ಮಂಗಳವಾರ, ಫೆಬ್ರವರಿ 25, 2020
19 °C

IND vs WI | ಮತ್ತೆರಡು ದಾಖಲೆ ಬರೆಯಲು ವಿರಾಟ್–ರೋಹಿತ್ ಪೈಪೋಟಿ

ಏಜೆನ್ಸಿಸ್ Updated:

ಅಕ್ಷರ ಗಾತ್ರ : | |

ಹೈದರಾಬಾದ್‌: ಭಾರತ ಕ್ರಿಕೆಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿ ಹಾಗೂ ಉಪನಾಯಕ ರೋಹಿತ್‌ ಶರ್ಮಾ ವೆಸ್ಟ್‌ ಇಂಡೀಸ್‌ ವಿರುದ್ಧದ ಸರಣಿಯಲ್ಲಿ ಮತ್ತೆರಡು ದಾಖಲೆಗಳನ್ನು ಬರೆಯಲು ತುದಿಗಾಲಲ್ಲಿ ನಿಂತಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಅತಿಹೆಚ್ಚು ಅರ್ಧಶತಕ ಹಾಗೂ ಕ್ರಿಕೆಟ್‌ನ ಮೂರೂ ಮಾದರಿಯಲ್ಲಿ ಈ ವರ್ಷ ಹೆಚ್ಚು ರನ್‌ ಕಲೆಹಾಕಿದ ಆಟಗಾರ ಎನಿಸಿಕೊಳ್ಳಲು ಪೈಪೋಟಿಗಿಳಿದಿದ್ದಾರೆ.

ಕಳೆದು ಮೂರೂ ವರ್ಷಗಳಲ್ಲಿ ಹೆಚ್ಚು ರನ್‌ಗಳಿಸಿದ ಆಟಗಾರ ಎನಿಸಿರುವ ಕೊಹ್ಲಿ ಈ ಬಾರಿಯೂ ಮೊದಲ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಟೆಸ್ಟ್‌, ಏಕದಿನ ಹಾಗೂ ಟಿ20 ಕ್ರಿಕೆಟ್‌ನಲ್ಲಿ ಈ ವರ್ಷ 2,183 ಕಲೆಹಾಕಿದ್ದಾರೆ. ಕೊಹ್ಲಿಗಿಂತ ಹಿಂದೆ ಇರುವ ರೋಹಿತ್‌ ಖಾತೆಯಲ್ಲಿ 2,090 ರನ್‌ ಇವೆ.

ವಿಂಡೀಸ್‌ ವಿರುದ್ಧದ ಸರಣಿಯಲ್ಲಿ ತಲಾ ಮೂರು ಟಿ20 ಹಾಗೂ ಏಕದಿನ ಪಂದ್ಯಗಳನ್ನು ಈ ಇಬ್ಬರೂ ಆಡಲಿದ್ದು ಹೆಚ್ಚು ರನ್‌ ಗಳಿಸಿದ ಆಟಗಾರ ಎನಿಸಿಕೊಳ್ಳಲು ಇಬ್ಬರಿಗೂ ಸಮಾನ ಅವಕಾಶವಿದೆ. ಈ ಪಟ್ಟಿಯಲ್ಲಿ ಪಾಕಿಸ್ತಾನದ ಭರವಸೆಯ ಆಟಗಾರ ಬಾಬರ್‌ ಅಜಂ ಮೂರನೇ ಸ್ಥಾನದಲ್ಲಿದ್ದಾರೆ. ಅವರು ಒಟ್ಟು 1,820 ರನ್‌ ಗಳಿಸಿದ್ದಾರೆ.

ವಿರಾಟ್‌ ಕೊಹ್ಲಿ 2016ರಲ್ಲಿ 2,595 ರನ್‌, 2017ರಲ್ಲಿ 2,818ರನ್‌ ಹಾಗೂ 2018ರಲ್ಲಿ 2,735 ರನ್‌ ಕಲೆ ಹಾಕಿದ್ದರು.

ಮಾತ್ರವಲ್ಲದೆ ರೋಹಿತ್‌ ಹಾಗೂ ವಿರಾಟ್‌ ಚುಟುಕು ಮಾದರಿಯಲ್ಲಿ ಇದುವರೆಗೆ ಒಟ್ಟು 22 ಬಾರಿ ಐವತ್ತಕ್ಕಿಂತ ಹೆಚ್ಚು ರನ್‌ ಗಳಿಸಿದ್ದಾರೆ. ಈ ಪಟ್ಟಿಯಲ್ಲಿಯೂ ತಮ್ಮ ದಾಖಲೆ ಉತ್ತಮ ಪಡಿಸಿಕೊಳ್ಳಲು ಅವಕಾಶವಿದೆ.

200 ಸಿಕ್ಸರ್‌ಗಳ ಹೊಸ್ತಿಲ್ಲಲಿ ವಿರಾಟ್, 400ರ ಸನಿಹ ರೋಹಿತ್
ನಾಯಕ ಕೊಹ್ಲಿ ಹಾಗೂ ರೋಹಿತ್‌ ಶರ್ಮಾ ತಲಾ ಒಂದೊಂದು ಸಿಕ್ಸರ್ ಸಿಡಿಸಿದರೆ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಕ್ರಮವಾಗಿ 200 ಮತ್ತು 400 ಸಿಕ್ಸರ್‌ ಸಿಡಿಸಿದ ಆಟಗಾರರ ಪಟ್ಟಿಗೆ ಸೇರ್ಪಡೆಗೊಳ್ಳಲಿದ್ದಾರೆ.

ಇದನ್ನೂ ಓದಿ: 400 ಸಿಕ್ಸರ್ ಸಿಡಿಸಿದವರ ಪಟ್ಟಿ ಸೇರಲು ರೋಹಿತ್ ಶರ್ಮಾಗೆ ಬೇಕು ಇನ್ನೊಂದು ಸಿಕ್ಸ್‌

ರೋಹಿತ್‌ ಶರ್ಮಾ ಟೆಸ್ಟ್ ಕ್ರಿಕೆಟ್‌ನಲ್ಲಿ 52, ಏಕದಿನ ಪಂದ್ಯಗಳಲ್ಲಿ 232 ಮತ್ತು ಟಿ20ಯಲ್ಲಿ 115 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ.

ಭಾರತ ಪರ ಮಹೇಂದ್ರ ಸಿಂಗ್‌ ಧೋನಿ (359), ಸಚಿನ್ ತೆಂಡೂಲ್ಕರ್ (264), ಸೌರವ್ ಗಂಗೂಲಿ (247), ವೀರೇಂದ್ರ ಸೆಹ್ವಾಗ್ (243) ಮತ್ತು ಯುವರಾಜ್ ಸಿಂಗ್ (251) ಅವರು ಇನ್ನೂರು ಸಿಕ್ಸರ್ ಸಿಡಿಸಿದ ಸಾಧನೆ ಮಾಡಿದ್ದಾರೆ.

ಈ ಪಟ್ಟಿಯ ಮೊದಲ ಸ್ಥಾನದಲ್ಲಿ ವಿಂಡೀಸ್‌ನ ಕ್ರಿಸ್‌ ಗೇಲ್ (534) ಮತ್ತು ಎರಡನೇ ಸ್ಥಾನದಲ್ಲಿ ಶಾಹೀದ್ ಆಫ್ರಿದಿ (476) ಇದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು