ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಹ್ಲಿ ಅರ್ಧಶತಕ: ಆಸ್ಟ್ರೇಲಿಯಾ ಗೆಲುವಿಗೆ 191 ರನ್‌ ಗುರಿ ನೀಡಿದ ಭಾರತ 

Last Updated 27 ಫೆಬ್ರುವರಿ 2019, 15:42 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟ್ವಿಂಟಿ–20 ಪಂದ್ಯದಲ್ಲಿ ಭಾರತ ಬೃಹತ್‌ ಮೊತ್ತ ಪೇರಿಸಿದೆ.

ಭಾರತದ ವಿರುದ್ಧ ಟಾಸ್‌ ಗೆದ್ದ ಆಸೀಸ್‌ ಪಡೆ ಬೌಲಿಂಗ್‌ ಆಯ್ಕೆ ಮಾಡಿಕೊಂಡಿತು.

ಮೊದಲು ಬ್ಯಾಟಿಂಗ್‌ ಮಾಡಿದ ಭಾರತ, ಕೆ.ಎಲ್‌.ರಾಹುಲ್‌ (47), ವಿರಾಟ್‌ ಕೊಹ್ಲಿ (72), ಎಂ.ಎಸ್‌.ಧೋನಿ (40) ರನ್‌ನೆರವಿನಿಂದ 20 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು 190 ರನ್‌ ಗಳಿಸಿತು.

ಆಸ್ಟ್ರೇಲಿಯಾ ಪರ ಜೇಸ್ ಬೆಹ್ರನಡಾರ್ಫ್‌ 1, ನೇಥನ್ ಕಾಲ್ಟರ್‌ನೈಲ್ 1, ಪ್ಯಾಟ್ ಕಮಿನ್ಸ್‌ 1, ಡಾರ್ಸಿ ಶಾರ್ಟ್ 1 ವಿಕೆಟ್‌ ಪಡೆದರು.

ಸದ್ಯ ಬ್ಯಾಟಿಂಗ್‌ ಆರಂಭಿಸಿರುವ ಆಸ್ಟ್ರೇಲಿಯಾ 4ಓವರ್‌ಗಳಲ್ಲಿ 2 ವಿಕೆಟ್‌ನಷ್ಟಕ್ಕೆ 22ರನ್‌ ಗಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT