ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

T20 ವಿಶ್ವಕಪ್ | ಸ್ಮೃತಿ ಮಂದಾನ ಅಮೋಘ ಬ್ಯಾಟಿಂಗ್; ಐರ್ಲೆಂಡ್‌ಗೆ ಸವಾಲಿನ ಗುರಿ

Last Updated 20 ಫೆಬ್ರುವರಿ 2023, 14:42 IST
ಅಕ್ಷರ ಗಾತ್ರ

ಗೆಬೆರಾ, ದಕ್ಷಿಣ ಆಫ್ರಿಕಾ: ಮಹಿಳೆಯರ ಟಿ20 ವಿಶ್ವಕಪ್‌ ಟೂರ್ನಿಯ ಐರ್ಲೆಂಡ್‌ ವಿರುದ್ಧದ ಪಂದ್ಯದಲ್ಲಿ ಭಾರತದ ಆರಂಭಿಕ ಬ್ಯಾಟರ್‌ ಸ್ಮೃತಿ ಮಂದಾನ ಅಮೋಘ ಅರ್ಧಶತಕ ಸಿಡಿಸಿದರು. ಅವರ ಆಟದ ಬಲದಿಂದ ಟೀಂ ಇಂಡಿಯಾ ನಿಗದಿತ 20 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 155 ರನ್‌ ಕಲೆಹಾಕಿದೆ.

ಇಲ್ಲಿನ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್‌ ಗೆದ್ದ ಭಾರತ ಮೊದಲು ಬ್ಯಾಟಿಂಗ್‌ ಆಯ್ದುಕೊಂಡಿತು. ಇನಿಂಗ್ಸ್‌ ಆರಂಭಿಸಿದ ಭಾರತಕ್ಕೆ ಶೆಫಾಲಿ ವರ್ಮಾ (24) ಹಾಗೂ ಮಂದಾನ ಜೋಡಿ ಉತ್ತಮ ಆರಂಭ ನೀಡಿತು. ಇವರಿಬ್ಬರು ಮೊದಲ ವಿಕೆಟ್‌ ಪಾಲುದಾರಿಕೆಯಲ್ಲಿ 62 ರನ್ ಕೂಡಿಸಿದರು.

ಶೆಫಾಲಿ ಔಟಾದ ಬಳಿಕ ಬಂದ ಹರ್ಮನ್‌ಪ್ರೀತ್ ಕೌರ್‌ 13 ಗಳಿಸಿ ಔಟಾದರೆ, ರಿಚಾ ಘೋಷ್‌ ಹಾಗೂ ದೀಪ್ತಿ ಶರ್ಮಾ ಸೊನ್ನೆ ಸುತ್ತಿದರು.

ಒಂದೆಡೆ ವಿಕೆಟ್‌ ಬೀಳುತ್ತಿದ್ದರೂ ದಿಟ್ಟ ಆಟವಾಡಿದ ಮಂದಾನ, ಕೇವಲ 56 ಎಸೆತಗಳಲ್ಲಿ 87 ರನ್‌ ಗಳಿಸಿ ಮಿಂಚಿದರು. ಸ್ವಲ್ಪದರಲ್ಲೇ ಶತಕ ತಪ್ಪಿಸಿಕೊಂಡರು. ಜೆಮಿಮಾ ರಾಡ್ರಿಗಸ್‌ (19) ಕೊನೆಯಲ್ಲಿ ಬೀಸಾಟವಾಡಿ ತಂಡದ ಮೊತ್ತವನ್ನು 150 ಗಡಿ ದಾಟಿಸಿದರು.

ಐರ್ಲೆಂಡ್‌ ಪರ ಲೌರಾ ಡೆಲಾನಿ 3, ಒರ್ಲಾ ಪ್ರೆಂಡರ್‌ಗಸ್ಟ್‌ 2 ಹಾಗೂ ಎರ್ಲೆನ್‌ ಕೆಲ್ಲಿ ಒಂದು ವಿಕೆಟ್ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT