ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್: ಇಶಾನ್ ಅಬ್ಬರ; ಭಾರತ ‘ಎ’ಗೆ ಜಯ

ದಕ್ಷಿಣ ಆಫ್ರಿಕಾ ‘ಎ’ ವಿರುದ್ಧದ ಸರಣಿಯಲ್ಲಿ ಪಾಂಡೆ ಬಳಗಕ್ಕೆ 2–0 ಮುನ್ನಡೆ
Last Updated 31 ಆಗಸ್ಟ್ 2019, 19:45 IST
ಅಕ್ಷರ ಗಾತ್ರ

ತಿರುವನಂತಪುರ: ಯುವ ಆಟಗಾರ ಇಶಾನ್ ಕಿಶನ್ಅವರ ಮಿಂಚಿನ ವೇಗದ ಅರ್ಧಶತಕದ ಬಲದಿಂದ ಭಾರತ ‘ಎ’ ತಂಡವು ಶನಿವಾರ ಎರಡು ವಿಕೆಟ್‌ಗಳಿಂದ ದಕ್ಷಿಣ ಆಫ್ರಿಕಾ ‘ಎ’ ವಿರುದ್ಧ ಜಯಿಸಿತು.

ಇದರೊಂದಿಗೆ ಐದು ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿಯಲ್ಲಿ ಮನೀಷ್ ಪಾಂಡೆ ನಾಯಕತ್ವದ ತಂಡವು 2–0 ಮುನ್ನಡೆ ಸಾಧಿಸಿದೆ.

ಮಳೆ ಸುರಿದ್ದಿದ್ದರಿಂದ ಇನಿಂಗ್ಸ್‌ ಅನ್ನು 21 ಓವರ್‌ಗಳಿಗೆ ನಿಗದಿ ಮಾಡಲಾಯಿತು. ಮೊದಲು ಬ್ಯಾಟಿಂಗ್ ಮಾಡಿದ ದಕ್ಷಿಣ ಆಫ್ರಿಕಾ ತಂಡವು 5 ವಿಕೆಟ್‌ಗಳಿಗೆ 162 ರನ್ ಗಳಿಸಿತು. ಜಾರ್ಜ್‌ ಲಿಂಡೆ (ಔಟಾಗದೆ 52) ಮತ್ತು ನಾಯಕ ತೆಂಬಾ ಬವುಮಾ (40 ರನ್) ಉತ್ತಮ ಬ್ಯಾಟಿಂಗ್ ಮಾಡಿದರು.

ಆದರೆ ಈ ಕಠಿಣ ಹಾದಿಯನ್ನು ಬೆನ್ನಟ್ಟಿದ ಆತಿಥೇಯ ತಂಡವು ಆರಂಭದಲ್ಲಿಯೇ ಪೆಟ್ಟು ತಿಂದಿತು.57 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು.

ಆದರೆ, ಈ ಹಂತದಲ್ಲಿ ಬೀಸಾಟಕ್ಕಿಳಿದ ಇಶಾನ್ ಕೇವಲ 24 ಎಸೆತಗಳಲ್ಲಿ 55 ರನ್‌ ಗಳಿಸಿದರು. ಅವರ ಬಿರುಸಿನ ಆಟಕ್ಕೆ ಎದುರಾಳಿ ಬೌಲರ್‌ಗಳು ಬಸವಳಿದರು. ಅವರು ಒಂದು ಭರ್ಜರಿ ಸಿಕ್ಸರ್ ಮತ್ತು ಐದು ಬೌಂಡರಿಗಳನ್ನು ಸಿಡಿಸಿದರು.

ಅವರೊಂದಿಗೆ ಮಿಂಚಿದ ಕೃಣಾಲ್ ಪಾಂಡ್ಯ ಕೇವಲ 15 ಎಸೆತಗಳಲ್ಲಿ 23 ರನ್‌ ಗಳಿಸಿದರು. ಇದರಿಂದಾಗಿ ತಂಡದ ಗೆಲುವು ಸಾಧ್ಯವಾಯಿತು.

ಸಂಕ್ಷಿಪ್ತ ಸ್ಕೋರು
ದಕ್ಷಿಣ ಆಫ್ರಿಕಾ ‘ಎ’:
21 ಓವರ್‌ಗಳಲ್ಲಿ 5 ವಿಕೆಟ್‌ಗಳಿಗೆ 162 (ಜಾರ್ಜ್ ಲಿಂಡೆ ಔಟಾಗದೆ 52, ತೆಂಬಾ ಬವುಮಾ 40, ಹೆನ್ರಿಚ್ ಕ್ಲಾಸೆನ್ 31, ಅಕ್ಷರ್ ಪಟೇಲ್ 19ಕ್ಕೆ1), ಭಾರತ ‘ಎ’: 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 163 (ಇಶಾನ್ ಕಿಶನ್ 55, ಅನ್ಮೋಲ್‌ಪ್ರೀತ್ ಸಿಂಗ್ 30, ಕೃಣಾಲ್ ಪಾಂಡ್ಯ ಔಟಾಗದೆ 23, ಜೂನಿಯರ್ ಡೆಲಾ 25ಕ್ಕೆ2)

ಫಲಿತಾಂಶ: ಭಾರತ ‘ಎ’ ತಂಡಕ್ಕೆ 2 ವಿಕೆಟ್‌ ಜಯ. ಪಂದ್ಯಶ್ರೇಷ್ಠ: ಇಶಾನ್ ಕಿಶನ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT