ಭಾರತ –ವಿಂಡೀಸ್‌ ‘ಎ’ ಪಂದ್ಯ ಡ್ರಾ

7

ಭಾರತ –ವಿಂಡೀಸ್‌ ‘ಎ’ ಪಂದ್ಯ ಡ್ರಾ

Published:
Updated:

ಬೆಕೆನ್‌ಹ್ಯಾಮ್‌: ಜರ್ಮೈನ್‌ ಬ್ಲಾಕ್‌ವುಡ್‌ (61;95ಎ, 9ಬೌಂ) ಅವರ ಅರ್ಧಶತಕದ ನೆರವಿನಿಂದ ವೆಸ್ಟ್‌ ಇಂಡೀಸ್‌ ‘ಎ’ ತಂಡ ಭಾರತ ‘ಎ’ ಎದುರಿನ ನಾಲ್ಕು ದಿನಗಳ ಮೊದಲ ಟೆಸ್ಟ್‌ ಪಂದ್ಯವನ್ನು ಡ್ರಾ ಮಾಡಿಕೊಂಡಿದೆ.

ಕೆಂಟ್‌ ಕೌಂಟಿ ಮೈದಾನದಲ್ಲಿ ನಾಲ್ಕು ವಿಕೆಟ್‌ಗೆ 536 ರನ್‌ಗಳಿಂದ  ಶನಿವಾರ ಆಟ ಮುಂದುವರಿಸಿದ ಕರುಣ್‌ ನಾಯರ್‌ ನಾಯಕತ್ವದ ಭಾರತ ‘ಎ’ ತಂಡ ದ್ವಿತೀಯ ಇನಿಂಗ್ಸ್‌ನಲ್ಲಿ 111 ಓವರ್‌ಗಳಲ್ಲಿ 6 ವಿಕೆಟ್‌ಗೆ 609 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತು.

ಗೆಲುವಿಗೆ 360ರನ್‌ಗಳ ಕಠಿಣ ಗುರಿ ಬೆನ್ನಟ್ಟಿದ್ದ ಸಮರಾ ಬ್ರೂಕ್ಸ್‌ ಸಾರಥ್ಯದ ವಿಂಡೀಸ್‌ 76 ಓವರ್‌ಗಳಲ್ಲಿ 7 ವಿಕೆಟ್‌ಗೆ 245ರನ್‌ ಗಳಿಸಿದ್ದ ವೇಳೆ ಉಭಯ ತಂಡಗಳ ನಾಯಕರು ಡ್ರಾ ಮಾಡಿಕೊಳ್ಳಲು ಸಮ್ಮತಿಸಿದರು.

ಭಾರತದ ಪೃಥ್ವಿ ಶಾ (188, 169ಎ, 28ಬೌಂ, 2ಸಿ, ) ಹಾಗೂ ಆರ್‌. ಸಮರ್ಥ್‌ (137, 202ಎ, 14ಬೌಂ) ಅಮೋಘ ಶತಕ ಸಿಡಿಸಿ ತಂಡ ಬೃಹತ್‌ ಮೊತ್ತ ಪೇರಿಸಲು ನೆರವಾದರು. ಕರ್ನಾಟಕದ ಮಯಂಕ್‌ ಅಗರವಾಲ್‌ (68; 82ಎ, 14ಬೌಂ) ಮತ್ತು ಕರುಣ್‌   (93; 154ಎ, 11ಬೌಂ) ಕೂಡಾ ಮಿಂಚಿದರು.

ಸಂಕ್ಷಿಪ್ತ ಸ್ಕೋರ್‌: ಭಾರತ ‘ಎ’: ಮೊದಲ ಇನಿಂಗ್ಸ್‌: 42.1 ಓವರ್‌ಗಳಲ್ಲಿ 133 ಹಾಗೂ 111 ಓವರ್‌ಗಳಲ್ಲಿ 6 ವಿಕೆಟ್‌ಗೆ 609 ಡಿಕ್ಲೇರ್ಡ್‌ (ಪೃಥ್ವಿ ಶಾ 188, ಮಯಂಕ್‌ ಅಗರವಾಲ್‌ 68, ಆರ್‌. ಸಮರ್ಥ್‌ 137, ಕರುಣ್‌ ನಾಯರ್‌ 93, ಶ್ರೀಕರ್‌ ಭರತ್‌ ಔಟಾಗದೆ 33; ಶೆರ್ಮನ್‌ ಲೂಯಿಸ್‌ 130ಕ್ಕೆ4, ಚೆಮರ್‌ ಹೋಲ್ಡರ್‌ 148ಕ್ಕೆ1, ಡೆವೊನ್‌ ಥಾಮಸ್‌ 60ಕ್ಕೆ1).

ವೆಸ್ಟ್‌ ಇಂಡೀಸ್‌ ‘ಎ’: ಮೊದಲ ಇನಿಂಗ್ಸ್‌: 101.2 ಓವರ್‌ಗಳಲ್ಲಿ 383 ಮತ್ತು 76 ಓವರ್‌ಗಳಲ್ಲಿ 7 ವಿಕೆಟ್‌ಗೆ 245 (ಜಾನ್‌ ಕ್ಯಾಂಪ್‌ಬೆಲ್‌ 44, ಜರ್ಮೈನ್‌ ಬ್ಲ್ಯಾಕ್‌ವುಡ್‌ 61, ಸುನಿಲ್‌ ಆ್ಯಂಬ್ರಿಸ್‌ 42, ಡೆವೊನ್‌ ಥಾಮಸ್‌ 22,ರಹಕೀಮ್‌ ಕಾರ್ನ್‌ವಾಲ್‌ 40; ಅಂಕಿತ್‌ ರಜಪೂತ್‌ 21ಕ್ಕೆ1, ಶಾಬಾಜ್‌ ನದೀಮ್‌ 81ಕ್ಕೆ2, ನವದೀಪ್‌ ಸೈನಿ 41ಕ್ಕೆ2, ಜಯಂತ್ ಯಾದವ್‌ 73ಕ್ಕೆ2).

ಫಲಿತಾಂಶ: ಡ್ರಾ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !