ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳುವ ಭಾರತ ತಂಡದ ಆಟಗಾರರಿಗೆ ಎರಡು ವಾರ ಕ್ವಾರಂಟೈನ್

Last Updated 21 ಜುಲೈ 2020, 16:01 IST
ಅಕ್ಷರ ಗಾತ್ರ

ಮೆಲ್ಬರ್ನ್: ಡಿಸೆಂಬರ್‌ನಲ್ಲಿ ಟೆಸ್ಟ್ ಸರಣಿ ಆಡಲು ಆಸ್ಟ್ರೇಲಿಯಾಕ್ಕೆ ತೆರಳಲಿರುವ ಭಾರತ ತಂಡದ ಆಟಗಾರರು ಎರಡು ವಾರಗಳ ಪ್ರತ್ಯೇಕವಾಸದಲ್ಲಿ ಇರಬೇಕು ಎಂದು ಕ್ರಿಕೆಟ್ ಆಸ್ಟ್ರೇಲಿಯಾ ತಿಳಿಸಿದೆ.

’ಸರಣಿಯ ಆರಂಭಕ್ಕೆ ಮುನ್ನ ಎರಡು ವಾರಗಳ ಕ್ವಾರಂಟೈನ್ ಆಗಬೇಕು. ಮೊದಲ ಟೆಸ್ಟ್ ಅಡಿಲೇಡ್‌ನಲ್ಲಿ ನಡೆಯಲಿದೆ. ಅದಕ್ಕೂ ಮುನ್ನ ಆಟಗಾರರ ಕೋವಿಡ್ ಪರೀಕ್ಷೆ, ಪ್ರತ್ಯೇಕವಾಸಕ್ಕಾಗಿ ಎಲ್ಲ ವ್ಯವಸ್ಥೆಗಳನ್ನು ಮಾಡಲಾಗುವುದು. ಎರಡು ವಾರಗಳ ಪ್ರತ್ಯೇಕವಾಸ ಸೂಕ್ತವಾಗಿದೆ‘ ಎಂದು ಕ್ರಿಕೆಟ್ ಆಸ್ಟ್ರೇಲಿಯಾದ ಹಂಗಾಮಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿಕ್ ಹಾಕ್ಲಿ ಹೇಳಿದ್ದಾರೆ.

’ಆರೋಗ್ಯ ಪರಿಣತರ ನೆರವನ್ನು ಪಡೆಯುತ್ತೇವೆ. ಸ್ಥಳೀಯ ಆಡಳಿತದ ಮಾರ್ಗದರ್ಶನ ಮತ್ತು ಸಹಕಾರದೊಂದಿಗೆ ಉತ್ತಮ ವ್ಯವಸ್ಥೆಗಳನ್ನು ರೂಪಿಸಲಾಗುವುದು. ಪಂದ್ಯ ಗಳು ನಡೆಯುವ ಕ್ರೀಡಾಂಗಣದ ಅತಿ ಸಮೀಪದ ಹೋಟೆಲ್‌ಗಳನ್ನು ಆಟಗಾರರ ವಸತಿಗಾಗಿ ಗುರುತಿಸಲಾಗುವುದು. ಸೋಂಕು ಪ್ರಸರಣ ತಡೆಗೆ ಎಷ್ಟು ಸಾಧ್ಯವೋ ಅಷ್ಟೂ ಮುನ್ನೆಚ್ಚರಿಕೆಗಳನ್ನು ಚಾಚೂ ತಪ್ಪದೇ ಪಾಲಿಸಲಾಗುವುದು‘ ಎಂದು ನಿಕ್ ಹೇಳಿದ್ದಾರೆ.

ಕೊರೊನಾ ಕಾರಣದಿಂದ ದೀರ್ಘ ಕಾಲ ಕ್ರಿಕೆಟ್ ಚಟುವಟಿಕೆಗಳು ಸ್ಘಗಿತವಾಗಿದ್ದರು. ಇಂಗ್ಲೆಂಡ್‌ನಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧದ ಸರಣಿಯ ಎರಡು ಪಂದ್ಯಗಳು ಯಶಸ್ವಿಯಾಗಿ ನಡೆದಿವೆ. ಇದರಿಂದಾಗಿ ಆಸ್ಟ್ರೇಲಿಯಾ ಕೂಡ ಮುಂದಿನ ದಿನಗಳಲ್ಲಿ ಉತ್ತಮ ನಿರ್ವಹಣೆ ಮಾಡುವ ವಿಶ್ವಾಸದಲ್ಲಿದೆ.

’ಡಿಸೆಂಬರ್ ವೇಳೆಗೆ ಕೊರೊನಾ ವೈರಸ್‌ ನಿಯಂತ್ರಣಕ್ಕೆ ಬರುವ ನಿರೀಕ್ಷೆ ಇದೆ. ಅದರಿಂದಾಗಿ ಅಂತರರಾಷ್ಟ್ರೀಯ ವಿಮಾನಯಾನ ನಿರ್ಬಂಧಗಳೂ ಕೊನೆಗೊಳ್ಳಬಹುದು. ಅದರಿಂದಾಗಿ ಸರಣಿಯನ್ನು ಸುಗಮವಾಗಿ ನಡೆಸಬಹುದು‘ ಎಂದು ನಿಕ್ ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT