ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs AUS: ಸೂರ್ಯ ಸತತ 2ನೇ ಬಾರಿಗೆ ಗೋಲ್ಡನ್ ಡಕ್; ಭಾರತದ 5 ವಿಕೆಟ್ ಪತನ

Last Updated 19 ಮಾರ್ಚ್ 2023, 9:04 IST
ಅಕ್ಷರ ಗಾತ್ರ

ವಿಶಾಖಪಟ್ಟಣ: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧ ಇಲ್ಲಿ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ ಬ್ಯಾಟಿಂಗ್ ವೈಫಲ್ಯವನ್ನು ಅನುಭವಿಸಿದೆ.

ತಾಜಾ ವರದಿಗಳ ವೇಳೆಗೆ 9.2 ಓವರ್‌ಗಳಲ್ಲಿ 49 ರನ್ನಿಗೆ ಐದು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ.

ಮಾಜಿ ನಾಯಕ ವಿರಾಟ್ ಕೊಹ್ಲಿ 22 ರನ್ ಗಳಿಸಿ ಕ್ರೀಸಿನಲ್ಲಿದ್ದು, ಅವರಿಗೆ ರವೀಂದ್ರ ಜಡೇಜ ಸಾಥ್ ನೀಡುತ್ತಿದ್ದಾರೆ.

ಸೂರ್ಯಕುಮಾರ್ ಸತತ 2ನೇ ಬಾರಿಗೆ ಗೋಲ್ಡನ್ ಡಕ್...
ಟಾಸ್ ಗೆದ್ದ ಆಸ್ಟ್ರೇಲಿಯಾದ ನಾಯಕ ಸ್ಟೀವ್ ಸ್ಮಿತ್ ಮೊದಲು ಫೀಲ್ಡಿಂಗ್ ಆಯ್ದುಕೊಂಡರು.

ನಾಯಕ ರೋಹಿತ್ ಶರ್ಮಾ ತಂಡಕ್ಕೆ ಮರಳಿದರೂ ಉತ್ತಮ ಆರಂಭವೊದಗಿಸಲು ಯಶಸ್ವಿಯಾಗಲಿಲ್ಲ.

ಈಗಾಗಲೇ ನಾಲ್ಕು ವಿಕೆಟ್ ಕಬಳಿಸಿರುವ ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಅತಿಥೇಯರನ್ನು ಮಾರಕವಾಗಿ ಕಾಡಿದರು. ಶುಭಮನ್ ಗಿಲ್ (0), ರೋಹಿತ್ ಶರ್ಮಾ (13), ಸೂರ್ಯಕುಮಾರ್ ಯಾದವ್ (0), ಕೆ.ಎಲ್. ರಾಹುಲ್ (9) ನಿರಾಸೆ ಮೂಡಿಸಿದರು.

ಈ ಪೈಕಿ ಸೂರ್ಯಕುಮಾರ್ ಯಾದವ್ ಸತತ ಎರಡನೇ ಬಾರಿಗೆ ಗೋಲ್ಡನ್ ಡಕ್ ಔಟ್ ಆದರು.

ಹಾರ್ದಿಕ್ ಪಾಂಡ್ಯ (1) ವಿಕೆಟ್ ಸೀನ್ ಅಬಾಟ್ ಪಾಲಾಯಿತು. ಸ್ಲಿಪ್‌ನಲ್ಲಿ ಅದ್ಭುತ ಕ್ಯಾಚ್ ಹಿಡಿಯುವ ಮೂಲಕ ಸ್ಮಿತ್ ಗಮನ ಸೆಳೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT