ಪರ್ತ್: ಏಕದಿನ ಸರಣಿಯಲ್ಲಿ 0–3 ಮುಖಭಂಗ ಅನುಭವಿಸಿದ ಭಾರತ ತಂಡ, ಶುಕ್ರವಾರ ಆರಂಭವಾಗುವ ಮಹಿಳೆಯರ ಏಕೈಕ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ. ಈ ಹಗಲು–ರಾತ್ರಿ (ಪಿಂಕ್ಬಾಲ್) ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಅನುಭವಿ ಆಟಗಾರ್ತಿಯರಿಂದ ಉತ್ತಮ ಆಟ ನಿರೀಕ್ಷಿಸುತ್ತಿದೆ.

ಭಾರತ ಸುಮಾರು ಐದು ವರ್ಷಗಳ ನಂತರ ಹೊರದೇಶದಲ್ಲಿ ಟೆಸ್ಟ್ ಪಂದ್ಯ ಆಡುತ್ತಿದೆ. ಭಾರತ ವನಿತಾ ತಂಡವು ಕೊನೆಯ ಐದು ಟೆಸ್ಟ್ ಪಂದ್ಯಗಳಲ್ಲಿ ಅಜೇಯರಾಗಿ ಉಳಿದಿದೆ. ಡಿಸೆಂಬರ್ 2023 ರಿಂದ 2024ರ ಜುಲೈ ನಡುವೆ ಸತತ ಮೂರು ಟೆಸ್ಟ್ಗಳನ್ನು ಗೆದ್ದುಕೊಂಡಿದೆ. ಇಂಗ್ಲೆಂಡ್, ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ಎದುರು ಜಯಗಳಿಸಿತ್ತು. ಎಲ್ಲವೂ ತವರು ನೆಲದಲ್ಲಿ.

2021ರಲ್ಲಿ ಭಾರತ ತಂಡವು ಕೊನೆಯ ಬಾರಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ನೆಲದಲ್ಲಿ ಆಡಿದ್ದ ಟೆಸ್ಟ್ ಪಂದ್ಯಗಳು ಡ್ರಾ ಆಗಿದ್ದವು.

ಪಿಂಕ್ಬಾಲ್ ಟೆಸ್ಟ್ನೊಡನೆ ಆಸ್ಟ್ರೇಲಿಯಾ ವಿರುದ್ಧದ ಭಾರತದ ಬಹುಮಾದರಿ ಸರಣಿ ಮುಕ್ತಾಯಗೊಳ್ಳಲಿದೆ. ಈ ಪ್ರವಾಸದಲ್ಲಿ ಮೊದಲು ನಡೆದ ಟಿ20 ಸರಣಿಯನ್ನು ಭಾರತ 2–1 ರಿಂದ ಗೆದ್ದುಕೊಂಡಿತ್ತು. ಆದರೆ ಆಸ್ಟ್ರೇಲಿಯಾ ಏಕದಿನ ಸರಣಿಯನ್ನು 3–0 ಯಿಂದ ಗೆದ್ದಿತ್ತು. ಆಸ್ಟ್ರೇಲಿಯಾ ಈಗ 8–4 ಪಾಯಿಂಟ್ಗಳಿಂದ ಮುಂದಿದೆ.

ಟಿ20 ಮತ್ತು ಏಕದಿನ ಮಾದರಿಯ ಪ್ರತಿ ಪಂದ್ಯದ ಗೆಲುವಿಗೆ ಎರಡು ಪಾಯಿಂಟ್ಗಳನ್ನು ನೀಡಲಾಗುತ್ತದೆ. ಟೆಸ್ಟ್ ಪಂದ್ಯ ಗೆದ್ದ ತಂಡ 4 ಪಾಯಿಂಟ್ ಪಡೆಯಲಿದೆ. ಈ ಏಕೈಕ ಟೆಸ್ ಡ್ರಾ ಆದಲ್ಲಿ ಆಸ್ಟ್ರೇಲಿಯಾ ‘ಸರಣಿ’ ಗೆಲ್ಲಲಿದೆ.

2023ರಲ್ಲಿ ಆಸ್ಟ್ರೇಲಿಯಾ ವಿರುದ್ಧ ವಾಂಖೆಡೆಯಲ್ಲಿ ಟೆಸ್ಟ್ ಪಂದ್ಯ ಗೆದ್ದ ನಂತರ ಭಾರತದ ವಿಶ್ವಾಸ ವೃದ್ಧಿಸಿದೆ.

ತಂಡದಲ್ಲಿ ನಾಯಕಿ ಹರ್ಮನ್ಪ್ರೀತ್ ಕೌರ್, ಉಪನಾಯಕಿ ಸ್ಮೃತಿ ಮಂದಾನ, ಶಫಾಲಿ ವರ್ಮಾ, ಜೆಮಿಮಾ ರಾಡ್ರಿಗಸ್, ದೀಪ್ತಿ ಶರ್ಮಾ ಸೇರಿದಂತೆ ಅನುಭವಿಗಳ ಪಡೆಯಿದೆ. ಆರಂಭ ಆಟಗಾರ್ತಿ ಪ್ರತಿಕಾ ಅವರು ಟೆಸ್ಟ್ಗೆ ಪದಾರ್ಪಣೆ ಮಾಡುವ ನಿರೀಕ್ಷೆಯಿದೆ.

ಈ ಏಕೈಕ ಟೆಸ್ಟ್ಗೆ ಆಯ್ಕೆ ಮಾಡಿರುವ ತಂಡದಲ್ಲಿ ಏಳು ‘ಅನ್ಕ್ಯಾಪ್ಡ್’ ಆಟಗಾರ್ತಿಯರಿದ್ದಾರೆ. ಇವರಲ್ಲಿ ಎಡಗೈ ಸ್ಪಿನ್ನರ್ ವೈಷ್ಣವಿ ಶರ್ಮಾ ಜೊತೆಗೆ ಕ್ರಾಂತಿ ಗೌಡ, ಸಯಾಲಿ ಸಾತ್ಗರೆ, ಕಶ್ವಿ ಗೌತಮ್ ಒಳಗೊಂಡಿದ್ದಾರೆ. ಕ್ರಾಂತಿ ಮತ್ತು ಅಮನ್ಜೋತ್ ಕೌರ್ ಅವರು ಶುಕ್ರವಾರ ಟೆಸ್ಟ್ಗೆ ಪದಾರ್ಪಣೆ ಮಾಡುವ ಸಾಧ್ಯತೆಯಿದೆ.

ಮಧ್ಯಮ ವೇಗಿ ರೇಣುಕಾ ಸಿಂಗ್ ಅವರು ಕಾರ್ಯಭಾರ ನಿರ್ವಹಣೆ ಭಾಗವಾಗಿ ಈ ಪಂದ್ಯಕ್ಕೆ ಅಲಭ್ಯರಾಗಿದ್ದು ಅವರ ಸ್ಥಾನಕ್ಕೆ ಕಶ್ವಿ ಗೌತಮ್ ತಂಡಕ್ಕೆ ಸೇರ್ಪಡೆಯಾಗಿದ್ದಾರೆ.

ಆಸ್ಟ್ರೇಲಿಯಾ ತಂಡದ ನಾಯಕಿ ಅಲಿಸಾ ಹೀಲಿ ಅವರ ಪಾಲಿಗೆ ಇದು ವಿದಾಯ ಟೆಸ್ಟ್ ಪಂದ್ಯವಾಗಿದೆ. ಇದು ಅವರು ಆಡಲಿರುವ 299ನೇ ಹಾಗೂ ಕೊನೆಯ ಅಂತರರಾಷ್ಟ್ರೀಯ ಪಂದ್ಯ.

ಪಂದ್ಯ ಆರಂಭ: ಬೆಳಿಗ್ಗೆ 10.50 (ಭಾರತೀಯ ಕಾಲಮಾನ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.