ಬೆನೋನಿ (ಪಿಟಿಐ): 156 ರನ್ಗಳ ಸಾಧಾರಣ ಗುರಿ ಬೆನ್ನಟ್ಟುವಲ್ಲಿ ಭಾರತ ಮಹಿಳೆಯರ ತಂಡ ಮತ್ತೊಮ್ಮೆ ಬ್ಯಾಟಿಂಗ್ ವೈಫಲ್ಯ ಅನುಭವಿಸಿತು. ನಾಯಕಿ ಲಾರಾ ವೋಲ್ವಾರ್ಟ್ ಅವರ ಅಜೇಯ 92 (56ಎ) ರನ್ಗಳ ನೆರವಿನಿಂದ ದಕ್ಷಿಣ ಆಫ್ರಿಕಾ 23 ರನ್ಗಳ ಭರ್ಜರಿ ಗೆಲುವು ಸಾಧಿಸಿತು. ಇದರೊಂದಿಗೆ ಐದು ಪಂದ್ಯಗಳ ಟಿ20 ಸರಣಿಯನ್ನು ಆತಿಥೇಯ ತಂಡವು 4-1 ಅಂತರದಿಂದ ವಶಪಡಿಸಿಕೊಂಡಿತು.

ಮೊದಲ ಮೂರು ಪಂದ್ಯಗಳನ್ನು ದಕ್ಷಿಣ ಆಫ್ರಿಕಾ ಗೆದ್ದಿತ್ತು. ನಾಲ್ಕನೇ ಪಂದ್ಯವನ್ನು ಆಲ್ರೌಂಡರ್ ದೀಪ್ತಿ ಶರ್ಮಾ ಅವರ ಆಟದ ನೆರವಿನಿಂದ ಭಾರತ ಜಯಿಸಿತ್ತು. ಗೆಲುವಿನೊಂದಿಗೆ ಅಭಿಯಾನ ಮುಗಿಸುವ ನಿರೀಕ್ಷೆಯಲ್ಲಿದ್ದ ಹರ್ಮನ್ಪ್ರೀತ್ ಕೌರ್ ಪಡೆಗೆ ನಿರಾಸೆಯಾಯಿತು.

ಟಾಸ್ ಗೆದ್ದ ಆತಿಥೇಯ ತಂಡ ಬ್ಯಾಟಿಂಗ್ ಆಯ್ದುಕೊಂಡು, 6 ವಿಕೆಟ್ಗೆ 155 ರನ್ ಪೇರಿಸಿತು. ಇದಕ್ಕೆ ಉತ್ತರವಾಗಿ ಭಾರತ 8 ವಿಕೆಟ್ಗೆ 132 ರನ್ ಗಳಿಸಿ ಹೋರಾಟ ಮುಗಿಸಿತು.

ತಂಡವು 38 ರನ್ ಗಳಿಸುವಷ್ಟ ರಲ್ಲಿ ಶಫಾಲಿ ವರ್ಮಾ (4), ಅನುಷ್ಕಾ ಶರ್ಮಾ (17) ಮತ್ತು ಜೆಮಿಮಾ ರಾಡ್ರಿಗಸ್ (1) ಪೆವಿಲಿಯನ್ ಸೇರಿದರು. ಹರ್ಮನ್ಪ್ರೀತ್ (22), ಭಾರತಿ ಫುಲ್ಮಾಲಿ (40) ಮತ್ತು ರಿಚಾ ಘೋಷ್ (ಔಟಾಗದೇ 25) ಕೊಂಚ ಹೋರಾಟ ತೋರಿದರೂ ಗೆಲುವಿಗೆ ಸಾಕಾಗಲಿಲ್ಲ.

ವೋಲ್ವಾರ್ಟ್ ಅಬ್ಬರ: ದಕ್ಷಿಣ ಆಫ್ರಿಕಾದ ಆರಂಭಿಕ ಜೋಡಿ ವೋಲ್ವಾರ್ಟ್ ಮತ್ತು ಸುನೆ ಲೂಸ್ (23) ಅವರು ಮೊದಲ ವಿಕೆಟ್ಗೆ 75 ರನ್ (54ಎ) ಸೇರಿಸಿ ಉತ್ತಮ ಆರಂಭ ಒದಗಿಸಿದರು. ಈ ಜೊತೆಯಾಟವನ್ನು ಶ್ರೀಚರಣಿ ಮುರಿದರು. ಸುನೆ ಅವರನ್ನು ವಿಕೆಟ್ ಕೀಪರ್ ಸ್ಟಂಪ್ ಔಟ್ ಮಾಡಿದರು.

ನಂತರ ಒಂದೆಡೆ ನಿಯಮಿತವಾಗಿ ವಿಕೆಟ್ಗಳು ಉರುಳಿದರೆ, ಮತ್ತೊಂದೆಡೆ ವೋಲ್ವಾರ್ಟ್ ಜವಾಬ್ದಾರಿಯುತವಾಗಿ ಆಡಿದರು. ಅವರ ಇನಿಂಗ್ಸ್ನಲ್ಲಿ 11 ಬೌಂಡರಿ ಮತ್ತು ಎರಡು ಸಿಕ್ಸರ್ಗಳಿದ್ದವು. ಕೇವಲ ಎಂಟು ರನ್ಗಳಿಂದ ಶತಕ ವಂಚಿತರಾದರು. ಅಮೋಘ ಲಯದಲ್ಲಿರುವ ಅವರು ಈ ಸರಣಿಯಲ್ಲಿ ಒಂದು ಶತಕ ಮತ್ತು ಮೂರು ಅರ್ಧಶತಕ ಸೇರಿದಂತೆ 330 ರನ್ ಪೇರಿಸಿದ್ದಾರೆ.

ಅವರು ಪಂದ್ಯದ ಮತ್ತು ಸರಣಿಯ ಆಟಗಾರ್ತಿ ಗೌರವಕ್ಕೂ ಪಾತ್ರರಾದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-43-1263831965

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.