ನವದೆಹಲಿ: ಭಾರತ ಪುರುಷರ ಕ್ರಿಕೆಟ್ ತಂಡವು ಜೂನ್ನಲ್ಲಿ ಐರ್ಲೆಂಡ್ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿ ಎರಡು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ ಎಂದು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಶನಿವಾರ ತಿಳಿಸಿದೆ.

ಜುಲೈನಲ್ಲಿ ಭಾರತ ತಂಡವು ಸೀಮಿತ ಓವರ್ಗಳ ಸರಣಿಗಾಗಿ ಇಂಗ್ಲೆಂಡ್ ಪ್ರವಾಸ ಹಮ್ಮಿಕೊಂಡಿದ್ದು, ಅದಕ್ಕೂ ಮುನ್ನ ಐರ್ಲೆಂಡ್ಗೆ ತೆರಳಲಿದೆ. ಅಲ್ಲಿನ ಬೆಲ್ಫಾಸ್ಟ್ ಕ್ರೀಡಾಂಗಣದಲ್ಲಿ ಜೂನ್ 26 ಮತ್ತು 28ರಂದು ಪಂದ್ಯಗಳನ್ನು ಆಡಲಿದೆ.

‘ಕಳೆದ 8 ವರ್ಷಗಳಲ್ಲಿ ಭಾರತ ತಂಡವು ಮೂರು ಬಾರಿ (2018, 2022 ಮತ್ತು 2023) ಐರ್ಲೆಂಡ್ ಪ್ರವಾಸ ಕೈಕೊಂಡಿದೆ. ಆದರೆ, 2007ರ ಬಳಿಕ ಇದೇ ಮೊದಲ ಬಾರಿಗೆ ಬೆಲ್ಫಾಸ್ಟ್ ಕ್ರೀಡಾಂಗಣದಲ್ಲಿ ಕಣಕ್ಕಿಳಿಯಲಿದೆ’ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಮಾಹಿತಿ ನೀಡಿದ್ದಾರೆ.

ಐರ್ಲೆಂಡ್ ತಂಡದ ಅನುಭವಿ ಪಾಲ್ ಸ್ಟರ್ಲಿಂಗ್ ಅವರು ಈಚೆಗೆ ಟಿ20 ನಾಯಕತ್ವದಿಂದ ಕೆಳಗಿಳಿದಿದ್ದರು. 2028ರ ಟಿ20 ವಿಶ್ವಕಪ್ಗೆ ಅರ್ಹತೆ ಪಡೆದಿರುವ ಐರ್ಲೆಂಡ್, ಹೊಸ ತಂಡವನ್ನು ಕಟ್ಟುವ ಗುರಿಯನ್ನು ಹೊಂದಿದೆ. ಭಾರತ ವಿರುದ್ಧದ ಸರಣಿಯು ಅದಕ್ಕೆ ಮುನ್ನುಡಿಯಾಗಲಿದೆ.

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಮುಕ್ತಾಯದ ಬೆನ್ನಲ್ಲೇ ಭಾರತ ತಂಡವು ತನ್ನ ತವರಿನಲ್ಲಿ ಅಫ್ಗಾನಿಸ್ತಾನ ಎದುರು ಒಂದು ಟೆಸ್ಟ್ ಮತ್ತು ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ. ಈ ಸರಣಿಯು ಜೂನ್ 20ರಂದು ಕೊನೆಗೊಳ್ಳಲಿದೆ. ಜುಲೈ 1ರಿಂದ 19ರವರೆಗೆ ಇಂಗ್ಲೆಂಡ್ ವಿರುದ್ಧ ಐದು ಟಿ20 ಮತ್ತು ಮೂರು ಏಕದಿನ ಪಂದ್ಯಗಳ ಸರಣಿಯನ್ನು ಆಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.