
ಸತತವಾಗಿ ಎರಡು ಬಾರಿ ವಿಶ್ವಕಪ್ ಗೆಲುವು. ಟಿ20 ಮಾದರಿಯಲ್ಲಿ ಯಾವುದೇ ತಂಡ ಈ ಸಾಧನೆ ಮಾಡಿಲ್ಲ. ಟ್ರೋಫಿ ಗೆಲುವಿಗೆ ಅರ್ಹವಾಗಿರುವ ಹಕ್ಕುದಾರ ತಂಡ. ನಮ್ಮ ತಂಡದಿಂದ ಎಂಥ ಅಮೋಘ ಸಾಧನೆ. ವೆಲ್‌ಡನ್ ಟೀಮ್ ಇಂಡಿಯಾ, ಜೈ ಹಿಂದ್...ಸಚಿನ್ ತೆಂಡೂಲ್ಕರ್, ಮಾಜಿ ಕ್ರಿಕೆಟಿಗ
ಅಹಮದಾಬಾದಿನಲ್ಲಿ ಭಾರತ ತಂಡದ ಗೆಲುವು ಅದ್ಭುತ. ಟೂರ್ನಿಯುದ್ದಕ್ಕೂ ಪ್ರದರ್ಶಿಸಿದ ಸ್ಫೋಟಕ ರೀತಿಯ ಕ್ರಿಕೆಟ್ ಪ್ರದರ್ಶನಕ್ಕೆ ಸಾಟಿಯೇ ಇರಲಿಲ್ಲ. ಕಠಿಣ ಸನ್ನಿವೇಶಗಳಲ್ಲಿ ಹೋರಾಟ ತೋರಿ ಹುಡುಗರು ಮತ್ತೆ ವಿಶ್ವ ಚಾಂಪಿಯನ್ ಆದರು. ಈ ಸಾಧನೆಗಾಗಿ ತಂಡದ ಆಟಗಾರರಿಗೆ ಮತ್ತು ಚಿಂತಕರ ಚಾವಡಿ ಸದಸ್ಯರಿಗೆ ಅಭಿನಂದನೆಗಳು...ವಿರಾಟ್ ಕೊಹ್ಲಿ, ಭಾರತ ತಂಡದ ಮಾಜಿ ನಾಯಕ
ಟಿ20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಅಭಿನಂದನೆಗಳು... ಅತಿ ಪ್ರಬಲ ತಂಡ... ಮಹತ್ವದ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿತು. ಭಾರತದ ಕ್ರಿಕೆಟ್ ಅತ್ಯುನ್ನತ ಸ್ಥಾನದಲ್ಲಿದೆ. ಏಕದಿನ ಮಹಿಳಾ ಚಾಂಪಿಯನ್, 19 ವರ್ಷದೊಳಗಿನವರ ಚಾಂಪಿಯನ್. ಈಗ ಪುರುಷರ ಟಿ20 ಚಾಂಪಿಯನ್ಸ್ಸೌರವ್ ಗಂಗೂಲಿ, ಮಾಜಿ ನಾಯಕ
ನಾನು ಆರಂಭದಲ್ಲೇ ಹೇಳಿದ್ದೆ. ಐಸಿಸಿ ಟಿ20 ವಿಶ್ವಕಪ್ ಗೆಲ್ಲಬೇಕಾದರೆ, ನೀವು ಭಾರತವನ್ನು ನಾಕೌಟ್ ಪಂದ್ಯದಲ್ಲಿ ಸೋಲಿಸಬೇಕು. ಯಾವ ತಂಡವೂ ಅದನ್ನು ಮಾಡಲಿಲ್ಲ. ಮೂರನೇ ಬಾರಿ ಟಿ20 ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಅಭಿನಂದನೆಗಳು..ಡ್ಯಾರೆನ್ ಸಮಿ, ವೆಸ್ಟ್ ಇಂಡೀಸ್ ಕೋಚ್
ತಂಡದ ಬಗ್ಗೆ ಹೆಮ್ಮೆಯೆನಿಸುತ್ತದೆ. ಭಾರತಕ್ಕೆ ವಿಶ್ವಕಪ್ ಗೆಲ್ಲಿಸುವುದು ಪ್ರತಿಯೊಬ್ಬ ಆಟಗಾರನ ಕನಸು. ಇಡೀ ದೇಶ ಹೆಮ್ಮೆಪಡುವಂತೆ ಮಾಡಿದ್ದೀರಿ. ಅಭಿನಂದನೆಗಳು ಹುಡುಗರೇ...ಶುಭಮನ್ ಗಿಲ್, ಟೆಸ್ಟ್, ಏಕದಿನ ತಂಡದ ನಾಯಕ
ಭಾರತ ಪ್ರಬಲ ತಂಡ. ಕೊನೆಯ ಕೆಲವು ಐಸಿಸಿ ಟೂರ್ನಿಗಳನ್ನು ಗಮನಿಸಿದರೆ ಆ ತಂಡ 32 ಪಂದ್ಯಗಳಲ್ಲಿ 30 ಅನ್ನು ಗೆದ್ದುಕೊಂಡಿದೆ. ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಆಸ್ಟ್ರೇಲಿಯಾಕ್ಕೆ ಸೋತಿತ್ತು. ಈ ಟೂರ್ನಿಯಲ್ಲಿ (ಟಿ20 ವಿಶ್ವಕಪ್) ಸೂಪರ್ ಎಂಟರಲ್ಲಿ ದಕ್ಷಿಣ ಆಫ್ರಿಕಾಕ್ಕೆ ಸೋತಿತ್ತು.ಆ್ಯಥರ್ಟನ್, ಇಂಗ್ಲೆಂಡ್ ಮಾಜಿ ನಾಯಕ
ಭಾರತದ ಕ್ರಿಕೆಟ್ ಬುನಾದಿಯ ಮೂಲರಚನೆ ಫಲಕೊಡುತ್ತಿದೆ. ಅಲ್ಲಿ ಬ್ಯಾಟರ್‌ಗಳ ಕೊರತೆಯಿಲ್ಲ, ಸ್ಪಿನ್ನರ್ ಅಥವಾ ವೇಗದ ಬೌಲರ್‌ಗಳ ಕೊರತೆಯಿಲ್ಲ. ಫಲಿತಾಂಶ ಬಯಸುವ ಈ ಯುವ ಆಟಗಾರರಿಗೆ ಆಟದ ಬಗ್ಗೆ ಒಳ್ಳೆಯ ತಿಳಿವಳಿಕೆಯಿದೆಜಾವೆದ್ ಮಿಯಾಂದಾದ್, ಪಾಕ್ ಕ್ರಿಕೆಟಿಗ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.