿಂಗ್ಟನ್ (ಅ.27), ಆಕ್ಲೆಂಡ್ (ಅ.30), ಹ್ಯಾಮಿಲ್ಟನ್ (ನ.1).

ಏಕದಿನ ಪಂದ್ಯಗಳು: ಆಕ್ಲೆಂಡ್ (ನ.4), ವೆಲ್ಲಿಂಗ್ಟನ್ (ನ.7), ಹ್ಯಾಮಿಲ್ಟನ್ (ನ.10), ಮೌಂಟ್ ಮಾಂಗನೂಯಿ (ನ.13), ಮೌಂಟ್ ಮಾಂಗನೂಯಿ (ನ.15)

ಟೆಸ್ಟ್ ಪಂದ್ಯ: ವೆಲ್ಲಿಂಗ್ಟನ್ (ನ.19–23), ಕ್ರೈಸ್ಟ್ಚರ್ಚ್ (ನ.27 –ಡಿ.1)

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-51-1454643718

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.