ಮಂಗಳವಾರ, ಜನವರಿ 28, 2020
19 °C
ಮೂರನೇ ಏಕದಿನ ಕ್ರಿಕೆಟ್‌ ಪಂದ್ಯ

ಪೂರನ್‌ –ಪೊಲಾರ್ಡ್‌ ಅರ್ಧ ಶತಕ: ಭಾರತದ ಗೆಲುವಿಗೆ 316 ರನ್ ಗುರಿ ನೀಡಿದ ವಿಂಡೀಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಟಕ್ (ಒಡಿಶಾ): ಭಾರತ ವಿರುದ್ಧದ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ಬೃಹತ್‌ ಮೊತ್ತ ಪೇರಿಸಿದೆ. 

‌ಇಲ್ಲಿನ ಬಾರಾಬತಿ ಕ್ರೀಡಾಂಗಣದಲ್ಲಿ ಭಾನುವಾರ ನಡೆಯುತ್ತಿರುವ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ವೆಸ್ಟ್‌ ಇಂಡೀಸ್‌ 50 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು 315 ರನ್‌ ಗಳಿಸಿದೆ. 

ಆರಂಭಿಕ ಆಟಗಾರರಾದ ಎವಿನ್‌ ಲೂಯಿಸ್‌ (21), ಶಾಯ್‌ ಹೋಪ್‌ (42) ರನ್‌ ಗಳಿಸಿ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು. 14ನೇ ಓವರ್‌ನಲ್ಲಿ ಎವಿನ್‌ ಲೂಯಿಸ್‌, ರವೀಂದ್ರ ಜಡೇಜಗೆ ವಿಕೆಟ್‌ ಒಪ್ಪಿಸಿದರು. ಇತ್ತ 19ನೇ ಓವರ್‌ನಲ್ಲಿ ಶಾಯ್‌ ಹೋಪ್‌ ವಿಕೆಟ್‌ ಪಡೆಯುವಲ್ಲಿ ಮೊಹಮ್ಮದ್‌ ಶಮಿ ಯಶಸ್ವಿಯಾದರು. 

ಬಳಿಕ ಕ್ರೀಸ್‌ಗೆ ಬಂದ ರಾಸ್ಟನ್‌ ಚೇಸ್‌ (38), ಶಿಮ್ರೊನ್‌ ಹೆಟ್ಮೆಯರ್‌ (37) ರನ್‌ ಕಲೆ ಹಾಕುವ ಮೂಲಕ ತಂಡದ ಮೊತ್ತ ಹೆಚ್ಚಾಗಲು ಕಾರಣರಾದರು. ದೀಪಕ್ ಚಾಹರ್‌ ಬದಲು ತಂಡದಲ್ಲಿ ಸ್ಥಾನ ಪಡೆದಿರುವ ನವದೀಪ್‌ ಸೈನಿ, ರಾಸ್ಟನ್‌ – ಶಿಮ್ರೊನ್‌ ಜೋಡಿಯ ಆಟಕ್ಕೆ ತಡೆವೊಡ್ಡಿದರು.

ಬಳಕ ಆಟ ಮುಂದುವರಿಸಿದ ನಾಯಕ ಕೀರನ್‌ ಪೊಲಾರ್ಡ್‌ ಔಟಾಗದೆ 74 ರನ್‌ ಗಳಿಸಿದರು. ಇತ್ತ ನಿಕೋಲಸ್‌ ಪೂರನ್‌ 89 ರನ್‌ ಗಳಿಸಿ ಅಬ್ಬರಿಸಿದರು. 

ಭಾರತದ ಪರ: ನವದೀಪ್‌ ಸೈನಿ 2, ರವೀಂದ್ರ ಜಡೇಜ 1, ಮೊಹಮ್ಮದ್‌ ಶಮಿ 1, ಶಾರ್ದುಲ್‌ ಠಾಕೂರ್‌ 1 ವಿಕೆಟ್‌ ಪಡೆದು ಮಿಂಚಿದರು. 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು