ಬುಧವಾರ, ಅಕ್ಟೋಬರ್ 16, 2019
22 °C
ಎರಡನೇ ಟೆಸ್ಟ್ ಪಂದ್ಯ

ಭಾರತ–ದಕ್ಷಿಣ ಆಫ್ರಿಕಾ ಟೆಸ್ಟ್: ದ್ವಿಶತಕ ದಾಖಲಿಸಿದ ವಿರಾಟ್‌ ಕೊಹ್ಲಿ

Published:
Updated:
Virat Kohli

ಪುಣೆ: ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್‌ನ ಎರಡನೇ ದಿನ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ  ದ್ವಿಶತಕ ಪೂರೈಸಿದರು. ಇದು ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ ದಾಖಲಿಸಿದ ಏಳನೇ ದ್ವಿಶತಕವಾಗಿದೆ. 

ದ್ವಿಶತಕ ಸಿಡಿಸಿರುವ ಕೊಹ್ಲಿ ಟೆಸ್ಟ್‌ ಕ್ರಿಕೆಟ್‌ನಲ್ಲಿ 7000 ರನ್‌ ಗಡಿ ದಾಟಿದ್ದಾರೆ. 

ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ರವೀಂದ್ರ ಜಡೇಜಾ(69) ಮತ್ತು ವಿರಾಟ್‌ ಕೊಹ್ಲಿ(230) ಬ್ಯಾಟಿಂಗ್‌ ಮುಂದುವರಿಸಿದ್ದಾರೆ. ಭಾರತ ಮಧ್ಯಾಹ್ನದ ವಿರಾಮದ ವೇಳೆಗೆ 3 ವಿಕೆಟ್‌ಗಳಿಕೆ 356 ರನ್‌ ಕಲೆಹಾಕಿತ್ತು. ಪ್ರಸ್ತುತ ಭಾರತ 4 ವಿಕೆಟ್‌ ನಷ್ಟಕ್ಕೆ 555 ರನ್‌ ಗಳಿಸಿದೆ. 

59 ರನ್‌ ಗಳಿಸಿದ್ದ ರಹಾನೆ ಮಹರಾಜ್‌ ಎಸೆತದಲ್ಲಿ ವಿಕೆಟ್‌ ಒಪ್ಪಿಸಿದರು. 

ಇದನ್ನೂ ಓದಿ: ಟೆಸ್ಟ್‌ ಕ್ರಿಕೆಟ್‌: ಮತ್ತೆ ಶತಕ ಬಾರಿಸಿದ ಮಯಂಕ್

ಗುರುವಾರ ಮಯಂಕ್‌ ಅಗರವಾಲ್‌ ಶತಕದ(108 ರನ್‌) ನೆರವಿಂದ ಭಾರತ 85.1 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 273 ರನ್ ಗಳಿಸಿತ್ತು. 

Post Comments (+)