ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IND vs SL | ಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯ: ಸರಣಿ ಗೆಲುವಿನತ್ತ ಭಾರತ ಒಲವು

ಕ್ರಿಕೆಟ್: ವಿರಾಟ್, ರೋಹಿತ್ ಮೇಲೆ ಕಣ್ಣು: ಶ್ರೀಲಂಕಾಕ್ಕೆ ತಿರುಗೇಟು ನೀಡುವ ತವಕ
Last Updated 11 ಜನವರಿ 2023, 17:53 IST
ಅಕ್ಷರ ಗಾತ್ರ

ಕೋಲ್ಕತ್ತ: ನಾಯಕ ರೋಹಿತ್ ಶರ್ಮಾ ಸೇರಿ ಅಗ್ರಕ್ರಮಾಂಕದ ಬ್ಯಾಟರ್‌ಗಳು ಲಯಕ್ಕೆ ಮರಳಿರುವುದು ಭಾರತ ತಂಡದಲ್ಲಿ ಆತ್ಮವಿಶ್ವಾಸವನ್ನು ಇಮ್ಮಡಿಸಿದೆ.

ಗುರುವಾರ ಈಡನ್‌ ಗಾರ್ಡನ್‌ನಲ್ಲಿ ನಡೆಯಲಿರುವ ಎರಡನೇ ಪಂದ್ಯದಲ್ಲಿ ಗೆದ್ದು ಸರಣಿ ಕೈವಶ ಮಾಡಿಕೊಳ್ಳುವತ್ತ ರೋಹಿತ್ ಬಳಗ ಚಿತ್ತ ನೆಟ್ಟಿದೆ.

ಮಂಗಳವಾರ ಗುವಾಹಟಿಯಲ್ಲಿ ನಡೆದಿದ್ದ ಮೊದಲ ಏಕದಿನ ಪಂದ್ಯದಲ್ಲಿ ಆರಂಭಿಕ ಜೋಡಿ ರೋಹಿತ್ ಮತ್ತು ಗಿಲ್ ಶತಕದ ಜೊತೆಯಾಟವಾಡಿದ್ದರು. ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ ಮಾದರಿಯಲ್ಲಿ 45ನೇ ಶತಕ ದಾಖಲಿಸಿದರು. ಬೃಹತ್ ಮೊತ್ತದ ಗುರಿ ಬೆನ್ನಟ್ಟಿದ ಲಂಕಾ ತಂಡದ ಎದುರು ಆತಿಥೇಯ ಬೌಲರ್‌ಗಳು ಉತ್ತಮವಾಗಿ ಬೌಲಿಂಗ್ ಮಾಡಿದರು.

ಮೊದಲ ಪಂದ್ಯದ ತಂಡವನ್ನೇ ಉಳಿಸಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳು ಲಯಕ್ಕ ಮರಳಿದರೆ ಇನ್ನಷ್ಟು ದೊಡ್ಡ ಮೊತ್ತ ಪೇರಿಸುವ ಅವಕಾಶ ಸಿಗಲಿದೆ. ವಿಕೆಟ್‌ಕೀಪಿಂಗ್ ಮತ್ತು ನಾಲ್ಕನೇ ಕ್ರಮಾಂಕದ ಬ್ಯಾಟಿಂಗ್ ಹೊಣೆಯನ್ನು ನಿಭಾಯಿಸುತ್ತಿರುವ ಕೆ.ಎಲ್. ರಾಹುಲ್ ಅವರಿಗೆ ತಮ್ಮ ಸಾಮರ್ಥ್ಯ ತೋರಲು ಮತ್ತೊಂದು ಅವಕಾಶ ಸಿಗುವುದು ಖಚಿತ.

ಆದರೆ, ಲಂಕಾ ತಂಡವು ತನ್ನ ಲೋಪಗಳನ್ನು ಸರಿಪಡಿಸಿಕೊಂಡು ತಿರುಗೇಟು ನೀಡುವ ಛಲದಲ್ಲಿದೆ. ಗುವಾಹಟಿ ಪಂದ್ಯದಲ್ಲಿ ಲಂಕಾ ತಂಡದ ಫೀಲ್ಡಿಂಗ್ ಲೋಪಗಳಿದ್ದವು. ವಿರಾಟ್ ಕೊಹ್ಲಿಯ ಎರಡು ಕ್ಯಾಚ್ ನೆಲಕ್ಕೆ ಚೆಲ್ಲಿದ್ದರು.

ಆದರೆ ಬ್ಯಾಟಿಂಗ್‌ನಲ್ಲಿ ನಾಯಕ ದಸುನ್ ಶನಕಾ ಚೆಂದದ ಶತಕ ದಾಖಲಿಸಿದ್ದರು. ಆದರೆ ಬೌಲರ್‌ಗಳು ಶಿಸ್ತುಬದ್ಧ ದಾಳಿ ನಡೆಸಿದರೆ ಮಾತ್ರ ಭಾರತದ ಬ್ಯಾಟಿಂಗ್ ಪಡೆಯನ್ನು ಕಟ್ಟಿಹಾಕಬಹುದು.

ತಂಡಗಳು

ಭಾರತ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಕೆ.ಎಲ್. ರಾಹುಲ್ (ವಿಕೆಟ್‌ಕೀಪರ್), ವಾಷಿಂಗ್ಟನ್ ಸುಂದರ್, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್, ಆರ್ಷದೀಪ್ ಸಿಂಗ್.

ಶ್ರೀಲಂಕಾ: ದಸುನ್ ಶನಕಾ (ನಾಯಕ), ಕುಶಾಲ ಮೆಂಡಿಸ್ (ಉಪನಾಯಕ), ಪಥುಮ್ ನಿಸಾಂಕ, ಅವಿಷ್ಕಾ ಫರ್ನಾಂಡೊ, ಸದೀರಾ ಸಮರವಿಕ್ರಮ, ಚರಿತಾ ಅಸಲಂಕಾ, ಧನಂಜಯ್ ಡಿಸಿಲ್ವಾ, ವಣಿಂದು ಹಸರಂಗಾ,

ಪಂದ್ಯ ಆರಂಭ: ಮಧ್ಯಾಹ್ನ 1.30

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT