ಕ್ರಿಕೆಟ್‌: ಆಸೀಸ್‌ ವಿರುದ್ಧ ಬ್ಯಾಟಿಂಗ್‌ ಆರಂಭಿಸಿದ ಭಾರತಕ್ಕೆ ಆರಂಭಿಕ ಆಘಾತ

ಭಾನುವಾರ, ಮಾರ್ಚ್ 24, 2019
32 °C

ಕ್ರಿಕೆಟ್‌: ಆಸೀಸ್‌ ವಿರುದ್ಧ ಬ್ಯಾಟಿಂಗ್‌ ಆರಂಭಿಸಿದ ಭಾರತಕ್ಕೆ ಆರಂಭಿಕ ಆಘಾತ

Published:
Updated:

ನಾಗಪುರ: ಇಲ್ಲಿನ ವಿದರ್ಭ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ಆರಂಭಿಕ ಆಘಾತ ಎದುರಿಸಿದೆ. ‌

ಭಾರತದ ಎದುರು ಟಾಸ್‌ ಗೆದ್ದ ಆಸ್ಟ್ರೇಲಿಯಾ ಬೌಲಿಂಗ್‌ ಆಯ್ಕೆ ಮಾಡಿಕೊಂಡಿತ್ತು.

ಭಾರತದ ಪರ ಬ್ಯಾಟಿಂಗ್‌ ಆರಂಭಿಸಿದ ರೋಹಿತ್‌ ಶರ್ಮಾ ಶೂನ್ಯಕ್ಕೆ ಔಟ್‌ ಆಗಿದ್ದಾರೆ. ಇತ್ತ ನಾಯಕ ವಿರಾಟ್‌ ಕೊಹ್ಲಿ ಜೊತೆಗೂಡಿ ತಾಳ್ಮೆಯ ಆಟಕ್ಕೆ ಮೋರೆ ಹೋಗಿದ್ದ ಶಿಖರ್‌ ಧವನ್‌ 21 ರನ್‌ ಗಳಿಸಿ ಗ್ಲೇನ್‌ ಮ್ಯಾಕ್ಸ್‌ವೇಲ್‌ ಎಸೆದ ಎರಡನೇ ಓವರ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದರು. 

ಸದ್ಯ ಬ್ಯಾಟಿಂಗ್‌ ಮುಂದುವರಿಸಿರುವ ಭಾರತದ 13 ಓವರ್‌ಗಳಲ್ಲಿ 2 ವಿಕೆಟ್‌ ಕಳೆದುಕೊಂಡು 52 ರನ್‌ ಗಳಿಸಿದೆ( ಕೊಹ್ಲಿ (21), ಅಂಬಟಿ ರಾಯುಡು (08).

ಮೊದಲ ಪಂದ್ಯದಲ್ಲಿ ಪರಾಕ್ರಮ ಮೆರೆದಿರುವ ಭಾರತ ತಂಡ ಆಸ್ಟ್ರೇಲಿಯಾ ಎದುರು ಮತ್ತೊಂದು ಜಯ ಸಾಧಿಸುವ ನಿರೀಕ್ಷೆಯಲ್ಲಿದೆ.

ವಿಶ್ವಕಪ್‌ನ ಪೂರ್ವಭಾವಿ ಅಭ್ಯಾಸ ಎಂದೇ ಪರಿಗಣಿಸಲಾಗಿರುವ ಸರಣಿಯ ಮೊದಲ ಪಂದ್ಯ ಎರಡು ದಿನಗಳ ಹಿಂದೆ ಹೈದರಾಬಾದ್‌ನಲ್ಲಿ ನಡೆದಿತ್ತು. ಅದರಲ್ಲಿ ಆತಿಥೇಯರು ಆರು ವಿಕೆಟ್‌ಗಳ ಜಯ ಸಾಧಿಸಿದ್ದರು. 

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !