ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್ ಮೈದಾನದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ತಂಡಗಳ ನಡುವೆ ಟಿ20 ವಿಶ್ವಕಪ್ 2026ರ ಫೈನಲ್ ಪಂದ್ಯ ನಡೆಯುತ್ತಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತ ತಂಡಕ್ಕೆ ಆರಂಭಿಕ ಬ್ಯಾಟರ್ಗಳಾದ ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ ದಾಖಲೆಯ ಆರಂಭ ಒದಗಿಸಿದ್ದಾರೆ. ಈ ಜೋಡಿ ಪವರ್ಪ್ಲೇನಲ್ಲಿ ನ್ಯೂಜಿಲೆಂಡ್ ಬೌಲರ್ಗಳ ಮೇಲೆ ಸವಾರಿ ಮಾಡಿದರು.

ಪರಿಣಾಮ ಟಿ20 ವಿಶ್ವಕಪ್ನ ಪವರ್ಪ್ಲೇನಲ್ಲಿ ಅತ್ಯಧಿಕ ರನ್ ಕಲೆಹಾಕಿದ ತಂಡ ಎಂಬ ದಾಖಲೆಯನ್ನು ಭಾರತ ತಮ್ಮದಾಗಿಸಿಕೊಂಡಿತು. ಟಿ20 ವಿಶ್ವಕಪ್ನ ಪವರ್ಪ್ಲೇನಲ್ಲಿ ಅತ್ಯಧಿಕ ರನ್ ಹೊಡೆದ ದಾಖಲೆ ವೆಸ್ಟ್ ಇಂಡೀಸ್ ತಂಡದ ಹೆಸರಿನಲ್ಲಿತ್ತು. ಇಂದಿನ ಪಂದ್ಯದಲ್ಲಿ ಆ ದಾಖಲೆಯನ್ನು ಸಂಜು ಸ್ಯಾಮ್ಸನ್ ಹಾಗೂ ಅಭಿಷೇಕ್ ಶರ್ಮಾ ಜೋಡಿ ಸರಿಗಟ್ಟಿದೆ.

ಪವರ್ಪ್ಲೇನಲ್ಲಿ ಅತ್ಯಧಿಕ ರನ್

92/0–ಭಾರತ (ನ್ಯೂಜಿಲೆಂಡ್ ವಿರುದ್ಧ) 2026

92/1 - ವೆಸ್ಟ್ ಇಂಡೀಸ್ (ಅಫ್ಗಾನಿಸ್ತಾನ ವಿರುದ್ಧ) 2024

91/1 - ನೆದರ್ಲ್ಯಾಂಡ್ (ಐರ್ಲೆಂಡ್) 2014

89/3 - ಇಂಗ್ಲೆಂಡ್ (ದಕ್ಷಿಣ ಆಫ್ರಿಕಾ ವಿರುದ್ಧ) 2016

86/1- ಭಾರತ (ನಮೀಬಿಯಾ ವಿರುದ್ಧ) 2026

ಇದರ ಜೊತೆಗೆ ಟಿ20 ವಿಶ್ವಕಪ್ನ ನಾಕೌಟ್ ಪಂದ್ಯಗಳಲ್ಲಿ ವೇಗವಾಗಿ ನೂರು ರನ್ ಕಲೆಹಾಕಿದ ತಂಡ ಎಂಬ ದಾಖಲೆಯನ್ನೂ ಭಾರತ ತನ್ನದಾಗಿಸಿಕೊಂಡಿತು. ಭಾರತ ತಂಡವು 100 ರನ್ ಗಳಿಸಲು ಕೇವಲ 7.2 ಓವರ್ ತೆಗೆದುಕೊಂಡಿತು.

ಇದಕ್ಕೂ ಮೊದಲು ಇದೇ ವರ್ಷದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವು ಕೋಲ್ಕತ್ತದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 7.5 ಓವರ್ಗಳಲ್ಲಿ ಈ ಮೊತ್ತ ಕಲೆಹಾಕಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.