ಮುಲ್ಲನಪುರ : ಜಮ್ಮು ಮತ್ತು ಕಾಶ್ಮೀರದ ವೇಗದ ಬೌಲರ್ ಅಕೀಬ್ ನಬಿ ದಾರ್, ಉತ್ತರ ಪ್ರದೇಶದ ಪ್ರಿನ್ಸ್ ಯಾದವ್ ಸೇರಿದಂತೆ ಆರು ಮಂದಿಯನ್ನು ಭಾರತ ತಂಡದ ಚಿಂತಕರ ಚಾವಡಿಯು, ಅಫ್ಗಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ‘ನೆಟ್ ಬೌಲರ್’ಗಳಾಗಿ ಸೇರ್ಪಡೆ ಮಾಡಿಕೊಂಡಿದೆ. ಈ ಪಂದ್ಯ ಜೂನ್ 6ರಂದು ಇಲ್ಲಿ ಆರಂಭವಾಗಲಿದೆ.

ರಣಜಿ ಟ್ರೋಫಿಯಲ್ಲಿ 60 ವಿಕೆಟ್ಗಳನ್ನು ಕಬಳಿಸಿದ್ದ ಅಕೀಬ್ ನಬಿ ಅವರನ್ನು ಟೆಸ್ಟ್ ತಂಡಕ್ಕೆ ಪರಿಗಣಿಸದಿದ್ದುದು ವ್ಯಾಪಕ ಟೀಕೆಗೆ ಒಳಗಾಗಿತ್ತು. ಮಾಜಿ ಟೆಸ್ಟ್ ಆಟಗಾರ ದಿಲೀಪ್ ವೆಂಗಸರ್ಕಾರ್ ಅವರಂತೂ ನಬಿ ಅವರನ್ನು ನಿರ್ಲಕ್ಷಿಸಿದ್ದಕ್ಕೆ ರಣಜಿ ಟ್ರೋಫಿಯ ಔಚಿತ್ಯವನ್ನು ಪ್ರಶ್ನಿಸಿದ್ದರು. ಏಕೈಕ ಟೆಸ್ಟ್ ತಂಡದ ಆಯ್ಕೆ ವೇಳೆ ನಬಿ ಬದಲು ಪಂಜಾಬ್ನ ವೇಗಿ ಗುರನೂರ್ ಬ್ರಾರ್ ಅವರಿಗೆ ಅವಕಾಶ ನೀಡಲಾಗಿತ್ತು.

‘ವೇಗಿಗಳಾದ ಗುರುಜಪನೀತ್ ಸಿಂಗ್, ಅಕೀಬ್ ನಬಿ, ಪ್ರಿನ್ಸ್ ಯಾದವ್, ಆಫ್ ಸ್ಪಿನ್ನರ್ ಸಾರಾಂಶ್ ಜೈನ್, ಲೆಗ್ ಸ್ಪಿನ್ನರ್ ಜೀಶಾನ್ ಅನ್ಸಾರಿ ಮತ್ತು ಎಡಗೈ ಸ್ಪಿನ್ನರ್ ಶಿವಾಂಗ್ ಕುಮಾರ್– ಈ ಆರು ಮಂದಿ ಭಾರತ ತಂಡಕ್ಕೆ ನೆರವಾಗಲು ನೆಟ್ ಬೌಲರ್ಗಳಾಗಿ ಸೇರಿಕೊಳ್ಳಲಿ ದ್ದಾರೆ’ ಎಂದು ಬಿಸಿಸಿಐ ಮಂಗಳವಾರ ಪ್ರಕಟಣೆಯಲ್ಲಿ ತಿಳಿಸಿದೆ.

ಲಖನೌ ಸೂಪರ್ ಜೈಂಟ್ಸ್ ಪರ ಆಡಿದ್ದ ಪ್ರಿನ್ಸ್ ಈ ಬಾರಿಯ ಐಪಿಎಲ್ನ ‘ಶೋಧ’. ಉತ್ತರ ಪ್ರದೇಶದ ಜೀಶಾನ್ ಮತ್ತು ಶಿವಾಂಗ್ ಅವರು ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದರಾಬಾದ್ ಪರ ಆಡಿ ದ್ದರು. ಸಾರಾಂಶ್ ಮಧ್ಯಪ್ರದೇಶದವರು.

‘ನಬಿ ಅವರ ಜೊತೆಗೆ ಇತರ ಐವರನ್ನು ನೆಟ್ಸ್ನಲ್ಲಿ ಬೌಲಿಂಗ್ ಮಾಡಲು ಸೇರ್ಪಡೆ ಮಾಡಲಾಗಿದೆ. ಗುಜರಾತ್ ಟೈಟನ್ಸ್ನ ಪ್ರಮುಖ ವೇಗಿಗಳಾದ ಮೊಹಮ್ಮದ್ ಸಿರಾಜ್ ಮತ್ತು ಪ್ರಸಿದ್ಧ ಕೃಷ್ಣ ಅವರು ಏಳು ದಿನಗಳ ಅಂತರದಲ್ಲಿ ಮೂರು ಐಪಿಎಲ್ ಪಂದ್ಯಗಳನ್ನು ಆಡಿ ದ್ದಾರೆ. ಸದ್ಯ ಉರಿ ಬಿಸಿಲಿನ ವಾತಾವರಣ ದಲ್ಲಿ ಅವರು ನೆಟ್ಸ್ನಲ್ಲಿ ತಮ್ಮೆಲ್ಲಾ ಸಾಮರ್ಥ್ಯ ತೊಡಗಿಸಿಕೊಂಡು ಬೌಲಿಂಗ್ ಮಾಡುವುದು ಕಷ್ಟ. ಬ್ಯಾಟರ್ಗಳಿಗೂ ಸಾಕಷ್ಟು ಅಭ್ಯಾಸದ ಅಗತ್ಯವಿದೆ’ ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ.

ಗುಜರಾತ್ ಟೈಟನ್ಸ್ ತಂಡವು ಕ್ವಾಲಿಫಯರ್ 1, 2 ಮತ್ತು ಫೈನಲ್ ಪಂದ್ಯಗಳನ್ನು ಐದು ದಿನಗಳ ಅಂತರದಲ್ಲಿ ಆಡಿತ್ತು. ಈ ಪಂದ್ಯಗಳು ಕ್ರಮವಾಗಿ ಧರ್ಮಶಾಲಾ, ಚಂಡೀಗಢ ಮತ್ತು ಅಹಮದಾಬಾದ್ನಲ್ಲಿ ನಡೆದಿದ್ದವು.

ಅಕೀಬ್, ಸ್ಟ್ಯಾಂಡ್ಬೈ ಆಟಗಾರರ ಪಟ್ಟಿಯಲ್ಲಿದ್ದಾರೆ. ಒಂದುವೇಳೆ, ಸಿರಾಜ್, ಪ್ರಸಿದ್ಧ ಕೃಷ್ಣ, ಗುರನೂರ್ ಇವರಲ್ಲಿ ಒಬ್ಬರು ಗಾಯಾಳಾಗಿ ಹೊರಬಿದ್ದರೆ ಅಕೀಬ್ ಅವರಿಗೆ 15ರ ತಂಡದಲ್ಲಿ ಅವಕಾಶ ಸಿಗಲಿದೆ.

ಭಾರತ ತಂಡು ಮಂಗಳವಾರ ಸಂಜೆ ಮೊದಲ ಸಲ ತಾಲೀಮಿನಲ್ಲಿ ತೊಡಗಿತು. ಐಪಿಎಲ್ನ ಭಾಗವಾಗಿದ್ದ ಕೆಲವು ಆಟಗಾರರು ಇದರಲ್ಲಿ ಭಾಗವಹಿಸುವ ಸಾಧ್ಯತೆ ಕಡಿಮೆ.

ಗುಜರಾತ್ ಟೈಟನ್ಸ್ನ ಏಳು ಮಂದಿ ಆಟಗಾರರು (ನಾಯಕ ಶುಭಮನ್ ಗಿಲ್, ಬಿ.ಸಾಯಿ ಸುದರ್ಶನ್, ಗುರನೂರ್ ಬ್ರಾರ್, ಪ್ರಸಿದ್ಧ ಕೃಷ್ಣ, ಮೊಹಮ್ಮದ್ ಸಿರಾಜ್, ಮಾನವ್ ಸುತಾರ್, ವಾಷಿಂಗ್ಟನ್ ಸುಂದರ್) ಅವರು ಟೆಸ್ಟ್ ತಂಡದ ಭಾಗವಾಗಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-4-199455966

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.