ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs NZ WTC Final: ನಾಲ್ಕನೇ ದಿನವೂ ಮಳೆ ಕಾಟ; ಆಟ ವಿಳಂಬ

ಅಕ್ಷರ ಗಾತ್ರ

ಸೌತಾಂಪ್ಟನ್‌: ಭಾರತ ಮತ್ತು ನ್ಯೂಜಿಲೆಂಡ್‌ ತಂಡಗಳು ಸೆಣಸಾಟ ನಡೆಸುತ್ತಿರುವ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್‌ ಪಂದ್ಯಕ್ಕೆ‌ ನಾಲ್ಕನೇ ದಿನವೂ ಮಳೆ ಅಡ್ಡಿ ಪಡಿಸಿದ್ದು, ದಿನದಾಟ ಆರಂಭವಾಗುವುದು ವಿಳಂಬವಾಗಿದೆ. ನಿಗದಿಯಂತೆ ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 3ಕ್ಕೆ ಆಟ ಆರಂಭವಾಗಬೇಕಿತ್ತು.

ಫೈನಲ್‌ ಪಂದ್ಯವು ಶುಕ್ರವಾರ (ಜೂನ್‌ 18) ಆರಂಭವಾಗಬೇಕಿತ್ತು. ಆದರೆಮಳೆಯಿಂದಾಗಿ ಮೊದಲ ದಿನದಾಟ ಸಂಪೂರ್ಣವಾಗಿ ರದ್ದಾಗಿತ್ತು. ಎರಡೂ ಮತ್ತು ಮೂರನೇ ದಿನವೂ ಕೆಲ ಸಮಯ ಮಳೆ ಕಾಟ ನೀಡಿತ್ತು.

ಪಂದ್ಯದಲ್ಲಿ ಟಾಸ್‌ ಸೋತರೂ ಮೊದಲು ಬ್ಯಾಟಿಂಗ್‌ ಮಾಡುವ ಅವಕಾಶ ಪಡೆದ ಭಾರತ ತಂಡ ನಾಯಕ ವಿರಾಟ್‌ ಕೊಹ್ಲಿ (44) ಮತ್ತು ಉಪನಾಯಕ ಅಜಿಂಕ್ಯ ರಹಾನೆ (49) ಬ್ಯಾಟಿಂಗ್‌ ನೆರವಿನಿಂದ217 ರನ್‌ ಗಳಿಸಿ ಆಲೌಟ್‌ ಆಗಿತ್ತು. ಎದುರಾಳಿವೇಗಿ ಕೈಲ್‌ ಜೆಮೀಸನ್‌ತಮ್ಮ ಸ್ವಿಂಗ್‌ ಬೌಲಿಂಗ್‌ಮೂಲಕಟೀಂ ಇಂಡಿಯಾ ಬ್ಯಾಟ್ಸ್‌ಮನ್‌ಗಳನ್ನುಕಂಗೆಡಿಸಿದರು. ಅವರು31 ರನ್‌ ನೀಡಿ5 ವಿಕೆಟ್‌ ಕಬಳಿಸಿದರು. ಅವರಿಗೆ ಉತ್ತಮ ನೆರವು ನೀಡಿದ ಟ್ರೆಂಟ್‌ ಬೌಲ್ಟ್‌ ಮತ್ತು ನೀಲ್‌ ವಾಗ್ನರ್‌ ತಲಾ ಎರಡು ವಿಕೆಟ್‌ ಪಡೆದರು. ಮತ್ತೊಂದು ವಿಕೆಟ್‌ ಟಿಮ್‌ ಸೌಥಿ ಪಾಲಾಯಿತು.

ಬಳಿಕ ಇನಿಂಗ್ಸ್‌ ಆರಂಭಿಸಿದ ನ್ಯೂಜಿಲೆಂಡ್‌ ಎರಡು ವಿಕೆಟ್‌ ನಷ್ಟಕ್ಕೆ101 ರನ್‌ ಗಳಿಸಿದೆ. ನಾಯಕ ಕೇನ್‌ ವಿಲಿಯಮ್ಸನ್‌ (12) ಮತ್ತು ಇನ್ನೂ ಖಾತೆ ತೆರೆಯದ ರಾಸ್‌ ಟೇಲರ್‌ ಕ್ರೀಸ್‌ನಲ್ಲಿದ್ದಾರೆ.

ಸೌತಾಂಪ್ಟನ್‌ನಲ್ಲಿ ನಡೆಯುತ್ತಿರುವವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ನ ಫೈನಲ್‌ ಪಂದ್ಯದ ನಾಲ್ಕನೇ ದಿನದಾಟವು ಮಳೆಯಿಂದಾಗಿ ವಿಳಂಬವಾಗಿದೆ ಎಂದು ಐಸಿಸಿ ಟ್ವೀಟ್‌ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT