ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಶಕದಲ್ಲಿ ದಾಖಲೆ ರನ್‌ ಗಳಿಸಿದ ಟೀಂ ಇಂಡಿಯಾ ನಾಯಕ ಕೊಹ್ಲಿ

Last Updated 15 ಆಗಸ್ಟ್ 2019, 6:54 IST
ಅಕ್ಷರ ಗಾತ್ರ

ಪೋರ್ಟ್ ಆಫ್ ಸ್ಪೇನ್: ವೆಸ್ಟ್‌ಇಂಡೀಸ್‌ ವಿರುದ್ಧ ಬುಧವಾರ ಕೊನೆಗೊಂಡ ಏಕದಿನ ಸರಣಿಯ ಕೊನೇ ಪಂದ್ಯದಲ್ಲಿ ಟೀಂ ಇಂಡಿಯಾದ ನಾಯಕ ವಿರಾಟ್‌ ಕೊಹ್ಲಿ 114 ರನ್‌ ಸಿಡಿಸಿ ಮಿಂಚಿದರು. ಆದರೆ, ಈ ಪಂದ್ಯದಲ್ಲಿ ಗಮನಿಸಲೇಬೇಕಾದ್ದು ಕೊಹ್ಲಿ ಶತಕವಲ್ಲ ಬದಲಿಗೆ ಈ ಪಂದ್ಯದ ಮೂಲಕ ಅವರು ಸೃಷ್ಟಿ ಮಾಡಿದ ದಾಖಲೆಯನ್ನು!

ಒಂದು ದಶಕದಲ್ಲಿ 20000 ರನ್‌ಗಳನ್ನು ಸಿಡಿಸಿದ ಏಕೈಕ ಬ್ಯಾಟ್ಸ್‌ಮನ್‌ ಎಂಬ ಕೀರ್ತಿಗೆವಿರಾಟ್‌ ಕೊಹ್ಲಿ ಪಾತ್ರರಾದರು. ಈ ದಾಖಲೆ ಬರೆಯಲು ಕೊಹ್ಲಿಗೆ ನೆರವಾಗಿದ್ದು ವೆಸ್ಟ್‌ಇಂಡೀಸ್‌ ವಿರುದ್ಧದ ಬುಧವಾರದ ಪಂದ್ಯ.

ವಿರಾಟ್‌ ಕೊಹ್ಲಿ ಅವರು ಕ್ರಿಕೆಟ್‌ನ ಮೂರೂ ಪ್ರಕಾರಗಳಲ್ಲಿ ಒಟ್ಟಾರೆ 20,502 ರನ್‌ಗಳನ್ನು (ಟೆಸ್ಟ್‌–6613, ಏಕದಿನ–11520, ಟಿ20–2369) ತಮ್ಮ ಖಾತೆಯಲ್ಲಿಟ್ಟುಕೊಂಡಿದ್ದಾರೆ. ಈ ಪೈಕಿ 20018 ರನ್‌ಗಳನ್ನು ಅವರು ಈ ಒಂದು ದಶಕದಲ್ಲೇ ಗಳಿಸಿಕೊಂಡಿದ್ದಾರೆ. ಕೊಹ್ಲಿ ಟೆಸ್ಟ್‌ ಮತ್ತು ಟಿ20ಗೆ ಪದಾರ್ಪಣೆ ಮಾಡಿದ್ದು 2010ರಲ್ಲಿ. ಆದರೆ, 2008ರಲ್ಲೇ ಏಕದಿನ ಕ್ರಿಕೆಟ್‌ಗೆ ಕಾಲಿಟ್ಟಿದ್ದರಿಂದ ಅವರ ರನ್‌ ಖಾತೆಯಲ್ಲಿ 485 ರನ್‌ಗಳಿದ್ದವು.

ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ರಿಕಿ ಪಾಂಟಿಂಗ್‌ ಅವರು 2000ರಲ್ಲಿ ಇಂಥದ್ದೇ ದಾಖಲೆ ಬರೆದಿದ್ದರು. 10 ವರ್ಷಗಳ ಅವಧಿಯಲ್ಲಿ 18962ರನ್‌ ಗಳಿಸು ಮೂಲಕ ದಶಕದಲ್ಲೇ ಅತಿಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ ಎಂಬ ದಾಖಲೆ ಬರೆದಿದ್ದರು. ಅದೇ ವರ್ಷ ದಕ್ಷಿಣ ಆಫ್ರಿಕಾದ ಬ್ಯಾಟ್ಸಮನ್‌ ಜಾಕ್‌ ಕಾಲಿಸ್‌ ಅವರೂ 16777ರನ್‌ ಗಳಿಸಿ ರಿಕಿಪಾಂಟಿಂಗ್‌ ನಂತರದ ಸ್ಥಾನ ಪಡೆದಿದ್ದರು. ಸದ್ಯ ದಶಕದಲ್ಲೇ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟ್ಸ್‌ಮನ್‌ಗಳ ಪಟ್ಟಿಯಲ್ಲಿ ಈಗ ಕೊಹ್ಲಿ ಅಗ್ರ ಸ್ಥಾನದಲ್ಲಿದ್ದಾರೆ.

ಈ ಪಟ್ಟಿಯಲ್ಲಿ ಸಚಿನ್‌ ತೆಂಡೂಲ್ಕರ್‌ ಅವರು 6ನೇ ಸ್ಥಾನದಲ್ಲಿದ್ದಾರೆ. ಒಂದು ದಶಕದಲ್ಲಿ 15962ರನ್‌ ಗಳಿಸಿದ್ದೇ ಅವರ ದಾಖಲೆಯಾಗಿ ಉಳಿದಿದೆ. ಇದನ್ನು 2000ನೇ ಇಸವಿಯಲ್ಲಿ ಸಚಿನ್‌ ಸಾಧಿಸಿದ್ದರು.

ಸದ್ಯ, ವಿರಾಟ್‌ ಕೊಹ್ಲಿ ಅವರು ಕ್ರಿಕೆಟ್‌ನ ಎಲ್ಲ ಪ್ರಕಾರಳಿಂದಲೂ 77 ಶತಗಳನ್ನೂ ಸಿಡಿಸಿದ್ದು, ಸಚಿನ್‌ರ ದಾಖಲೆ ಮುರಿಯುವತ್ತ ದಾಪುಗಾಲಿಟ್ಟಿದ್ದಾರೆ. ಸಚಿನ್‌ ದಾಖಲೆ ಮುರಿಯಲು ಕೊಹ್ಲಿಗೆ ಇನ್ನು 23 ಶತಗಳ ಅಗತ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT