ವೇಗಕ್ಕೆ ನಲುಗಿದ ಭಾರತದ ಬ್ಯಾಟ್ಸ್‌ಮನ್‌ಗಳು

ಮಂಗಳವಾರ, ಜೂನ್ 18, 2019
28 °C
ಟ್ರೆಂಟ್‌ ಬೌಲ್ಟ್‌, ನೀಶಮ್ ದಾಳಿಗೆ ಉತ್ತರಿಸಲು ಪರದಾಡಿದ ಕೊಹ್ಲಿ ಬಳಗದ ಬ್ಯಾಟ್ಸ್‌ಮನ್‌ಗಳು

ವೇಗಕ್ಕೆ ನಲುಗಿದ ಭಾರತದ ಬ್ಯಾಟ್ಸ್‌ಮನ್‌ಗಳು

Published:
Updated:
Prajavani

ಲಂಡನ್‌: ವಿದೇಶಿ ಪಿಚ್‌ಗಳಲ್ಲಿ ಬ್ಯಾಟಿಂಗ್ ಮಾಡುವುದು ಕಷ್ಟ ಎಂಬುದನ್ನು ಭಾರತದ ಆಟಗಾರರು ಮತ್ತೊಮ್ಮೆ ಸಾಬೀತು ಮಾಡಿದ್ದಾರೆ. ಇಲ್ಲಿ ಶನಿವಾರ ನಡೆದ ನ್ಯೂಜಿಲೆಂಡ್ ಎದುರಿನ ಅಭ್ಯಾಸ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಬಳಗ ಸಾಧಾರಣ ಮೊತ್ತಕ್ಕೆ ಕುಸಿದಿದೆ.

ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಕಳಪೆ ಆಟ ಆಡಿ ಪೆವಿಲಿಯನ್‌ಗೆ ಪೆರೇಡ್ ನಡೆಸಿದರೆ, ಮಧ್ಯಮ ಕ್ರಮಾಂಕದ ಹಾರ್ದಿಕ್ ಪಾಂಡ್ಯ ಮತ್ತು ಕೆಳ ಕ್ರಮಾಂಕದ ರವೀಂದ್ರ ಜಡೇಜ ಕೆಚ್ಚೆದೆಯಿಂದ ಬ್ಯಾಟಿಂಗ್ ಮಾಡಿದರು. ಹೀಗಾಗಿ ತಂಡಕ್ಕೆ 50 ಓವರ್‌ಗಳಲ್ಲಿ 179 ರನ್ ಗಳಿಸಲು ಸಾಧ್ಯವಾಯಿತು. ಟ್ರೆಂಟ್ ಬೌಲ್ಟ್ ಮತ್ತು ಜೇಮ್ಸ್ ನೀಶಮ್ ಕ್ರಮವಾಗಿ ನಾಲ್ಕು ಮತ್ತು ಮೂರು ವಿಕೆಟ್ ಕಬಳಿಸಿ ಭಾರತ ಬ್ಯಾಟಿಂಗ್‌ನ ಬೆನ್ನೆಲುಬು ಮುರಿದರು.

ಟಾಸ್ ಗೆದ್ದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ದುಕೊಂಡರು. ಆದರೆ ಆರಂಭಿಕ ಜೋಡಿ ಸೇರಿದಂತೆ ಅಗ್ರ ಕ್ರಮಾಂಕದ ನಾಲ್ವರು ಬ್ಯಾಟ್ಸ್‌ಮನ್‌ಗಳು ನ್ಯೂಜಿಲೆಂಡ್‌ ವೇಗಿಗಳ ದಾಳಿಗೆ ನಲುಗಿದರು. ಟ್ರೆಂಟ್‌ ಬೌಲ್ಟ್ ಸತತ ಮೂರು ಓವರ್‌ಗಳಲ್ಲಿ ರೋಹಿತ್ ಶರ್ಮಾ, ಶಿಖರ್ ಧವನ್ ಮತ್ತು ಕೆ.ಎಲ್‌.ರಾಹುಲ್ ಅವರ ವಿಕೆಟ್ ಉರುಳಿಸಿದರು.

ಕಾಲಿನ್ ಡಿ ಗ್ರ್ಯಾಂಡ್‌ಹೋಮ್ ಎಸೆತದಲ್ಲಿ ವಿರಾಟ್ ಕೊಹ್ಲಿ ಬೌಲ್ಡ್ ಆಗಿ ಮರಳಿದರು. ಈ ಸಂದರ್ಭದಲ್ಲಿ ತಂಡದ ಮೊತ್ತ ಕೇವಲ 39 ರನ್ ಆಗಿತ್ತು. ಹಾರ್ದಿಕ್ ಪಾಂಡ್ಯ ಮತ್ತು ಮಹೇಂದ್ರ ಸಿಂಗ್ ಧೋನಿ ಜೊತೆಗೂಡಿದಾಗ ಭಾರತದ ಅಭಿಮಾನಿಗಳಲ್ಲಿ ಭರವಸೆ ಮೂಡಿತು.

ಇವರಿಬ್ಬರು 38 ರನ್‌ಗಳ ಜೊತೆಯಾಟ ಆಡಿದರು. ಆರು ಬೌಂಡರಿಗಳೊಂದಿಗೆ 37 ಎಸೆತಗಳಲ್ಲಿ ಪಾಂಡ್ಯ 30 ರನ್‌ ಗಳಿಸಿದರು. ಆದರೆ ಧೋನಿ ನಿಧಾನಗತಿಯ ಬ್ಯಾಟಿಂಗ್‌ಗೆ ಮೊರೆ ಹೋದರು. 42 ಎಸೆತ ಎದುರಿಸಿದ ಅವರು ಒಂದು ಬೌಂಡರಿಯೊಂದಿಗೆ ಕೇವಲ 17 ರನ್‌ ಗಳಿಸಿದರು. ದಿನೇಶ್ ಕಾರ್ತಿಕ್ ಕೂಡ ವೈಫಲ್ಯ ಕಂಡರು.

ಜಡೇಜ ತಾಕತ್ತು: ಮಹೇಂದ್ರ ಸಿಂಗ್ ಧೋನಿ ಔಟಾದಾಗ ಭಾರತದ ಮೊತ್ತ ಏಳು ವಿಕೆಟ್‌ಗಳಿಗೆ 91 ರನ್ ಆಗಿತ್ತು. ಹೀಗಾಗಿ ತಂಡ 120 ರನ್ ಗಳಿಸುವುದು ಕೂಡ ಕಷ್ಟಸಾಧ್ಯ ಎಂದೆನಿಸಿತ್ತು. ಆದರೆ ಕ್ರೀಸ್‌ಗೆ ಬಂದ ಎಡಗೈ ಬ್ಯಾಟ್ಸ್‌ಮನ್ ರವೀಂದ್ರ ಜಡೇಜ ನ್ಯೂಜಿಲೆಂಡ್‌ ದಾಳಿಯನ್ನು ಮೆಟ್ಟಿ ನಿಂತರು. 50 ಎಸೆತಗಳಲ್ಲಿ ಎರಡು ಸಿಕ್ಸರ್ ಮತ್ತು ಆರು ಬೌಂಡರಿ ಸಿಡಿಸಿದ ಅವರು 54 ರನ್‌ ಗಳಿಸಿ ಮಿಂಚಿದರು. ತಾಳ್ಮೆಯ ಆಟದ ಮೂಲಕ ಅವರಿಗೆ ಕುಲದೀಪ್ ಯಾದವ್ ಉತ್ತಮ ಸಹಕಾರ ನೀಡಿದರು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 2

  Sad
 • 0

  Frustrated
 • 1

  Angry

Comments:

0 comments

Write the first review for this !