ಚೆಮ್ಸ್ಫೋರ್ಡ್ (ಯುಕೆ): ಮುಂದಿನ ತಿಂಗಳು ನಡೆಯಲಿರುವ ಐಸಿಸಿ ಮಹಿಳಾ ಟಿ20 ವಿಶ್ವಕಪ್ಗೆ ಮೊದಲು ಸ್ಥಿರತೆಯನ್ನು ಪಡೆದುಕೊಳ್ಳಲು ಮತ್ತು ತಂಡ ಸಂಯೋಜನೆಯನ್ನು ಅಂತಿಮಗೊಳಿಸುವ ಭಾಗವಾಗಿ ಭಾರತ ತಂಡ, ಇಂಗ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿ ಆಡಲಿದೆ. ಮೊದಲ ಪಂದ್ಯ ಗುರುವಾರ ಇಲ್ಲಿ ನಡೆಯಲಿದೆ.

ಜೂನ್ 12 ರಂದು ವಿಶ್ವಕಪ್ ರಂಭವಾಗಲಿದೆ. 2025ರಲ್ಲಿ ಏಕದಿನ ವಿಶ್ವಕಪ್ ಗೆದ್ದುಕೊಂಡಿದ್ದ ಭಾರತ ಟಿ20 ಪಂದ್ಯಗಳಲ್ಲೂ ಆಗೊಮ್ಮೆ ಈಗೊಮ್ಮೆ ಮಿಂಚಿದೆ. ಆದರೆ ಸ್ಥಿರವಾದ ಪ್ರದರ್ಶನನೀಡಿಲ್ಲ.

ಈ ವರ್ಷ ಶ್ರೀಲಂಕಾ ವಿರುದ್ಧ 5–0 ಅಮೋಘ ಸರಣಿ ಜಯ ಪಡೆಯಿತು. ಆಸ್ಟ್ರೇಲಿಯಾ ವಿರುದ್ಧ ಅದರ ನೆಲದಲ್ಲೇ 2–1 ಸರಣಿ ಗೆದ್ದು ಇತಿಹಾಸ ಬರೆಯಿತು. ಬ್ಯಾಟರ್ಗಳ ಆಕ್ರಮಣಕಾರಿ ಮನೋಭಾವ, ಬೌಲರ್ಗಳ ಶಿಸ್ತುಬದ್ಧ ಬೌಲಿಂಗ್ ಗಮನಸೆಳೆಯಿತು. ಆದರೆ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿ ತಂಡ 1–4ರಲ್ಲಿ ಹೀನಾಯ ಸೋಲು ಕಂಡಿದ್ದು ಕಳವಳಕ್ಕೆ ಕಾರಣವಾಗಿದೆ.

ಇಂಗ್ಲೆಂಡ್ ತಂಡವು ನ್ಯೂಜಿಲೆಂಡ್ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿ ಈ ಸರಣಿ ಆಡುತ್ತಿದೆ. ಆದರೆ ಕಾಯಂ ನಾಯಕಿ ನಾಟ್ ಶಿವರ್ ಬ್ರಂಟ್ ಮೀನಖಂಡದ ನೋವಿನಿಂದ ಚೇತರಿಸುತ್ತಿದ್ದು, ಇಲ್ಲಿ ಆಡುತ್ತಿಲ್ಲ. ಮಾತೃತ್ವ ರಜೆ ಮುಗಿಸಿರುವ ಡ್ಯಾನಿ ವ್ಯಾಟ್ ಹಾಜ್ ತಂಡಕ್ಕೆ ಮರಳಿದ್ದಾರೆ. ತಮ್ಮ ತಂಡವು, ಭಾರತದ ಸ್ಪಿನ್ ಪಡೆಯಿಂದ ಸವಾಲನ್ನು ನಿರೀಕ್ಷಿಸುತ್ತಿದೆ ಎಂದು ವಿಕೆಟ್ ಕೀಪರ್–ಬ್ಯಾಟರ್ ಅಮಿ ಜೋನ್ಸ್ ಹೇಳಿದ್ದಾರೆ.

ಭಾರತ ತಂಡ: ಹರ್ಮನ್ಪ್ರೀತ್ ಕೌರ್ (ನಾಯಕಿ), ಸ್ಮೃತಿ ಮಂದಾನ (ಉಪ ನಾಯಕಿ), ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ಭಾರತಿ ಫುಲ್ಮಲಿ, ದೀಪ್ತಿ ಶರ್ಮಾ, ರಿಚಾ ಘೋಷ್ (ವಿಕೆಟ್ ಕೀಪರ್), ಶ್ರೀ ಚರಣಿ, ಯಷ್ಟಿಕಾ ಭಾಟಿಯಾ (ವಿಕೆಟ್ ಕೀಪರ್), ನಂದಿನಿ ಶರ್ಮಾ, ಅರುಂಧತಿ ರೆಡ್ಡಿ, ರೇಣುಕಾ ಠಾಕೂರ್, ಕ್ರಾಂತಿ ಗೌಡ, ಶ್ರೇಯಾಂಕ ಪಾಟೀಲ, ರಾಧಾ ಯಾದವ್.

ಪಂದ್ಯ ಆರಂಭ: ರಾತ್ರಿ 11 (ಭಾರತೀಯ ಕಾಲಮಾನ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.