ಜೋಹಾನೆಸ್ಬರ್ಗ್ : ಭಾರತ ಮಹಿಳಾ ಕ್ರಿಕೆಟ್ ತಂಡವು ವರ್ಷಾಂತ್ಯದಲ್ಲಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿ ಒಂದು ಟೆಸ್ಟ್ ಮತ್ತು ಮೂರು ಪಂದ್ಯಗಳ ಏಕದಿನ ಸರಣಿಯನ್ನು ಆಡಲಿದೆ.

ಡಿ.9ರಿಂದ 15ರವರೆಗೆ ಮೂರು ಏಕದಿನ ಪಂದ್ಯಗಳು ಕ್ರಮವಾಗಿ ಪೊಚೆಫ್ಸ್ಟ್ರೂಮ್, ಬ್ಲೋಮ್ಫಾಂಟೈನ್ ಮತ್ತು ಕೇಪ್ಟೌನ್ನಲ್ಲಿ ನಡೆಯಲಿವೆ. ಟೆಸ್ಟ್ ಪಂದ್ಯವು ಡಿ.20ರಿಂದ 23ರವರೆಗೆ ಗೆಬೆರ್ಹಾದಲ್ಲಿ ಆಯೋಜಿಸಲಾಗಿದೆ ಎಂದು ಕ್ರಿಕೆಟ್ ದಕ್ಷಿಣ ಆಫ್ರಿಕಾ (ಸಿಎಸ್ಎ) ಶುಕ್ರವಾರ ತಿಳಿಸಿದೆ.

ಉಭಯ ರಾಷ್ಟ್ರಗಳ ನಡುವೆ ನಾಲ್ಕನೇ ಟೆಸ್ಟ್ ಪಂದ್ಯ ಇದಾಗಿದೆ. ‘ಫ್ರೆಂಡ್ಲಿ ಸಿಟಿ’ಯಲ್ಲಿ ನಡೆಯುತ್ತಿರುವ ಎರಡನೇ ಮಹಿಳಾ ಟೆಸ್ಟ್ ಪಂದ್ಯವಾಗಿದೆ. ಗೆಬೆರ್ಹಾದಲ್ಲಿ ಮೊದಲ ಪಂದ್ಯವು 1960ರ ಡಿಸೆಂಬರ್ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್ ನಡುವೆ ನಡೆದಿತ್ತು.

ಆಸ್ಟ್ರೇಲಿಯಾ ಮಹಿಳಾ ತಂಡವು 2027ರ ಮಾರ್ಚ್ 18ರಿಂದ ಏಪ್ರಿಲ್ 11ರವರೆಗೆ ಮೂರು ಟಿ20, ಅಷ್ಟೇ ಏಕದಿನ ಪಂದ್ಯಗಳಿಗೆ ಮತ್ತು ಒಂದು ಟೆಸ್ಟ್ ಪಂದ್ಯಕ್ಕಾಗಿ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಳ್ಳಲಿದೆ.

ಮಾರ್ಚ್ 18ರಿಂದ 23ರವರೆಗೆ ಕ್ರಮವಾಗಿ ಕಿಂಬರ್ಲಿ, ಬೆನೋನಿ ಮತ್ತು ಕುಗೊಂಪೊ ಸಿಟಿಯಲ್ಲಿ ಟಿ20 ಪಂದ್ಯಗಳು ನಡೆಯಲಿವೆ. ನಂತರ ಮಾರ್ಚ್ 27, ಮಾರ್ಚ್ 31 ಮತ್ತು ಏಪ್ರಿಲ್ 3ರಂದು ಕ್ರಮವಾಗಿ ಗ್ಕೆಬೆರ್ಹಾ, ಪರ್ಲ್ ಮತ್ತು ಡರ್ಬನ್ನಲ್ಲಿ ಏಕದಿನ ಪಂದ್ಯಗಳು ಆಯೋಜನೆಗೊಂಡಿವೆ.

ಏಪ್ರಿಲ್ 8ರಿಂದ 11ರವರೆಗೆ ವಾಯುವ್ಯ ಪ್ರಾಂತ್ಯದ ಜೆ.ಬಿ. ಮಾರ್ಕ್ಸ್ ಓವಲ್ನಲ್ಲಿ ನಡೆಯುವ ಟೆಸ್ಟ್ ಪಂದ್ಯದೊಂದಿಗೆ ಪ್ರವಾಸವು ಮುಕ್ತಾಯಗೊಳ್ಳಲಿದೆ.

ಭಾರತದ ವೇಳಾಪಟ್ಟಿ (ದಕ್ಷಿಣ ಆಫ್ರಿಕಾ ಪ್ರವಾಸ)

ಪಂದ್ಯ;ತಾಣ;ದಿನಾಂಕ

ಮೊದಲ ಏಕದಿನ;ಪೊಚೆಫ್ಸ್ಟ್ರೂಮ್;ಡಿ.9

ಎರಡನೇ ಏಕದಿನ;ಬ್ಲೋಮ್ಫಾಂಟೈನ್;ಡಿ.12

ಮೂರನೇ ಏಕದಿನ;ಕೇಪ್ಟೌನ್;ಡಿ.15

ಟೆಸ್ಟ್ ಪಂದ್ಯ;ಗೆಬೆರ್ಹಾ;ಡಿ.20–23

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.