ಸೋಮವಾರ, ಜೂನ್ 27, 2022
28 °C

ಕುಟುಂಬದ ಜೊತೆ ತೆರಳಲು ಟೀಮ್ ಇಂಡಿಯಾ ಆಟಗಾರರಿಗೆ ಬ್ರಿಟನ್ ಸರ್ಕಾರದ ಸಮ್ಮತಿ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಇಂಗ್ಲೆಂಡ್ ಪ್ರವಾಸಕ್ಕೆ ತೆರಳಲಿರುವ ಭಾರತದ ಪುರುಷರು, ಮಹಿಳಾ ಕ್ರಿಕೆಟ್ ತಂಡಗಳ ಆಟಗಾರರು ಮತ್ತು ಕೋಚಿಂಗ್ ಹಾಗೂ ಸಹಾಯಕ ಸಿಬ್ಬಂದಿಗೆ ಕುಟುಂಬದವರನ್ನು ಕರೆದುಕೊಂಡು ಹೋಗಲು ಬ್ರಿಟನ್ ಸರ್ಕಾರವು ಅನುಮತಿ ನೀಡಿದೆ ಎಂದು ಇಎಸ್‌ಪಿಎನ್ ಕ್ರಿಕ್ ಇನ್ಫೋ ವರದಿ ಮಾಡಿದೆ.

ಪುರುಷರ ತಂಡವು ನಾಲ್ಕು ತಿಂಗಳ ಕಾಲ ಪ್ರವಾಸದಲ್ಲಿರಲಿದ್ದು, ಇಂಗ್ಲೆಂಡ್ ವಿರುದ್ಧ ಐದು ಟೆಸ್ಟ್ ಪಂದ್ಯಗಳ ಸರಣಿ ಪ್ರಾರಂಭಿಸುವ ಮೊದಲು ನ್ಯೂಜಿಲೆಂಡ್ ವಿರುದ್ಧದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಆಡಲಿದೆ. ಮಹಿಳಾ ತಂಡವು ಒಂದು ಟೆಸ್ಟ್ ಆಡಲಿದ್ದು, ನಂತರ ಮೂರು ಏಕದಿನ ಮತ್ತು ಮೂರು ಟಿ 20 ಪಂದ್ಯಗಳನ್ನು ಆಡಲಿದೆ.

ಪುರುಷರ ಮತ್ತು ಮಹಿಳಾ ತಂಡಗಳ ಕುಟುಂಬಗಳು ಚಾರ್ಟರ್ ಫ್ಲೈಟ್‌ನಲ್ಲಿ ತೆರಳಲಿದ್ದು, ಜೂನ್ 3 ರಂದು ಲಂಡನ್‌ ತಲುಪಲಿವೆ. ಅಲ್ಲಿಂದ, ಎರಡೂ ತಂಡಗಳು ಸೌತಾಂಪ್ಟನ್‌ಗೆ ಸ್ಥಳಾಂತರಗೊಳ್ಳುತ್ತವೆ, ಅಲ್ಲಿ ಅವರು ಕ್ವಾರಂಟೈವ್ ಪ್ರಕ್ರಿಯೆ ಪೂರೈಸುತ್ತಾರೆ.

ನಂತರ, ಭಾರತದ ಮಹಿಳೆಯರ ತಂಡವು ಇಂಗ್ಲೆಂಡ್ ವಿರುದ್ಧದ ಏಕದಿನ, ಟೆಸ್ಟ್ ಪಂದ್ಯ ನಡೆಯುವ ಸ್ಥಳವಾದ ಬ್ರಿಸ್ಟಲ್‌ಗೆ ತೆರಳಲಿದ್ದಾರೆ ಎಂದು ತಿಳಿದು ಬಂದಿದೆ. ಪುರುಷರ ತಂಡವು ಸೌತಾಂಪ್ಟನ್‌ನ ಏಗಾಸ್ ಬೌಲ್‌ನಲ್ಲಿ ಕ್ಯಾರಂಟೈನ್ ನಂತರದಲ್ಲಿ ನಿಯಂತ್ರಿತ ತರಬೇತಿಯನ್ನು ಪ್ರಾರಂಭಿಸುವ ನಿರೀಕ್ಷೆಯಿದೆ.

ಪ್ರಸ್ತುತ ಎರಡೂ ತಂಡಗಳು ಮುಂಬೈನ ಒಂದೇ ಹೋಟೆಲ್‌ನಲ್ಲಿ ಎರಡು ವಾರಗಳ ಕ್ವಾರಂಟೈನ್‌ನಲ್ಲಿವೆ.

ಇದನ್ನೂ ಓದಿ.. ಐಪಿಎಲ್–ಸಿಪಿಎಲ್ ವೇಳಾಪಟ್ಟಿ ಹೊಂದಾಣಿಕೆ ಕಸರತ್ತು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು