ಪರ್ತ್: ಆಸ್ಟ್ರೇಲಿಯಾ ಮಹಿಳೆಯರ ತಂಡವು ಭಾರತದ ಎದುರು ನಡೆದ ಏಕೈಕ ಪಿಂಕ್ ಬಾಲ್ ಟೆಸ್ಟ್ ಪಂದ್ಯದಲ್ಲಿ ಜಯಭೇರಿ ಬಾರಿಸಿತು.

ಪಂದ್ಯದಲ್ಲಿ ಮೂರು ದಿನಗಳಿಂದ ಬಿಗಿಹಿಡಿತ ಸಾಧಿಸಿದ್ದ ಆತಿಥೇಯ ತಂಡವು ಭಾನುವಾರ ಕೇವಲ 25 ರನ್ಗಳ ಗುರಿಯನ್ನು ಬೆನ್ನಟ್ಟಿ 10 ವಿಕೆಟ್ಗಳಿಂದ ಗೆದ್ದಿತು. ನಾಯಕಿ ಅಲೀಸಾ ಹೀಲಿ ಅವರಿಗೆ ವಿದಾಯದ ಟೆಸ್ಟ್ ಪಂದ್ಯವಾಗಿತ್ತು.

ಮೊದಲ ಇನಿಂಗ್ಸ್ನಲ್ಲಿ ಆಸ್ಟ್ರೇಲಿಯಾ ತಂಡವು 125 ರನ್ಗಳ ಮುನ್ನಡೆ ಸಾಧಿಸಿತ್ತು. ಭಾರತವು ಎರಡನೇ ಇನಿಂಗ್ಸ್ನಲ್ಲಿ 48.2 ಓವರ್ಗಳಲ್ಲಿ 149 ರನ್ ಗಳಿಸಿ ಎಲ್ಲ ವಿಕೆಟ್ ಕಳೆದುಕೊಂಡಿತು. ಪ್ರತಿಕಾ ರಾವಲ್ (63 ರನ್ ) ಅವರು ಅರ್ಧಶತಕ ಹೊಡೆದರು. ಅವರನ್ನು ಬಿಟ್ಟರೆ ಸ್ನೇಹಾ ರಾಣಾ 30 ರನ್ ಹೊಡೆದರು.

ಸಂಕ್ಷಿಪ್ತ ಸ್ಕೋರು:

ಮೊದಲ ಇನಿಂಗ್ಸ್: ಭಾರತ: 62.4 ಓವರ್ಗಳಲ್ಲಿ 198. ಆಸ್ಟ್ರೇಲಿಯಾ: 90.4 ಓವರ್ಗಳಲ್ಲಿ 323.

ಎರಡನೇ ಇನಿಂಗ್ಸ್: ಭಾರತ: 48.2 ಓವರ್ಗಳಲ್ಲಿ 149 (ಪ್ರತೀಕಾ ರಾವಲ್ 63, ಜೆಮಿಮಾ ರಾಡ್ರಿಗಸ್ 14, ಸ್ನೇಹಾ ರಾಣಾ 30, ಲೂಸಿ ಹ್ಯಾಮಿಲ್ಟನ್ 32ಕ್ಕೆ3, ಅನಾಬೆಲ್ ಸದರ್ಲೆಂಡ್ 15ಕ್ಕೆ2, ಅಲನಾ ಕಿಂಗ್ 23ಕ್ಕೆ2, ಆ್ಯಷ್ಲೆ ಗಾರ್ಡನರ್ 8ಕ್ಕೆ2)

ಆಸ್ಟ್ರೇಲಿಯಾ: 4.3 ಓವರ್ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 28 (ಜಾರ್ಜಿಯಾ ವೊಲ್ ಔಟಾಗದೇ 16, ಫೋಬಿ ಲಿಚ್ಫೀಲ್ಡ್ ಔಟಾಗದೇ 11) ಫಲಿತಾಂಶ:ಆಸ್ಟ್ರೇಲಿಯಾ ತಂಡಕ್ಕೆ 10 ವಿಕೆಟ್ ಜಯ.
.T20 WC Final: ಭಾರತ ಮೂಲದ ವಿನ್ಯಾಸಕರಿಂದ ಸಿದ್ಧವಾಗಿದೆ ಟಿ20 ವಿಶ್ವಕಪ್ ಟ್ರೋಫಿ.ಟಿ20 ವಿಶ್ವಕಪ್ ಫೈನಲ್: ಹೋಟೆಲ್ ಕೊಠಡಿ ಬಾಡಿಗೆ ದರದಲ್ಲಿ ಭಾರಿ ಏರಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.