ಐದನೇ ಏಕದಿನ ಪಂದ್ಯ: ಟಾಸ್‌ ಗೆದ್ದ ಆಸ್ಟ್ರೇಲಿಯಾ ದಿಟ್ಟ ಬ್ಯಾಟಿಂಗ್‌

ಶನಿವಾರ, ಮಾರ್ಚ್ 23, 2019
31 °C
ಜಡೇಜ ಮೋಡಿಗೆ ಫಿಂಚ್‌ ವಿಕೆಟ್‌ ಪತನ

ಐದನೇ ಏಕದಿನ ಪಂದ್ಯ: ಟಾಸ್‌ ಗೆದ್ದ ಆಸ್ಟ್ರೇಲಿಯಾ ದಿಟ್ಟ ಬ್ಯಾಟಿಂಗ್‌

Published:
Updated:

ನವದೆಹಲಿ: ಇಲ್ಲಿನ ಫಿರೋಜ್‌ ಶಾ ಕೋಟ್ಲಾ ಮೈದಾನದಲ್ಲಿ ಬುಧವಾರ ನಡೆಯುತ್ತಿರುವ ಐದನೇ ಏಕದಿನ ಪಂದ್ಯದಲ್ಲಿ ಟಾಸ್‌ ಗೆದ್ದ ಆಸ್ಟ್ರೇಲಿಯಾ ಬ್ಯಾಟಿಂಗ್‌ ಆಯ್ಕೆ ಮಾಡಿದೆ. 

ಬ್ಯಾಟಿಂಗ್‌ ಆರಂಭಿಸಿದ ಉಸ್ಮಾನ್ ಖ್ವಾಜಾ ಮತ್ತು ಆ್ಯರನ್ ಫಿಂಚ್ ಜೋಡಿ ಉತ್ತಮ ಆಟವಾಡಿತು. ಜತೆಯಾಟ ಗಟ್ಟಿಗೊಳ್ಳುತ್ತಿದ್ದ ಹಂತದಲ್ಲಿ ರವೀಂದ್ರ ಜಡೇಜ ಸ್ಪಿನ್‌ ಮೋಡಿಗೆ ಫಿಂಚ್‌(27) ವಿಕೆಟ್‌ ಕಳೆದುಕೊಂಡರು. ಮತ್ತೊಂದು ಕಡೆ ಖ್ವಾಜಾ(91) ದಿಟ್ಟ ಹೋರಾಟ ಮುಂದುವರಿಸಿದ್ದು, ಪೀಟರ್ ಹ್ಯಾಂಡ್ಸ್‌ಕಂಬ್(35) ರನ್‌ ಪೇರಿಸಲು ನೆರವಾಗಿದ್ದಾರೆ. 

ಆಸ್ಟ್ರೇಲಿಯಾ 27.3 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 154 ರನ್‌ ಗಳಿಸಿದೆ.

ನಾಲ್ಕನೇ ಏಕದಿನ ಪಂದ್ಯದಲ್ಲಿ ಬೃಹತ್ ಮೊತ್ತ ಪೇರಿಸಿದರೂ ಸೋಲು ಅನುಭವಿಸಿದ ಭಾರತ ಅಂತಿಮ ಪಂದ್ಯದಲ್ಲಿ ಒತ್ತಡದಲ್ಲಿದೆ. ಶಿಖರ್ ಧವನ್, ವಿರಾಟ್ ಕೊಹ್ಲಿ ಮತ್ತು ರಿಷಭ್ ಪಂತ್ ಮೂವರಿಗೂ ದೆಹಲಿಯ ಫಿರೋಜ್ ಶಾ ಕೋಟ್ಲಾ ಕ್ರೀಡಾಂಗಣವೇ ತವರುಮನೆಯಾಗಿದ್ದು, ಅವರ ಬ್ಯಾಟಿಂಗ್‌ಗಾಗಿ ಅಭಿಮಾನಿಗಳು ಕಾತುರರಾಗಿದ್ದಾರೆ. 

ಯಜುವೇಂದ್ರ ಚಾಹಲ್ ಮತ್ತು ಕೆ.ಎಲ್‌.ರಾಹುಲ್‌ ಬದಲು ರವೀಂದ್ರ ಜಡೇಜ ಹಾಗೂ ಮೊಹಮ್ಮದ್‌ ಶಮಿ ಅಂಗಳಕ್ಕಿಳಿದಿದ್ದಾರೆ.  

ಸ್ಕೋರ್‌ ವಿವರ: https://bit.ly/2HwgjSO

ತಂಡಗಳು

ಭಾರತ: ವಿರಾಟ್ ಕೊಹ್ಲಿ (ನಾಯಕ), ರೋಹಿತ್ ಶರ್ಮಾ, ಶಿಖರ್ ಧವನ್, ಕೆ.ಎಲ್. ರಾಹುಲ್, ರಿಷಭ್ ಪಂತ್ (ವಿಕೆಟ್‌ಕೀಪರ್), ಕೇದಾರ್ ಜಾಧವ್, ವಿಜಯಶಂಕರ್, ರವೀಂದ್ರ ಜಡೇಜ, ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬೂಮ್ರಾ, ಯಜುವೇಂದ್ರ ಚಾಹಲ್, ಭುವನೇಶ್ವರ್ ಕುಮಾರ್, ಅಂಬಟಿ ರಾಯುಡು.

ಆಸ್ಟ್ರೇಲಿಯಾ: ಆ್ಯರನ್ ಫಿಂಚ್ (ನಾಯಕ), ಉಸ್ಮಾನ್ ಖ್ವಾಜಾ, ಪೀಟರ್ ಹ್ಯಾಂಡ್ಸ್‌ಕಂಬ್, ಶಾನ್ ಮಾರ್ಷ್, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್, ಆ್ಯಷ್ಟನ್ ಟರ್ನರ್, ಜೈ ರಿಚರ್ಡ್ಸನ್, ಆ್ಯಡಂ ಜಂಪಾ, ಆ್ಯಂಡ್ರ್ಯೂ ಟೈ, ಪ್ಯಾಟ್ ಕಮಿನ್ಸ್, ನೇಥನ್ ಕೌಲ್ಟರ್‌ನೈಲ್, ಅಲೆಕ್ಸ್ ಕ್ಯಾರಿ, ನೇಥನ್ ಲಯನ್, ಜೇಸನ್ ಬೆಹ್ರನ್‌ಡ್ರಾಫ್.

ಬರಹ ಇಷ್ಟವಾಯಿತೆ?

 • 2

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !