ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏಕದಿನ ಕ್ರಿಕೆಟ್ | 2019ರಲ್ಲಿ ಹೆಚ್ಚು ರನ್: ಕೊಹ್ಲಿಯನ್ನು ಹಿಂದಿಕ್ಕಿದ ರೋಹಿತ್

ಸತತ 3ನೇ ವರ್ಷ ದಾಖಲೆ ಬರೆಯಲು ಹೊರಟ ನಾಯಕನಿಗೆ ಅಡ್ಡಿಯಾದ ಉಪನಾಯಕ
Last Updated 18 ಡಿಸೆಂಬರ್ 2019, 13:12 IST
ಅಕ್ಷರ ಗಾತ್ರ

ವಿಶಾಖಪಟ್ಟಣ: 2017 ಹಾಗೂ 2018ರಲ್ಲಿ ಏಕದಿನಕ್ರಿಕೆಟ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ ಎನಿಸಿದ್ದ ಟೀಂ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಓಟಕ್ಕೆ,ಉಪನಾಯಕ ರೋಹಿತ್‌ ಶರ್ಮಾ ಅಡ್ಡಿಯಾದರು.

ವಿಂಡೀಸ್‌ ವಿರುದ್ಧದ ಸರಣಿಯ ಎರಡನೇ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸಿದ ರೋಹಿತ್, ಈ ವರ್ಷ ಆಡಿರುವ27 ಪಂದ್ಯಗಳಿಂದ 1427 ರನ್ ಕಲೆಹಾಕಿದ ಸಾಧನೆ ಮಾಡಿದರು.ಈ ‍ಪಂದ್ಯಕ್ಕೂ ಮುನ್ನ ಕೊಹ್ಲಿ25 ಪಂದ್ಯಗಳಿಂದ 1292 ರನ್‌ ಕಲೆಹಾಕಿದ್ದರು. ರೋಹಿತ್‌ ಶರ್ಮಾ ಖಾತೆಯಲ್ಲಿ 1,268‬ ರನ್‌ ಗಳಿದ್ದವು.

ಈ ಪಂದ್ಯದಲ್ಲಿ ರೋಹಿತ್‌ 159 ರನ್‌ ಗಳಿಸಿದರೆ, ಶೂನ್ಯಕ್ಕೆ ಔಟಾದ ಕೊಹ್ಲಿ ಹಿಂದೆ ಬಿದ್ದರು.

ಕೊಹ್ಲಿ 2017ರಲ್ಲಿ 1,460 ರನ್‌ ಹಾಗೂ 2018ರಲ್ಲಿ1,202 ರನ್‌ ಕಲೆಹಾಕಿದ್ದರು. ಈ ಎರಡೂ ವರ್ಷ ರೋಹಿತ್‌ ಶರ್ಮಾ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ಅವರು ಕ್ರಮವಾಗಿ1293 ಮತ್ತು 1030 ರನ್ ಗಳಿಸಿದ್ದರು.

ಸರಣಿಯ ಮೂರನೇ ಪಂದ್ಯ ಬಾಕಿ ಇದ್ದು, ಅದು ವರ್ಷಾಂತ್ಯದಲ್ಲಿ ಈ ಇಬ್ಬರೂ ಬ್ಯಾಟ್ಸ್‌ಮನ್‌ಗಳು ಆಡುವ ಕೊನೆಯ ಏಕದಿನ ಪಂದ್ಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT